ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಗೆ ಖುಷಿ ಸುದ್ದಿ: ಚಿನ್ನದ ದರದಲ್ಲಿ ಕೊಂಚ ಇಳಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಕೆಲವು ದಿನಗಳಿಂದ ಗ್ರಾಹಕರ ಕಿಸೆಗೆ ಮತ್ತಷ್ಟು ಭಾರವಾಗುತ್ತಿದ್ದ ಹಳದಿ ಲೋಹ, ಕೊನೆಗೂ ಮಂಗಳವಾರ ಕರುಣೆ ತೋರಿಸಿದೆ. ದೇಶದ ಬಹುತೇಕ ನಗರಗಳಲ್ಲಿ ಮಾರ್ಚ್ 16 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಮಂಗಳವಾರ ಚಿನ್ನದ ಬೆಲೆಯಲ್ಲಿ ಸುಮಾರು 300 ರೂಪಾಯಿಯಷ್ಟು ಇಳಿಕೆಯಾಗಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಎರಡರಲ್ಲಿಯೂ ಕುಸಿತವಾಗಿದೆ. ಆದರೆ ಇದು ಎಲ್ಲ ನಗರಗಳಿಗೂ ಅನ್ವಯಿಸುವುದಿಲ್ಲ. ಕೆಲವು ನಗರಗಳಲ್ಲಿ ಚಿನ್ನದ ದರ ಸೋಮವಾರದ ಮಟ್ಟವನ್ನೇ ಕಾಯ್ದುಕೊಂಡಿದೆ.

 ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕಡಿಮೆ ಹೂಡಿಕೆ ಮಾಡಿದವರಿಗೆ ಲಾಟರಿ ! ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕಡಿಮೆ ಹೂಡಿಕೆ ಮಾಡಿದವರಿಗೆ ಲಾಟರಿ !

ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಯು ಮಂಗಳವಾರ ಪ್ರತಿ ಗ್ರಾಂಗೆ 3 ರೂಪಾಯಿಯಂತೆ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 43,840 ರೂಪಾಯಿಗೆ ತಲುಪಿದೆ. ಇದು ದೇಶದ ಒಟ್ಟಾರೆ ಚಿನ್ನದ ಬೆಲೆಯಾಗಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ಹಳದಿ ಲೋಹದ ಮೇಲಿನ ತೆರಿಗೆ ವಿಭಿನ್ನವಾಗಿರುವುದರಿಂದ ಪ್ರಮುಖ ನಗರಗಳಲ್ಲಿ ಅದರ ದರದಲ್ಲಿ ವ್ಯತ್ಯಾಸವಿದೆ.

ದೆಹಲಿಯಲ್ಲಿ ಬೆಲೆ

ದೆಹಲಿಯಲ್ಲಿ ಬೆಲೆ

ಹಳದಿ ಲೋಹದ ಬೆಲೆ ದೆಹಲಿಯಲ್ಲಿ ಹತ್ತು ರೂಪಾಯಿಯಷ್ಟು ಅಲ್ಪ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,160 ರೂ ದಿಂದ 44,150ಕ್ಕೆ ಇಳಿಕೆಯಾಗಿದೆ. ಹಾಗೆಯೇ 24 ಕ್ಯಾರಟ್ ಚಿನ್ನ ಬೆಲೆ ಗ್ರಾಂಗೆ ಕೂಡ 10 ರೂಪಾಯಿಯಂತೆ ಅಗ್ಗವಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 48,170 ರೂಪಾಯಿಯಿಂದ 48,160 ರೂಪಾಯಿಗೆ ತಲುಪಿದೆ.

ಬೆಂಗಳೂರಲ್ಲಿ ತುಟ್ಟಿ

ಬೆಂಗಳೂರಲ್ಲಿ ತುಟ್ಟಿ

ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಮಂಗಳವಾರ ಬೆಳಗಿನ ಅವಧಿಯಲ್ಲಿ ಬದಲಾವಣೆಯಾಗಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 42,010 ರೂ.ನಲ್ಲಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಅದು ನಿನ್ನೆಯ ದರವಾದ 45,830 ರೂಪಾಯಿಯಲ್ಲಿದೆ.

ಅಮೆರಿಕಾ ಡಾಲರ್ ಮೌಲ್ಯ ಕುಸಿತ : ಗೋಲ್ಡ್ ಗುರು ವಿಶ್ಲೇಷಣೆಅಮೆರಿಕಾ ಡಾಲರ್ ಮೌಲ್ಯ ಕುಸಿತ : ಗೋಲ್ಡ್ ಗುರು ವಿಶ್ಲೇಷಣೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 10 ರೂಪಾಯಿಯಷ್ಟು ಕಡಿಮೆಯಾಗಿದೆ. ಸೋಮವಾರ 42,290 ರೂಪಾಯಿಗೆ ಮಾರಾಟವಾಗುತ್ತಿದ್ದ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ ಮಂಗಳವಾರ 42,280 ರೂ.ಗೆ ತಗ್ಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ 46,130 ರೂ ದಿಂದ 46,120 ರೂ.ಗೆ ತಲುಪಿದೆ.

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಚಿನ್ನದ ದರ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ, 10 ರೂ ಅಗ್ಗವಾಗಿದ್ದು 43,880ಕ್ಕೆ ರೂ ದರದಲ್ಲಿದೆ. 24 ಕ್ಯಾರಟ್ ಚಿನ್ನದ ಬೆಲೆ 44,880ಕ್ಕೆ ಕಡಿಮೆಯಾಗಿದೆ. ಕೇರಳದಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಇದೆ. 22 ಕ್ಯಾರೆಟ್ ಚಿನ್ನಕ್ಕೆ 42,010 ರೂ ದರವಿದ್ದರೆ, 24 ಕ್ಯಾರಟ್ ಹಳದಿ ಲೋಹ 45,830 ರೂಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ದರದಲ್ಲಿಯೂ ದೇಶದ ವಿವಿಧ ನಗರಗಳಲ್ಲಿ ಏರಿಳಿತ ಕಂಡಿದೆ, ಇನ್ನು ಕೆಲವು ಕಡೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 67,000 ರೂಪಾಯಿಯಿಂದ 600 ರೂಪಾಯಿ ಹೆಚ್ಚಳವಾಗಿದ್ದು, 67,600 ರೂಪಾಯಿಗೆ ತಲುಪಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿಗೆ 200 ರೂಪಾಯಿ ಹೆಚ್ಚಳವಾಗಿದ್ದು 67,600 ರೂ. ಏರಿಕೆಯಾಗಿದೆ. ಚೆನ್ನೈನಲ್ಲಿ 71,700 ರೂ ಮತ್ತು ಮುಂಬೈನಲ್ಲಿ 67,600 ರೂಪಾಯಿ ದರವಿದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ.

English summary
Gold and silver rates has gone down on March 16 infew major cities. Here is the price details of major cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X