ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 15ರಂದು ಚಿನ್ನ, ಬೆಳ್ಳಿ ದರ

ಬೆಂಗಳೂರು, ಮಾರ್ಚ್ 13: ದೇಶಾದ್ಯಂತ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸೋಮವಾರವೂ ಬದಲಾವಣೆಗಳಾಗಿವೆ. ಬಿಸಿಲ ಝಳ ಹೆಚ್ಚುತ್ತಿರುವಂತೆ ಚಿನ್ನದ ಬೆಲೆಯೂ ಬಿಸಿ ಮುಟ್ಟಿಸುತ್ತಿದೆ. ಮಾರ್ಚ್ 15ರಂದು ಹಳದಿ ಲೋಹದ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಶನಿವಾರ ಬೆಂಗಳೂರು ಹೊರತುಪಡಿಸಿ ದೇಶದ ಹೆಚ್ಚಿನ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಇದು ಮದುವೆ ಮುಂಜಿ ಸಮಾರಂಭಗಳಿಗಾಗಿ ಆಭರಣ ಖರೀದಿಸುತ್ತಿರುವ ಗ್ರಾಹಕರಿಗೆ ತುಸು ನಿರಾಳತೆ ನೀಡಿತ್ತು. ಆದರೆ ವಾರದ ಆರಂಭದಲ್ಲಿ ಮತ್ತೆ ದರ ಏರಿಕೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಯು ಸೋಮವಾರ ಹತ್ತು ಗ್ರಾಂಗೆ 20 ರೂಪಾಯಿ ಏರಿಕೆಯಾಗಿದ್ದು, 45,840 ರೂಪಾಯಿಗೆ ತಲುಪಿದೆ. ಇದು ದೇಶದ ಒಟ್ಟಾರೆ ಚಿನ್ನದ ಬೆಲೆಯ ಸ್ಥಿತಿಯಾಗಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ಹಳದಿ ಲೋಹದ ಮೇಲಿನ ತೆರಿಗೆ ವಿಭಿನ್ನವಾಗಿರುವುದರಿಂದ ಪ್ರಮುಖ ನಗರಗಳಲ್ಲಿ ಅದರ ದರದಲ್ಲಿ ವ್ಯತ್ಯಾಸವಿದೆ.

ದೆಹಲಿಯಲ್ಲಿ ಬೆಲೆ

ದೆಹಲಿಯಲ್ಲಿ ಬೆಲೆ

ಹಳದಿ ಲೋಹದ ಬೆಲೆ ದೆಹಲಿಯಲ್ಲಿ ತುಟ್ಟಿಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿಯಷ್ಟು ಹೆಚ್ಚಳ ಕಂಡಿದ್ದು, 44,160 ರೂ ದಿಂದ 44,170ಕ್ಕೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರಟ್ ಚಿನ್ನ ಬೆಲೆ ಗ್ರಾಂಗೆ 10 ರೂಪಾಯಿಯಂತೆ ದುಬಾರಿಯಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 48,170 ರೂಪಾಯಿಯಿಂದ 48,180 ರೂಪಾಯಿಗೆ ತಲುಪಿದೆ.

ಬೆಂಗಳೂರಲ್ಲಿ ತುಟ್ಟಿ

ಬೆಂಗಳೂರಲ್ಲಿ ತುಟ್ಟಿ

ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ತುಟ್ಟಿಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ, 10 ಗ್ರಾಂಗೆ 20 ರೂ ಮತ್ತೆ ಏರಿಕೆ ಕಂಡಿದೆ. ಇದರಿಂದ 42,000 ರೂ. ದಿಂದ 42,020 ರೂ.ಗೆ ಹೆಚ್ಚಳ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ ಕೂಡ 20 ರೂಪಾಯಿ ಏರಿಕೆಯಾಗಿದೆ. ಅದು 45,820 ರೂಪಾಯಿಯಿಂದ 45,840 ರೂಪಾಯಿಗೆ ತಲುಪಿದೆ.

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 10 ರೂಪಾಯಿಯಷ್ಟು ಏರಿಕೆಯಾಗಿದೆ. ಭಾನುವಾರ 42,310 ರೂಪಾಯಿಗೆ ಮಾರಾಟವಾಗುತ್ತಿದ್ದ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ ಸೋಮವಾರ 42,320 ರೂ.ಗೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ 46,160 ರೂ ದಿಂದ 46,170 ರೂ.ಗೆ ತಲುಪಿದೆ.

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ, 20 ರೂ ಹೆಚ್ಚಾಗಿದ್ದು 43,880ಕ್ಕೆ ಹೆಚ್ಚಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 46,950ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 42,020 ರೂ ದರವಿದ್ದರೆ, 24 ಕ್ಯಾರಟ್ ಹಳದಿ ಲೋಹ 45,840 ರೂಗೆ ಮಾರಾಟವಾಗುತ್ತಿದೆ.

Recommended Video

    ಅಬ್ಬಾ ! ಬೆಲೆ ಎಷ್ಟು ಕಡಿಮೆ ಆಗಿದೆ ಗೊತ್ತಾ !! | Oneindia Kannada
    ದೇಶದಲ್ಲಿ ಬೆಳ್ಳಿ ಬೆಲೆ

    ದೇಶದಲ್ಲಿ ಬೆಳ್ಳಿ ಬೆಲೆ

    ದೇಶದ ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿದ್ದರೆ, ಇನ್ನು ಕೆಲವು ಕಡೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 67,000 ರೂಪಾಯಿ ಇದೆ. ದೆಹಲಿಯಲ್ಲಿ 66,900 ರೂ., ಚೆನ್ನೈನಲ್ಲಿ 71,400 ರೂ ಮತ್ತು ಮುಂಬೈನಲ್ಲಿ 66,900 ರೂಪಾಯಿ ದರವಿದೆ.

    * ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+