Gold Price Today: ಗ್ರಾಹಕರಿಗೆ ಇಂದು ಸುವರ್ಣ ಅವಕಾಶ: ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಕುಸಿತ
Gold Silver Price Today: ಚಿನ್ನ-ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಕಳೆದ ಹತ್ತು ದಿನಗಳಲ್ಲಿ ಬಹುತೇಕ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಡಿಸೆಂಬರ್ 10-12ರವರೆಗೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದ ಚಿನ್ನದ ಬೆಲೆ ಸಹ ಇಂದು ಕುಸಿದಿದೆ. ಖರೀದಿದಾರರಿಗೆ ಇಂದು ಉತ್ತಮ ಅವಕಾಶ ಎನ್ನಬಹುದು. ಇಂದು 22ಕ್ಯಾರಟ್, 24 ಕ್ಯಾರಟ್ ಬಂಗಾರ ಮತ್ತು ಬೆಳ್ಳಿ ದರದ ವಿವರ, ನಗರವಾರು ಬೆಲೆಪಟ್ಟಿ ಮಾಹಿತಿ ಇಲ್ಲಿದೆ.
ಡಿಸೆಂಬರ್ 13ರಂದು ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿನ ಕುಸಿತಕ್ಕೆ ಯುಎಸ್ ಡಾಲರ್ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆ ಎನ್ನಲಾಗಿದೆ. ಈ ಎರಡು ಲೋಹಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಹೆಚ್ಚಾದ ನಂತರ ಹೂಡಿಕೆದಾರರು ಲಾಭದ ದೃಷ್ಟಿಯಿಂದ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇವುಗಳು ಸೇರಿದಂತೆ ಹಲವು ಜಾಗತಿಕ ಕಾರಣಗಳಿಂದಾಗಿ ದಿಢೀರ್ ಕುಸಿತ ಮತ್ತು ಹೆಚ್ಚಳ ಆಗಾಗ ಉಂಟಾಗುತ್ತಿದೆ.

ಇನ್ನೂ ಅಮೆರಿಕಾದ ನೆರೆಯ ದೇಶ ಮೆಕ್ಸಿಕೊ ಸಹ ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ತೆರಿಗೆಯು ಶೇಕಡಾ 05 ರಿಂದ 50ರವರೆಗೂ ಇರಲಿದೆ. ವಿವಿಧ ವರ್ಗಗಳ ಉತ್ಪನ್ನಗಳಿಗೆ ತೆರಿಗೆ ಹೇರಿಕೆ ಅನ್ವಯವಾಗಲಿದೆ ಎಂದು ವರದಿ ಆಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕ ಬಳಿಕ ಮೆಕ್ಸಿಕೊ ಸುಂಕ ನೀತಿಯು ಒಂದಷ್ಟು ಬದಲಾವಣೆಗೆ ಕಾರಣವಾಗಿದೆ. ಅದರಲ್ಲಿ ಚಿನ್ನ ಮತ್ತು ಬೆಳ್ಳಿ ದರದ ಏರಿಳಿಕೆಗೂ ಕಾರಣವಾಗಿದೆ.
ಇಂದಿನ ಗ್ರಾಹಕರಿಗೆ ಗುಡ್ ನ್ಯೂಸ್: ಇಳಿಕೆ ಆಗಿದ್ದೆಷ್ಟು?
ದರ ಕುಸಿತದಿಂದ ಇಂದು ಚಿನ್ನ ಖರೀದಿಸುವವರಿಗೆ ಕೊಂಚ ನೆಮ್ಮದಿ ತಂದಿದೆ. 24 ಕ್ಯಾರಟ್ ಚಿನ್ನ 10 ಗ್ರಾಂಗೆ 270 ರೂಪಾಯಿ ಕುಸಿದಿದ್ದು, ದರವು 1,33,910 ರೂಪಾಯಿಗೆ ಸ್ಥಿರವಾಗಿದೆ. ಇದೇ ಚಿನ್ನಕ್ಕೆ ನೆನ್ನೆ ಒಂದು ಗ್ರಾಂಗೆ 343 ರೂಪಾಯಿಗೆ ಹೆಚ್ಚಾಗಿತ್ತು. ಅದೇ ರೀತಿ 22ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯು 250 ರೂಪಾಯಿ ಇಳಿಕೆ ಆಗುವ ಮೂಲಕ 1,22,750 ರೂಪಾಯಿಗೆ ಮಾರಾಟವಾಗಿದೆ.
ಭರ್ಜರಿಯಾಗಿ ಏರಿಕೆ ಆಗಿದ್ದ ಬೆಳ್ಳಿ ದರದಲ್ಲಿ ಸಹ ಇಂದು ಇಳಿಕೆ ಆಗಿದೆ. 100 ಗ್ರಾಂ ಬೆಳ್ಳಿ ದರವು 600 ರೂಪಾಯಿ ಇಳಿಕೆ ಆಗಿದ್ದು, ದರ 19800 ರೂಪಾಯಿ ಇದೆ. ಒಂದು ಕೆಜಿ ಬೆಳ್ಳಿ ದರವು 6000 ರೂಪಾಯಿ ಇಳಿಕೆ ಮೂಲಕ 1,98,000 ರೂಪಾಯಿಗೆ ಬಂದು ನಿಂತಿದೆ. ಚಿನ್ನವು ನಿರಂತರವಾಗಿ ದಿಢೀರ್ ಹೆಚ್ಚಾಗುತ್ತದೆ. ಆದರೆ ಇಳಿಕೆಯ ಪ್ರಮಾಣ ಏರಿಕೆಗಿಂತ ಕಡಿಮೆ ಇದೆ.
ವಿವಿಧ ನಗರಗಳಲ್ಲಿ 22k ಚಿನ್ನದ 01 ಗ್ರಾಂ ದರಪಟ್ಟಿ
ಬೆಂಗಳೂರು: 12,370 ರೂಪಾಯಿ
ಮುಂಬೈ: 12,275 ರೂಪಾಯಿ
ದೆಹಲಿ: 12,290 ರೂಪಾಯಿ
ಕೊಲ್ಕತ್ತ: 12,275 ರೂಪಾಯಿ
ಹೈದರಾಬಾದ್: 12,275 ರೂಪಾಯಿ
ಕೇರಳ: 12,275 ರೂಪಾಯಿ
ಪುಣೆ: 12,275 ರೂಪಾಯಿ
ಅಹ್ಮದಾಬಾದ್: 12,280 ರೂಪಾಯಿ
ವಿವಿಧ ನಗರಗಳಲ್ಲಿ 24k ಚಿನ್ನದ 01 ಗ್ರಾಂ ಬೆಲೆ ಮಾಹಿತಿ
ಚೆನ್ನೈ: 13,495 ರೂಪಾಯಿ
ಮುಂಬೈ: 13,391ರೂಪಾಯಿ
ದೆಹಲಿ: 13,407 ರೂಪಾಯಿ
ಕೊಲ್ಕತ್ತ: 13,391 ರೂಪಾಯಿ
ಬೆಂಗಳೂರು: 13,391 ರೂಪಾಯಿ
ಹೈದರಾಬಾದ್ : 13,391 ರೂಪಾಯಿ
ಕೇರಳ: 13,391 ರೂಪಾಯಿಪುಣೆ: 13,391 ರೂಪಾಯಿ
ಅಹ್ಮದಾಬಾದ್: 13,397 ರೂಪಾಯಿ
ನಗರವಾರು ಬೆಳ್ಳಿ 100 ಗ್ರಾಂ ದರಪಟ್ಟಿ
ಚೆನ್ನೈ: 21,000 ರೂಪಾಯಿ
ಮುಂಬೈ: 19,800 ರೂಪಾಯಿ
ದೆಹಲಿ: 19,800 ರೂಪಾಯಿ
ಕೊಲ್ಕತ್ತಾ: 19,800 ರೂಪಾಯಿ
ಬೆಂಗಳೂರು: 19,800 ರೂಪಾಯಿ
ಹೈದರಾಬಾದ್: 21,000 ರೂಪಾಯಿ
ಕೇರಳ: 21,000 ರೂಪಾಯಿ
ಪುಣೆ: 19,800 ರೂಪಾಯಿ
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications