Gold Price Today: ಇಂದು ಚಿನ್ನ-ಬೆಳ್ಳಿ ಎರಡರಲ್ಲೂ ಭರ್ಜರಿ ಇಳಿಕೆ, ದರಪಟ್ಟಿ ಇಲ್ಲಿದೆ

Gold Silver Price Today: ಚಿನ್ನದ ಬೆಲೆಯು ಭಾರತದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚಾಗುತ್ತಲೇ ಇದೆ. ಈವರೆಗೆ ಶೇಕಡಾ 50ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆಗಾಗ ಇಳಿಕೆ ಆಗುವ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ದಿಢೀರನೇ ದುಪ್ಪಟ್ಟು ದರದಲ್ಲಿ ಹೆಚ್ಚಾಗುತ್ತವೆ. ಏರಿಕೆ ಹೆಚ್ಚು ಇಳಿಕೆ ಕಡಿಮೆ ಎಂಬಂತಾಗಿದ್ದು, ಇದು ಗ್ರಾಹಕರಿಗೆ ಆರ್ಥಿಕ ಹೊರೆಯಾಗಿ ಪರಣಿಮಿಸಿದೆ. ಇದೀಗ ಜಿಎಸ್‌ಟಿ ತೆರಿಗೆ ಸ್ಲಾಬ್‌ಗಳಲ್ಲಿ ಬದಲಾವಣೆ ಆದ ಬೆನ್ನಲ್ಲೆ ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ ಕಂಡು ಬಂದಿದೆ.

ಇದರ ಮಧ್ಯೆ ಸೋಮವಾರ ಸೆಪ್ಟಂಬರ್ 08ರಂದು ಚಿನ್ನದ ಬೆಲೆಯ ಭರ್ಜರಿ ಇಳಿಕೆ ಕಂಡಿದೆ. 24 ಕ್ಯಾರಟ್ ಚಿನ್ನ ಒಂದು ಗ್ರಾಂಗೆ 10,838 ರೂ.ಗೆ ಕುಸಿದಿದೆ. 10 ಗ್ರಾಂ ಚಿನ್ನವು ನೆನ್ನೆ ಇದ್ದ 1,08,490 ರೂ.ಗಿಂತ ಇಂದು 1,08,380 ರೂಪಾಯಿಗೆ ಇಳಿಕೆ ಕಂಡಿದೆ. ಈ ಮೂಲಕ ಬರೊಬ್ಬರಿ 110 ಇಳಿಕೆ ಆದಂತಾಗಿದೆ. ಇನ್ನೂ 100 ಗ್ರಾಂ ಚಿನ್ನ ದರವು 1100 ರೂ.ಗೆ ಇಳಿಕೆ ಆಗಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

Gold and Silver Prices Big Drop in India on September 08

22 ಕ್ಯಾರಟ್ ಚಿನ್ನದ ಬೆಲೆಯು ನೆನ್ನೆಯ 9,945 ರೂ.ಯಿಂದ ಇಂದು 9,935 ರೂಪಾಯಿಗೆ ಕುಸಿದಿದೆ. ಒಟ್ಟ ₹10 ಇಳಿಕೆ ಆದಂತಾಗಿದೆ. ಇದೇ ಚಿನ್ನದ 100 ಗ್ರಾಂ ಬೆಲೆಗೆ ನೆನ್ನೆ 9,94,500 ರೂ. ಇತ್ತು, ಇಂದು ಅದು 9,93,500 ರೂ.ಗೆ ಕುಸಿದಿದ್ದು, ಒಟ್ಟು 1100 ರೂಪಾಯಿ ಕುಸಿದಿದೆ. ಆದರೆ ಸಹಿತ ಇದು ಚಿನ್ನವು ಖರೀದಿಗೆ ಸಮಯವಲ್ಲ ಎನ್ನಲಾಗುತ್ತಿದೆ. ಏಕೆಂದರೆ ಈಗಾಗಲೇ ನಿರಂತರವಾಗಿ ಹೆಚ್ಚಳ ಕಂಡದ ಚಿನ್ನದ ದರವು ಗಗನಕ್ಕಿದೆ. ಇನ್ನೂ ಹಲವು ಭಾರಿ ಇಳಿಕೆ ಆದರೆ ಖರೀದಿ ಪ್ರಮಾಣ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.

ಬೆಳ್ಳಿ 100 ಗ್ರಾಂ ಬೆಲೆಯು ನೆನ್ನೆಯ 12,800 ರೂಪಾಯಿಯಿಂದ ಇಂದು 12,700 ಕ್ಕೆ ಇಳಿಕೆ ಕಂಡಿದೆ. ಇದರಿಂದ ಒಟ್ಟು 100 ರೂ. ಕುಸಿತವಾಗಿದೆ. ಒಂದು ಕೆ.ಜಿ. ಬೆಳ್ಳಿಯ ದರವು 1,28,000 ರೂ.ನಿಂದ 1,27,000 ಕ್ಕೆ ಕುಸಿತ ಕಂಡಿದೆ. ಈ ಮೂಲಕ ಬಹುದಿನಗಳ ಬಳಿಕ 1,000 ಇಳಿಕೆ ಆಗಿದೆ. ನಗರವಾರು ಚಿನ್ನ ಬೆಳ್ಳಿ ದರಗಳ ಪಟ್ಟಿ ಇಲ್ಲಿದೆ.

ಪ್ರಮುಖ ನಗರಗಳಲ್ಲಿ 22ಕೆ 10 ಗ್ರಾಂ ಚಿನ್ನದ ಬೆಲೆ

ಬೆಂಗಳೂರು: 99,465 ರೂಪಾಯಿ

ಮುಂಬೈ: 99,467 ರೂಪಾಯಿ

ಚೆನ್ನೈ: 1,00,061 ರೂಪಾಯಿ

ದೆಹಲಿ: 99,613 ರೂಪಾಯಿ

ಪುಣೆ: 99,473 ರೂಪಾಯಿ

ಹೈದರಾಬಾದ್: 99,465 ರೂಪಾಯಿ

ಕೋಲ್ಕತ್ತಾ: 99,465 ರೂಪಾಯಿ

ಅಹಮದಾಬಾದ್ : 1,03,990.79 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+