Gold Price on October 25: ಬಂಗಾರ ದರ ಭರ್ಜರಿ ಇಳಿಕೆ: ಇಲ್ಲಿದೆ ಅಕ್ಟೋಬರ್ 25ರ ಚಿನ್ನದ ದರಪಟ್ಟಿ
Gold Price on October 25: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಇದೀಗ ಕಳೆದ ಎರಡು ದಿನಗಳಿಂದ ಸತತ ಇಳಿಕೆಯಾಗುತ್ತಲೇ ಬಂದಿದೆ. ಹಾಗಾದ್ರೆ, ಇಂದು (ಅಕ್ಟೋಬರ್ 25) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಅಕ್ಟೋಬರ್ 24) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,14,000 ರೂಪಾಯಿ ಇದ್ದರೆ, ಇಂದು (ಅಕ್ಟೋಬರ್ 25) 1,13,990 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,24,370 ರೂಪಾಯಿ ಇತ್ತು. ಇನ್ನು ಇಂದು 1,24,360 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 91,192 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 99,488 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 1,13,990 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,24,360 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,13,990 ರೂಪಾಯಿ
* ಚೆನ್ನೈ - 1,13,990 ರೂಪಾಯಿ
* ಮುಂಬೈ - 1,13,990 ರೂಪಾಯಿ
* ಕೋಲ್ಕತ್ತಾ - 1,13,990 ರೂಪಾಯಿ
* ನವದೆಹಲಿ - 1,14,140 ರೂಪಾಯಿ
* ಹೈದರಾಬಾದ್ - 1,13,990 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,24,360 ರೂಪಾಯಿ
* ಚೆನ್ನೈ - 1,24,360 ರೂಪಾಯಿ
* ಮುಂಬೈ - 1,24,360 ರೂಪಾಯಿ
* ಕೋಲ್ಕತ್ತಾ - 1,24,360 ರೂಪಾಯಿ
* ನವದೆಹಲಿ - 1,24,510 ರೂಪಾಯಿ
* ಹೈದರಾಬಾದ್ - 1,24,360 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,56,900 ರೂಪಾಯಿ (100 ಇಳಿಕೆ)
* ಚೆನ್ನೈ - 1,69,900 ರೂಪಾಯಿ (100 ಇಳಿಕೆ)
* ಮುಂಬೈ - 1,54,900 ರೂಪಾಯಿ (100 ಇಳಿಕೆ)
* ಕೋಲ್ಕತ್ತಾ - 1,54,900 ರೂಪಾಯಿ (100 ಇಳಿಕೆ)
* ನವದೆಹಲಿ - 1,54,900 ರೂಪಾಯಿ (100 ಇಳಿಕೆ)
* ಹೈದರಾಬಾದ್ - 1,69,900 ರೂಪಾಯಿ (100 ಇಳಿಕೆ)
ಈಗಾಗಲೇ ದೀಪಾವಳಿ ಹಬ್ಬದ ವೇಳೆ ಚಿನ್ನ, ಬೆಳ್ಳಿ ದರ ಏರಿಕೆಯಾಗಿದ್ದರೂ ಸಹ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಆಗಿರಲಿಲ್ಲ. ಬದಲಾಗಿ ಹೆಚ್ಚಾಗಿಯೇ ಇತ್ತು. ಅಷ್ಟರ ಮಟ್ಟಿಗೆ ಬಂಗಾರದ ಅಂಗಡಿಗಳ ಮುಂದೆ ಗ್ರಾಹಕರು ನೆರೆದಿದ್ದರು. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆಂದು ಕೊಂಡುಕೊಳ್ಳುತ್ತಲಿರುತ್ತಾರೆ. ಇನ್ನೂ ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ.












Click it and Unblock the Notifications