Gold Price on 9th May: ಬಂಗಾರಿಗೆ ದುಬಾರಿ ಆಯ್ತು ಬಂಗಾರ: ಚಿನ್ನ ಬೆಳ್ಳಿ ಬೆಲೆಯಲ್ಲಿಲ್ಲ ಇಳಿಕೆ
ಅಕ್ಷಯ ತೃತೀಯ ಬಂದೆ ಬಿಡ್ತು. ಆದರೆ ಬಂಗಾರದ ಬೆಲೆ ಮಾತ್ರ ಇಳಿಕೆಯಾಗುವಂತೆ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಿಂದ ಬೆಲೆಯಲ್ಲಿ ಏರಿಕೆ ಕಂಡ ಬಂಗಾರ ಇಂದು (ಮೇ 9) ಕೂಡ ಅಲ್ಪ ಪ್ರಮಾಣದಲ್ಲಿ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನೇನು ಶುಕ್ರವಾರ (ಮೇ10) ಎಲ್ಲೆಡೆ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ದಿನ ಬಂಗಾರಕ್ಕೆ ಬೇಡಿಕೆ ಹೆಚ್ಚಾಗಲಿದೆ. ಶುಕ್ರವಾರ ಬಂಗಾರ ಖರೀದಿಗೆ ಜನ ಮುಂದಾಗಲಿದ್ದಾರೆ. ಇಂದಾದರೂ ಚಿನ್ನಾಭರಣಗಳ ಬೆಲೆ ಇಳಿಕೆಯಾಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ.
ಹೌದು... ಅಕ್ಷಯ ತೃತೀಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿನ್ನಾಭರಣಗಳ ಬೆಲೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಇದರಿಂದ ಗ್ರಾಹಕರು ಈ ಬಾರಿ ಚಿನ್ನ ಖರೀದಿ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಬಹುತೇಕ ಜನ ಆಭರಣ ಖರೀದಿ ಇಲ್ಲದೆ ಹಬ್ಬ ಆಚರಿಸುವುದಿಲ್ಲ. ಅದಕ್ಕಾಗಿ ತಮ್ಮ ಬಜೆಟ್ ಹೊಂದಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಬಂಗಾರದ ಬೆಲೆಯಲ್ಲಿ ಇಳಿಕೆಯಾಗದ ಕಾರಣ ಗ್ರಾಹಕರು ದೊಡ್ಡ ಪ್ರಮಾಣದ ಚಿನ್ನಾಭರಣ ಖರೀದಿ ವಿಚಾರ ಕೈಬಿಡುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾದರೆ ಇಂದು (ಮೇ 9) ಚಿನ್ನ-ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.

ಇಂದು (ಮೇ 9) ಹಲವು ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,250ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,270 ರೂಪಾಯಿ ಆಗಿದೆ. ಇನ್ನೂ 100 ಗ್ರಾಂ ಬೆಳ್ಳಿ ಬೆಲೆ 8500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,250 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 8,410 ರೂಪಾಯಿಯಲ್ಲಿ ಇದೆ. ಹಾಗಾದರೆ ಬೆಂಗಳೂರು ಸೇರಿದಂತೆ ಎಲ್ಲೆಲ್ಲಿ ಚಿನ್ನದ ಬೆಲೆ ಇಂದು (ಮೇ 9) ಹೇಗಿದೆ ಎಂದು ತಿಳಿಯೋಣ.
*ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 9ರಂದು ಹೇಗಿದೆ ಎಂದು ನೋಡುವುದಾದರೆ- ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,270 ರೂಪಾಯಿ ಇದೆ. ಜೊತೆಗೆ ಬೆಳ್ಳಿ ಬೆಲೆ 10 ಗ್ರಾಂಗೆ 841 ರೂಪಾಯಿ ಇದೆ.
*ಭಾರತದಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 9ರಂದು ಹೇಗಿದೆ ಎಂದು ನೋಡುವುದಾದರೆ- ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,270 ರೂಪಾಯಿ ಇದೆ. ಜೊತೆಗೆ ಬೆಳ್ಳಿ ಬೆಲೆ 10 ಗ್ರಾಂಗೆ 850 ರೂಪಾಯಿ ಇದೆ.

*ವಿವಿಧ ನಗರಗಳಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯುವುದಾದರೆ- ಕೋಲ್ಕತಾದಲ್ಲಿ 66,250 ರೂಪಾಯಿ ಇದೆ. ಕೇರಳ: 66,250 ರೂಪಾಯಿ ಇದ್ದರೆ, ಅಹ್ಮದಾಬಾದ್: 66,300 ರೂಪಾಯಿ ಇದೆ. ಇನ್ನೂ ಜೈಪುರ್: 66,400 ರೂಪಾಯಿ,
ಬೆಂಗಳೂರು: 66,250 ರೂಪಾಯಿ ಇದೆ.
ಇನ್ನೂ ಚೆನ್ನೈದಲ್ಲಿ 66,300 ರೂಪಾಯಿ, ಮುಂಬೈ: 66,250 ರೂಪಾಯಿ, ದೆಹಲಿ: 66,400 ರೂಪಾಯಿ, ಲಕ್ನೋ: 66,400 ರೂಪಾಯಿ, ಭುವನೇಶ್ವರ್: 66,250 ರೂಪಾಯಿ ಇದೆ.
*ವಿವಿಧ ನಗರಗಳಲ್ಲಿರುವ 100 ಗ್ರಾಮ್ ಬೆಳ್ಳಿ ಬೆಲೆ ಕೋಲ್ಕತಾದಲ್ಲಿ 8,500 ರೂಪಾಯಿ ಇದೆ. ಕೇರಳದಲ್ಲಿ 8,850 ರೂ, ಅಹ್ಮದಾಬಾದ್ 8,500 ರೂಪಾಯಿ, ಜೈಪುರ್ದಲ್ಲಿ 8,500 ರೂಪಾಯಿ ಇದೆ. ಇನ್ನೂ ಬೆಂಗಳೂರಿನಲ್ಲಿ 8,400 ರೂಪಾಯಿ, ಚೆನ್ನೈ: 8,850 ರೂಪಾಯಿ, ಮುಂಬೈನಲ್ಲಿ 8,500 ರೂಪಾಯಿ ಇದ್ದು, ದೆಹಲಿದಲ್ಲಿ 8,500 ರೂಪಾಯಿ ಇದ್ದರೆ ಲಕ್ನೋದಲ್ಲಿ 8,500 ರೂಪಾಯಿ ಭುವನೇಶ್ವರ್ದಲ್ಲಿ 8,850 ರೂಪಾಯಿ ಇದೆ.

ಕೋಲ್ಕತಾದಲ್ಲಿ 8,500 ರೂಪಾಯಿ ಇದೆ. ಕೇರಳದಲ್ಲಿ 8,850 ರೂಪಾಯಿ, ಅಹ್ಮದಾಬಾದ್ ನಲ್ಲಿ 8,500 ರೂಪಾಯಿ, ಜೈಪುರ್ ದಲ್ಲಿ 8,500 ರೂಪಾಯಿ, ಲಕ್ನೋದಲ್ಲಿ 8,500 ರೂಪಾಯಿ ಹಾಗೂ ಭುವನೇಶ್ವರ್ ದಲ್ಲಿ 8,850 ರೂಪಾಯಿ ಇದೆ. ಇನ್ನೂ ಬೆಂಗಳೂರಿನಲ್ಲಿ 8,410 ರೂಪಾಯಿ, ಚೆನ್ನೈನಲ್ಲಿ 8,850 ರೂಪಾಯಿ, ಮುಂಬೈದಲ್ಲಿ 8,500 ರೂಪಾಯಿ, ದೆಹಲಿದಲ್ಲಿ 8,500 ರೂಪಾಯಿ ಇದೆ.












Click it and Unblock the Notifications