Gold Price: ಬಂಗಾರದ ಬೆಲೆ 8,700 ರೂಪಾಯಿ ಏರಿಕೆ, ಬೆಳ್ಳಿ ಬೆಲೆ ಏನಾಯ್ತು?

ಬಂಗಾರ ಖರೀದಿ ಮಾಡಲು ಕಾಯುತ್ತಿದ್ದ ಹೆಣ್ಣು ಮಕ್ಕಳಿಗೆ ಮತ್ತು ಬಂಗಾರದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಗಂಡು ಮಕ್ಕಳಿಗೆ ಇಂದು ಆಘಾತ ಸಿಕ್ಕಿದೆ. ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಗಬಹುದು, ಯಾಕಂದ್ರೆ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಕುಸಿಯುತ್ತಿದೆ ಅಂತಾ ಕನ್ನಡಿಗರು ಕಾಯುತ್ತಿದ್ದರು. ಪರಿಸ್ಥಿತಿ ಹೀಗಿದ್ದಾಗಲೇ ಚಿನ್ನದ ಬೆಲೆ ಇಂದು ದಿಢೀರ್ 8,700 ರೂಪಾಯಿ ಏರಿಕೆ ಕಂಡಿದೆ!

ಶುಭಕಾರ್ಯದಲ್ಲಿ ಚಿನ್ನ ಬಹುತೇಕ ಎಲ್ಲಾ ವಿಚಾರದಲ್ಲೂ ಅತ್ಯಗತ್ಯ ವಸ್ತು ಎನ್ನಬಹುದು. ಚಿನ್ನದ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕವನ್ನೇ ಬರೆಯಬಹುದು. ಯಾಕಂದ್ರೆ ಅಮೂಲ್ಯವಾದ ವಸ್ತು ಚಿನ್ನ ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ವಿಧದಲ್ಲಿ ಆಧಾರವಾಗಿದೆ. ಈ ರೀತಿ ಸಾವಿರಾರು ವರ್ಷಗಳಿಂದಲೂ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ ಈ ಪೈಕಿ ಭಾರತೀಯ ಸಂಪ್ರದಾಯದ ಪ್ರಕಾರ ಯಾವುದೇ ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ.

Gold And Silver Price On 31st Of July 2024

ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಹಿನ್ನೆಲೆ ಭಾರತದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಅದರಲ್ಲೂ ಆಷಾಢ ಮುಗಿದು ಇದೀಗ ಶ್ರಾವಣ ಆರಂಭ ಆಗಿದೆ. ಹೀಗೆ ಶ್ರಾವಣ ಶುರುವಾದ ಬೆನ್ನಲ್ಲೇ ಮದುವೆ ಸೇರಿದಂತೆ ಹಲವು ಶುಭಕಾರ್ಯ ಶುರುವಾಗಿವೆ. ಈ ಹಿನ್ನೆಲೆ ಚಿನ್ನ & ಬೆಳ್ಳಿ ಖರೀದಿಗೆ ಜನ ಮುಗಿಬಿದ್ದ ಸಮಯದಲ್ಲೇ ಬೆಲೆ ಏರಿಕೆಯ ಆಘಾತವು ಸಿಕ್ಕಿದೆ. ಹಾಗಾದ್ರೆ ಇದೀಗ ಬೆಲೆ ಏರಿಕೆ ಬಳಿಕ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!

ಕರ್ನಾಟಕ & ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಏರಿದೆ. ಪ್ರತಿ 100 ಗ್ರಾಂಗೆ 8,700 ರೂಪಾಯಿ ಏರಿಕೆಯನ್ನು ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 6,98,200 ರೂಪಾಯಿ ಆಗಿದೆ. ಇದರ ಜೊತೆಗೇ, ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 69,820 ರೂಪಾಯಿಗೆ ಏರಿಕೆ ಆಗಿದೆ. ಹಾಗಾದ್ರೆ ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?

ಮತ್ತಷ್ಟು ಏರಿಕೆ ಆಗುತ್ತಾ ಚಿನ್ನ?

ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಕಂಡು ಈಗ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 8,000 ರೂಪಾಯಿ ಏರಿಕೆ ಆಗಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 800 ರೂಪಾಯಿ ಏರಿಕೆ ಆಗಿ, ಬೆಲೆ ಏರಿಕೆಯ ಬಳಿಕ ಪ್ರತಿ 10 ಗ್ರಾಂ 64,000 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದ್ಕಡೆ ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಕುಸಿತ ಕಂಡು 84,000 ರೂಪಾಯಿಗೆ ಮಾರಾಟ ಆಗುತ್ತಿದೆ ಬೆಳ್ಳಿ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ.

ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!

ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+