Gold Price: ಚಿನ್ನ 64,450 ರೂಪಾಯಿ, ಹಾಗಾದ್ರೆ ಬೆಳ್ಳಿ ಬೆಲೆ ಎಷ್ಟಿದೆ ಈಗ?
ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿರುವ ಬೆನ್ನಲ್ಲೇ ನಿನ್ನೆಯಂತೆ ಇಂದು ದಿಢೀರ್ ಚಿನ್ನದ ಬೆಲೆ ಏರಿಕೆ ಕಂಡಿದೆ. ಅದರಲ್ಲೂ ಶ್ರಾವಣ ಶುರುವಾಗಿ ಶುಭ ಕಾರ್ಯಗಳು ಆರಂಭ ಆಗಿರುವ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದು ಜನರಿಗೆ ಒಂದಷ್ಟು ಟೆನ್ಷನ್ ಕೂಡ ತಂದಿದೆ. ಹಾಗಾದ್ರೆ ಇದೀಗ ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನದ ಬೆಲೆ? ಬೆಳ್ಳಿ ಬೆಲೆ ಎಷ್ಟಿದೆ? ತಿಳಿಯೋಣ ಬನ್ನಿ.
ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಭಾರಿ ಏರಿಳಿತ ಆಗುತ್ತಿದೆ. ಚಿನ್ನ ಖರೀದಿಗಾಗಿ ಜನರು ಕೂಡ ಕಾದು ಕುಳಿತಿದ್ದ ಸಮಯದಲ್ಲೇ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಮದುವೆ ಸೀಸನ್ ಶುರುವಾದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡುಬರುತ್ತಿದೆ. ಹೀಗೆ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದು ಮಧ್ಯಮ & ಬಡ ವರ್ಗದ ಜನರಿಗೆ ಒಂದಷ್ಟು ಟೆನ್ಷನ್ ಕೂಡ ಕೊಡುತ್ತಿದೆ. ಯಾಕಂದ್ರೆ ಮೊದಲೇ ಚಿನ್ನ ಆರ್ಡರ್ ಮಾಡಲು ಆಗದ ಜನರು ಈಗ ನೇರವಾಗಿ ಖರೀದಿಗೆ ಕಾಯುತ್ತಿರುತ್ತಾರೆ ಹೀಗಿದ್ದಾಗ ಚಿನ್ನ ಬೆಲೆ ಏರಿಕೆ ಕಂಡಿರುವುದು ಒಂದಷ್ಟು ಬೇಸರ ತರಿಸಿದೆ. ಹಾಗಾದ್ರೆ ಇದೀಗ ಎಷ್ಟು ಏರಿಕೆ ಕಂಡಿದೆ ಚಿನ್ನ? ಬೆಳ್ಳಿ ಬೆಲೆ ಎಷ್ಟಿದೆ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಬಂಗಾರದ ಬೆಲೆಯಲ್ಲಿ ಏರಿಕೆ
ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಏರಿಕೆಯನ್ನು ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲಕ್ಕೆ ಏರಿದೆ ಪ್ರತಿ 100 ಗ್ರಾಂಗೆ 2200 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ, ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,03,100 ರೂಪಾಯಿ ಆಗಿದೆ. ಜೊತೆಗೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂ 70,310 ರೂಪಾಯಿಗೆ ಏರಿಕೆ ಆಗಿದೆ. ಇದರ ಜೊತೆಗೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆಯು ಕಂಡುಬಂದಿದೆ.
ಬೆಳ್ಳಿಯ ಬೆಲೆ ಕೆಜಿಗೆ ಎಷ್ಟಿದೆ?
22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಬಳಿಕ ಕೈಗೆ ಸಿಗದಾಗಿದೆ. ಪ್ರತಿ 100 ಗ್ರಾಂಗೆ 2000 ರೂಪಾಯಿ ಏರಿಕೆ ಕಂಡಿದೆ 22 ಕ್ಯಾರೆಟ್ ಚಿನ್ನ. ಹೀಗೆ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,44,500 ರೂಪಾಯಿ ಆಗಿದೆ ಇದರ ಜೊತೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 64,450 ರೂಪಾಯಿ ತಲುಪಿದೆ. ಆದರೆ ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡುಬಂದಿದೆ. ಈಗ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 80,650 ರೂಪಾಯಿ ಇದ್ದು, ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ ಚೇತರಿಕೆ ಕಾಣುವ ನಿರೀಕ್ಷೆ ಇದೆ.












Click it and Unblock the Notifications