Gold Price: ಆಭರಣ ಪ್ರಿಯರಿಗೆ ಸಿಹಿಸುದ್ದಿ, ಚಿನ್ನದ ಬೆಲೆ 4,000 ರೂಪಾಯಿ ಕುಸಿತ!

ಚಿನ್ನದ ಬೆಲೆ ಗೌರಿ & ಗಣೇಶ ಹಬ್ಬದ ದಿನವೇ ಭರ್ಜರಿ ಸಿಹಿಸುದ್ದಿ ನೀಡಿದೆ. ಹಬ್ಬವು ಇದ್ದ ದಿನವೇ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತೆ ಆಗಿದೆ. ಯಾಕಂದ್ರೆ ದಿಢೀರ್ ಚಿನ್ನ ಬೆಲೆ ಕುಸಿದು ಬಿದ್ದಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಹಾಗಾದ್ರೆ ಬೆಲೆ ಕುಸಿತದ ನಂತರ ಬಂಗಾರದ ಬೆಲೆ ಇದೀಗ ಎಷ್ಟಿದೆ? ಬೆಳ್ಳಿ ಬೆಲೆ ಪ್ರತಿ ಕೆಜಿ ಎಷ್ಟು ಸಾವಿರ ರೂಪಾಯಿ ತಲುಪಿದೆ? ಚಿನ್ನ & ಬೆಳ್ಳಿ ಇಂದಿನ ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.

ಚಿನ್ನ ಅಂದ್ರೆ ಎಲ್ಲಿಲ್ಲದ ಬೇಡಿಕೆ ಇದೆ ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ಯುದ್ಧ ಭಯ ಆವರಿಸಿದ ಕಾರಣ ಚಿನ್ನದ ಮೇಲೆ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬರ್ತಿದ್ದಾರೆ. ಈ ಕಾರಣ ಕಳೆದ ಹಲವು ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿತ್ತು. ಆದರೆ, ಇಂದು ಮಾತ್ರ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಹಾಗಾದ್ರೆ ಚಿನ್ನದ ಬೆಲೆ ಇಂದು ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟು ಸಾವಿರಕ್ಕೆ ತಲುಪಿದೆ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

Gold And Silver Price Details On 07 September Of 2024

ಬಂಗಾರದ ಬೆಲೆ ಈಗ ಎಷ್ಟಿದೆ?

ಚಿನ್ನ & ಬೆಳ್ಳಿ ಬೆಲೆಯಲ್ಲಿ ಇಂದು ಕೂಡ ದೊಡ್ಡ ಮಟ್ಟದಲ್ಲೇ ಏರಿಳಿತ ಕಂಡು ಬಂದಿದೆ. ಈ ಮೂಲಕ ಗೌರಿ & ಗಣೇಶ ಹಬ್ಬದ ಖುಷಿಯಲ್ಲಿ ಇದ್ದ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಂತೆ ಆಗಿದೆ. ಭಾರತದಲ್ಲಿ ಇಂದು 22 ಕ್ಯಾರಟ್‌ ಆಭರಣ ಚಿನ್ನ ಬೆಲೆ 10 ಗ್ರಾಂಗೆ 66,800 ರೂಪಾಯಿ ತಲುಪಿದೆ. ಈ ಮೂಲಕ ಇಂದು ಒಂದೇ ದಿನ 400 ರೂಪಾಯಿ ಕುಸಿತ ಕಂಡಿದೆ ಬಂಗಾರದ ಬೆಲೆ. ಹಾಗೇ 22 ಕ್ಯಾರಟ್‌ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 4000 ರೂಪಾಯಿ ಕುಸಿತ ಕಂಡಿದ್ದು, 6,68,000 ಪ್ರತಿ 100 ಗ್ರಾಂಗೆ ಮಾರಾಟ ಆಗುತ್ತಿದೆ. ಮತ್ತೊಂದು ಕಡೆಯಲ್ಲಿ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 72,870 ರೂಪಾಯಿ ಆಗಿದೆ.

ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ!

ಒಂದು ಕಡೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದರೆ, ಮತ್ತೊಂದು ಕಡೆ ಬೆಳ್ಳಿಯ ಬೆಲೆ ಮಾತ್ರ 1000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ ಒಂದು ಕೆಜಿ ಬೆಳ್ಳಿ ಬೆಲೆಯು ಈಗ 84,000 ರೂಪಾಯಿ ಆಗಿದೆ. ಇದೇ ಕಾರಣಕ್ಕೆ, ಆಭರಣ ಪ್ರಿಯರಿಗೆ ಒಂದು ಕಡೆ ಖುಷಿ ಆಗಿದ್ದರೂ ಮತ್ತೊಂದು ಕಡೆ ಬೆಳ್ಳಿ ಬೆಲೆ ಏರಿಕೆ ತುಸು ಬೇಸರ ತರಿಸಿದೆ. ಹಾಗೇ ಇದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಚಿನ್ನ & ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಾಣುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+