ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಮತ್ತೆ ಏರಿಕೆ: ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ತೈಲ ಬೆಲೆ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳ ಕಾಣಿಸುತ್ತಿಲ್ಲ. ಪ್ರತಿನಿತ್ಯವೂ ಬೆಲೆ ಏರಿಕೆಯಾಗುತ್ತಿದ್ದು, ಶನಿವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.

ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?

ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 35 ಪೈಸೆಯಷ್ಟು ಹೆಚ್ಚಾಗಿದ್ದು, ಒಂದು ಲೀಟರ್‌ ಪೆಟ್ರೋಲ್‌ಗೆ 81.63 ರೂ. ತೆರಬೇಕಾಗಿದೆ. ಡೀಸೆಲ್ ದರದಲ್ಲಿ 24 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ 73.54 ರೂ. ಇದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಶೀಘ್ರದಲ್ಲಿಯೇ ಪೆಟ್ರೋಲ್ ಬೆಲೆ ಶತಕದ ಗಡಿ ಮುಟ್ಟುವ ಸೂಚನೆ ಕಾಣಿಸುತ್ತಿದೆ.

fuel price hike: petrol 35 paise and diesel price 24 jumped in new delhi

ಅಲ್ಲಿ ಪೆಟ್ರೋಲ್ ಲೀಟರ್‌ಗೆ 89.01 ರೂ. (34 ಪೈಸೆ ಹೆಚ್ಚಳ) ಮತ್ತು ಡೀಸೆಲ್ ಪ್ರತಿ ಲೀ.ಗೆ 78.07 ರೂ. (25 ಪೈಸೆ ಏರಿಕೆ) ತಲುಪಿದೆ.

ಬೆಂಗಳೂರಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಪೆಟ್ರೋಲ್ ಬೆಲೆ 84.39 ರೂ. ಇದ್ದರೆ, ಡೀಸೆಲ್ ಬೆಲೆ 76 ರೂ.ಗೆ ಹೆಚ್ಚಳವಾಗಿದೆ. ಭಾರತ್ ಪೆಟ್ರೋಲಿಯಂನಲ್ಲಿ ಪೆಟ್ರೋಲ್ 84.36 ಮತ್ತು ಡೀಸೆಲ್ 75.96 ದರವಿದೆ. ಇಂಡಿಯನ್ ಆಯಿಲ್‌ನಲ್ಲಿ ಪೆಟ್ರೋಲ್ ಬೆಲೆ ಶನಿವಾರ 84.30 ರೂ. ಹಾಗೂ ಡೀಸೆಲ್ ಬೆಲೆ 75.91 ರೂ. ಮುಟ್ಟಿದೆ.

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಲೀಟರ್‌ಗೆ 81.28 ರೂ. ದರದಲ್ಲಿ ಹಾಗೂ ಡೀಸೆಲ್ ಲೀಟರ್‌ಗೆ 73.30 ರೂ.ನಂತೆ ಮಾರಾಟವಾಗಿತ್ತು.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 88.67 ರೂ. ಮತ್ತು ಡೀಸೆಲ್ ಲೀಟರ್‌ಗೆ 77.82 ರೂ. ಇತ್ತು.

English summary
Fuel prices continued to increased on Saturday. In national capital delhi Petrol price hiked 35 paise and diesel to 24 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X