ರಿಂಗಿಂಗ್ ಬೆಲ್ ನಿಂದ ಫ್ರೀಡಂ 251 ಜೂನ್ 28ರಿಂದ ವಿತರಣೆ

Posted By:
Subscribe to Oneindia Kannada

ನವದೆಹಲಿ, ಜೂನ್ 15: ಫ್ರೀಡಂ 251 ಅಗ್ಗದ ಸ್ಮಾರ್ಟ್ ಫೋನ್ ಜೂನ್ 28ರಿಂದ ಗ್ರಾಹಕರ ಕೈ ಸೇರಲಿದೆ ಎಂದು ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಘೋಷಿಸಿದೆ.

ಜೂನ್ 28ರಿಂದ ಆನ್​ಲೈನ್​ನಲ್ಲಿ ನೋಂದಣಿ ಮಾಡಲ್ಪಟ್ಟ ಸದಸ್ಯರಿಗೆ ಮೊಬೈಲ್ ವಿತರಿಸಲಾಗುವದು ಎಂದು ಕಂಪನಿ ನಿರ್ದೇಶಕ ಮೋಹಿತ್ ಗೊಯಲ್ ಹೇಳಿದ್ದಾರೆ. ಇದೆಲ್ಲವೂ ಕ್ಯಾಶ್ ಆನ್ ಡೆಲಿವರಿ ಮಾದರಿಯ ವ್ಯವಹಾರವಾಗಿರುತ್ತದೆ.[ಫ್ರೀಡಂ 251 : ಸರ್ಕಾರದ ಸಬ್ಸಿಡಿ ಪಡೆದಿಲ್ಲ]

ಜೂನ್ 28ರಿಂದ ಗ್ರಾಹಕರಿಗೆ ಮೊಬೈಲ್ ವಿತರಿಸುವುದಾಗಿ ತಿಳಿಸಿದ್ದಾರೆ. ವಿಶ್ವದ ಅತಿ ಅಗ್ಗದ ಈ ಮೊಬೈಲ್​ಗಾಗಿ 7.35 ಕೋಟಿ ಮಂದಿ ಬುಕ್ಕಿಂಗ್ ಮಾಡಿದ್ದು, 30 ಸಾವಿರ ಜನರು ಹಣ ಸಂದಾಯ ಮಾಡಿದ್ದಾರೆ.[99 ರು ಗಳಿಗೆ ಕೊಳ್ಳಿ ಸ್ಮಾರ್ಟ್ ಫೋನ್]

251 ರು ಬೆಲೆಯಲ್ಲೇ ಸ್ಮಾರ್ಟ್ ಫೋನ್ ಮಾರಾಟ ಮಾಡಿ ಪ್ರತಿ ಹ್ಯಾಂಡ್ ಸೆಟ್ ಮೇಲೆ 31 ರು ಲಾಭ ಪಡೆಯಲಾಗುವುದು ಎಂದು ರಿಂಗಿಂಗ್ ಬೆಲ್ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ಮೋಹಿತ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ['ಫ್ರೀಡಂ 251 ಮೊಬೈಲ್' ತಯಾರಕರಿಂದ ಹೊಸ ಪ್ರಕಟಣೆ]

ಆಡ್ ಕಾಮ್ ಕಂಪನಿ ಮೊಬೈಲ್ ಹ್ಯಾಡ್ ಸೆಟ್ ಸ್ಕ್ರೀನ್ ವಿನ್ಯಾಸವನ್ನು ನೀಡಿದ್ದರಿಂದ ಹ್ಯಾಂಡ್ ಸೆಟ್ ಮೇಲೆ Adcom ಹೆಸರಿದೆ ಈ ಬಗ್ಗೆ ಗೊಂದಲ ಬೇಡ. ಸ್ಮಾರ್ಟ್ ಫೋನ್ ನ ಉಪಕರಣಗಳು ತೈವಾನಿನಿಂದ ತರೆಸಿಕೊಂಡು ನೋಯ್ಡಾದ ಘಟಕದಲ್ಲಿ ಅಸೆಂಬಲ್ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಸಾಮರ್ಥ್ಯ ಕಂಪನಿಗಿದೆ ಎಂದು ಮತ್ತೊಬ್ಬ ನಿರ್ದೇಶಕ ಅಶೋಕ್ ಛಡ್ಡಾ ಹೇಳಿದ್ದಾರೆ.

ಗುಣಮಟ್ಟದಲ್ಲಿ ರಾಜಿ ಇಲ್ಲ, ಪ್ರತ್ಯೇಕ ಚಾರ್ಜರ್ ಬೇಕಿಲ್ಲ

ಗುಣಮಟ್ಟದಲ್ಲಿ ರಾಜಿ ಇಲ್ಲ, ಪ್ರತ್ಯೇಕ ಚಾರ್ಜರ್ ಬೇಕಿಲ್ಲ

* ಪ್ರತ್ಯೇಕ ಚಾರ್ಜರ್ ಕೊಳ್ಳಬೇಕು ಅದರ ಬೆಲೆ 2,500 ರು ಗೂ ಅಧಿಕ ಎಂಬುದು ಸುಳ್ಳು ಸುದ್ದಿ
* 4 ಇಂಚಿನ qHD IPS ಡಿಸ್​ಪ್ಲೇ
* 5.1 ಆಂಡ್ರಾಯ್ಡ್ OS
* ಫ್ರಂಟ್ ಕ್ಯಾಮರಾ 0.3 ಮೆಗಾ ಪಿಕ್ಸಲ್
* 3.2 MP ರೇರ್ ಕ್ಯಾಮರಾ
* 3ಜಿ * 1 ಜಿಬಿ ರಾಮ್ 8 ಜಿಬಿ ಸಂಗ್ರಹ ಸಾಮರ್ಥ್ಯ 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ.
* 1450 ಎಮ್​ಎಚ್ ಬ್ಯಾಟರಿ.

ದೇಶದೆಲ್ಲೆಡೆ ಸರ್ವೀಸ್ ಸೆಂಟರ್ ಆರಂಭ

ದೇಶದೆಲ್ಲೆಡೆ ಸರ್ವೀಸ್ ಸೆಂಟರ್ ಆರಂಭ

ದೇಶದ 650 ಸರ್ವೀಸ್ ಸೆಂಟರ್ ಗಳನ್ನು ಆರಂಭಿಸಲಾಗಿದೆ. ನೋಯ್ಡಾ ಹಾಗೂ ಉತ್ತರಾಂಚಲ್ ನಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು, 250 ಕೋಟಿ ರು ಹೂಡಿಕೆ ಮಾಡಲಾಗಿದೆ. ತೈವಾನಿನಿಂದ ಉಪಕರಣಗಳನ್ನು ತರೆಸಿಕೊಂಡು ಇಲ್ಲಿ ಅಸೆಂಬಲ್ ಮಾಡಲಾಗುತ್ತದೆ ಎಂದಿದ್ದಾರೆ.

ಅಪ್ಲಿಕೇಷನ್ ನೀಡುವ ಸಂಸ್ಥೆಯಿಂದ ಹೂಡಿಕೆ?

ಅಪ್ಲಿಕೇಷನ್ ನೀಡುವ ಸಂಸ್ಥೆಯಿಂದ ಹೂಡಿಕೆ?

ಸ್ವಚ್ಛ ಭಾರತ್, ಮಹಿಳಾ ಸುರಕ್ಷತೆ, ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಅಪ್ಲಿಕೇಷನ್ ತಕ್ಷಣಕ್ಕೆ ಗ್ರಾಹಕರಿಗೆ ಈ ಸ್ಮಾರ್ಟ್ ಫೋನಿನಲ್ಲಿ ಲಭ್ಯವಿರುತ್ತದೆ. ಅಪ್ಲಿಕೇಷನ್ ನೀಡುವ ಸಂಸ್ಥೆಯಿಂದ ಹೂಡಿಕೆ ಮಾಡಲು ತೊಡಗಿದರೆ ಸ್ಮಾರ್ಟ್ ಫೋನ್ ಬೆಲೆ ಇನ್ನಷ್ಟು ತಕ್ಕಿಸಬಹುದು. ತೆರಿಗೆ ಉಳಿತಾಯ, ವಿಶಿಷ್ಟ ಮಾರ್ಕೆಟಿಂಗ್ ಮೂಲಕ ಜನರಿಗೆ ಉತ್ತಮ ಸಾಧಕಗಳನ್ನು ನೀಡಬಹುದು ಎಂದು ಸಂಸ್ಥೆ ಹೇಳಿದೆ

ಮೊದಲ ಬ್ಯಾಚಿನಲ್ಲಿ 25 ಲಕ್ಷ ಮೊಬೈಲ್

ಮೊದಲ ಬ್ಯಾಚಿನಲ್ಲಿ 25 ಲಕ್ಷ ಮೊಬೈಲ್

ಇಲ್ಲಿ ತನಕ ಫ್ರೀಡಂ 251 ಗಾಗಿ ಸುಮಾರು 7 ಕೋಟಿ ಆನ್ ಲೈನ್ ನೋಂದಣಿಯಾಗಿದೆ. ಮೊದಲ ಬ್ಯಾಚಿನಲ್ಲಿ 25 ಲಕ್ಷ ಮೊಬೈಲ್ ಗಳನ್ನು ವಿತರಣೆ ಮಾಡಲಾಗುವುದು. ಜೂನ್ 30ರೊಳಗೆ ಸ್ಮಾರ್ಟ್ ಫೋನ್ ಗ್ರಾಹಕರ ಕೈ ಸೇರಲಿದೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಮೊಬೈಲ್ ಫೋನ್ ರೂಪಿಸಲಾಗಿದೆ. ಲಾಭ ಮಾಡುವುದೇ ನಮ್ಮ ಉದ್ದೇಶವಲ್ಲ ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The wait for the cheapest smartphone appears to be is finally over. Ringing Bell has announced today that it will start the delivery of its most controversial smartphone Freedom 251 from June 28.
Please Wait while comments are loading...