• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿಗೆ ಎಂಟ್ರಿ ಕೊಟ್ಟ ಅಮೆರಿಕದ ಅಮಾನೋ ಪಯೋನಿಯರ್ ಎಕ್ಲಿಪ್ಸ್

|

ಬೆಂಗಳೂರು, 16 ಜನವರಿ 2020: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ದೇಶದ ಉತ್ತರ ಕ್ಯಾಲಿಫೋರ್ನಿಯಾ ರಾಜ್ಯ ದಲ್ಲಿರುವ ಸ್ಪಾರ್ಟಾ ನಗರದ ಕಂಪನಿಯಾಗಿರುವ ಅಮಾನೋ ಪಯೋನಿಯರ್ ಎಕ್ಲಿಪ್ಸ್ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ವಿವಿಧ ನೆಲ ಹಾಸುಗಳ(ಫ್ಲೋರ್ ಕೇರ್) ಮತ್ತು ಟಾಯ್ಲೆಟ್ ಸ್ಯಾನಿಟೇಶನ್ ಕೆಮಿಕಲ್ ಗಳನ್ನು ಉತ್ಪಾದಿಸುತ್ತಿರುವ ಕಂಪನಿಯು ಪ್ರಸ್ತುತ ವಿಶ್ವದ 40 ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ತನ್ನ 1,50,000 ಚದರಡಿ ವಿಸ್ತೀರ್ಣದ ಉತ್ಪಾದನಾ ಘಟಕದಲ್ಲಿ ವಾರ್ಷಿಕ 30 ದಶಲಕ್ಷ ಗ್ಯಾಲನ್ ನಷ್ಟು ರಾಸಾಯನಿಕಗಳನ್ನು ಉತ್ಪಾದಿಸುತ್ತಿದೆ. ಈ ಮೂಲಕ ವಿಶ್ವದ ಅತಿ ದೊಡ್ಡ ಫ್ಲೋರ್ ಕೇರ್ ಮತ್ತು ಸ್ವಚ್ಛತಾ ಸಾಮಗ್ರಿಗಳನ್ನು (ಹೌಸ್ ಕೀಪಿಂಗ್ ಉತ್ಪನ್ನಗಳನ್ನು) ಉತ್ಪಾದಿಸುವ ಕಂಪನಿ ಎನಿಸಿದೆ.

ಕಂಪನಿಯು ಯಂತ್ರಗಳು ಮತ್ತು ರಾಸಾಯನಿಕಗಳಿಗಿಂತ ಜೊತೆ ಜೊತೆಗೆ ಅಮಾನೋ ಪಯೋನಿಯರ್ ಎಕ್ಲಿಪ್ಸ್ ನಿರ್ದಿಷ್ಟ ನಿರ್ವಹಣೆ ಪರಿಹಾರಗಳನ್ನು ಒದಗಿಸುತ್ತದೆ. ಕಂಪನಿಯ "ಎನ್ವಿರೋಸ್ಟಾರ್ ಗ್ರೀನ್" ಉತ್ಪನ್ನಗಳು ಪರಿಸರ ಸ್ನೇಹಿಯಾಗಿದ್ದು, ಸಂಪೂರ್ಣವಾದ ಸ್ವಚ್ಛತೆಯನ್ನು ನೀಡುತ್ತದೆ. ಸ್ಥಳೀಯ, ಪ್ರಾದೇಶಿಕ ಪರಿಸರ ಮತ್ತು ಹಸಿರು ಕಾನೂನಿನ ನಿಯಮಗಳಿಗೆ ಅನುಗುಣವಾಗಿ ಈ ಉತ್ಪನ್ನಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿವೆ.

ಕಡಿಮೆ ವೆಚ್ಚದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಪರಿಹಾರ

ಕಡಿಮೆ ವೆಚ್ಚದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಪರಿಹಾರ

ಇನ್ನು "ಪವರ್ ಸ್ಟಾರ್ ಹಾರ್ಡ್ ಫ್ಲೋರ್ ಮೇಂಟೇನೆನ್ಸ್ ಸಿಸ್ಟಮ್" ಯಂತ್ರ, ರಾಸಾಯನಿಕ ಹಾಗೂ ಇತರೆ ಫ್ಲೋರ್ ಕೇರ್ ಟೂಲ್ ಗಳನ್ನು ಹೊಂದಿದ್ದು, ಕಾಂಕ್ರೀಟ್, ಟೆರ್ರೆಜ್ಜೋ, ಸಿರಾಮಿಕ್ , ಮಾರ್ಬಲ್ ಮತ್ತು ಗ್ರಾನೈಟ್ ಸ್ಟೋನ್ ನೆಲಹಾಸುಗಳನ್ನು ಅತ್ಯಂತ ಶುಭ್ರವಾಗುವಂತೆ ಮಾಡುತ್ತದೆ. ಆಕ್ವಾಫಿಲ್ ಡೈಲೂಶನ್ ಕಂಟ್ರೋಲ್ ಸಿಸ್ಟಮ್ ಕಡಿಮೆ ವೆಚ್ಚದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಪರಿಹಾರವನ್ನು ನೀಡುತ್ತದೆ.

ಎಲ್ಲಾ ರೀತಿಯ ನೆಲಹಾಸುಗಳಿಗೆ ಸ್ವಚ್ಛತೆ

ಎಲ್ಲಾ ರೀತಿಯ ನೆಲಹಾಸುಗಳಿಗೆ ಸ್ವಚ್ಛತೆ

ಫ್ಲೋರ್ ಕೇರ್ ಸಿಸ್ಟಮ್ ಗಳಲ್ಲಿ ವಿಶೇಷವಾಗಿರುವ ಅಮಾನೋ ಪಯೋನಿಯರ್ ಎಕ್ಲಿಪ್ಸ್ ಎಲ್ಲಾ ರೀತಿಯ ನೆಲಹಾಸುಗಳಿಗೆ ಸ್ವಚ್ಛತಾ ಪರಿಹಾರಗಳನ್ನು ಒದಗಿಸಲಿದೆ. ಕಾರ್ಪೆಟ್ ಗಳಿಗೆ, ಪ್ರೈಮಿಂಗ್ ಮತ್ತು ಮರಕ್ಕೆ ಪರಿಸರ ಸ್ನೇಹಿ ಕೋಟಿಂಗ್ ರಾಸಾಯನಿಕಗಳನ್ನು ಪೂರೈಸುತ್ತದೆ. ವಿನೈಲ್ ಆಧಾರಿತ ಟೈಲ್ ಗಳಿಗೆ ಅತ್ಯುತ್ಕೃಷ್ಠವಾದ ಗ್ಲಾಸೀ ಹೊಳಪಿನ ಕೋಟಿಂಗ್ ಗಳು, ಮರದ ನೆಲಹಾಸಿಗೆಗೆ ಶುಭ್ರ ಕೋಟಿಂಗ್ ಗಳನ್ನು ನೀಡುತ್ತದೆ. ಅಮಾನೋ ಪಯೋನಿಯರ್ ಎಕ್ಲಿಪ್ಸ್ ನ ವೃತ್ತಿಪರರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಸ್ವಚ್ಛತಾ ಸಮಸ್ಯೆಗಳಿಗೆ ಉತ್ತಮ ಪರಿಹಾರ

ಸ್ವಚ್ಛತಾ ಸಮಸ್ಯೆಗಳಿಗೆ ಉತ್ತಮ ಪರಿಹಾರ

ಕಳೆದ 40 ವರ್ಷಗಳಲ್ಲಿ ಅಮಾನೋ ಪಯೋನಿಯರ್ ಎಕ್ಲಿಪ್ಸ್ ಪರಿಣತರು ಅತ್ಯಂತ ಕಠಿಣವಾದ ಸ್ವಚ್ಛತಾ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ನಿರಂತರವಾದ ಸುಧಾರಣೆ, ಉತ್ಪನ್ನದ ಅಭಿವೃದ್ಧಿ ಮತ್ತು ಅತ್ಯುತ್ತಮವಾದ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗುವ ಮೂಲಕ ಕಂಪನಿಯ ಉತ್ಪನ್ನಗಳು ವಿಶ್ವ ಮಾನ್ಯತೆ ಹೊಂದುವಂತೆ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕಂಪನಿಯು ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ವಿಭವ ಮಾರ್ಕೆಟಿಂಗ್ ಕಾರ್ಪೊರೇಷನ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.

ಸ್ವಚ್ಛತಾ ಪರಿಕರ ರಾಸಾಯನಿಕ ಉತ್ಪನ್ನಗಳು

ಸ್ವಚ್ಛತಾ ಪರಿಕರ ರಾಸಾಯನಿಕ ಉತ್ಪನ್ನಗಳು

ವಿಭವ ಮಾರ್ಕೆಟಿಂಗ್ ಕಂಪನಿಯು ಭಾರತದಲ್ಲಿ ಕಳೆದ 30 ವರ್ಷಗಳಿಂದ ಸ್ವಚ್ಛತಾ ಪರಿಕರ ರಾಸಾಯನಿಕಗಳ ಉತ್ಪನ್ನಗಳನ್ನು ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವಲ್ಲಿ ನಿಷ್ಣಾತವಾಗಿದೆ. 2020 ರ ಜನವರಿ 16 ರಂದು ಹೊಟೇಲ್ ರಾಡಿಸೊನ್ ಬ್ಲೂನಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಮಾಲೀಕರು, ಹೌಸ್ ಕೀಪಿಂಗ್ ಮ್ಯಾನೇಜರ್ ಗಳು ಮತ್ತು ಪ್ರಮುಖ ಪಂಚತಾರಾ ಹೊಟೇಲ್ ಗಳ ಸೌಲಭ್ಯ ವ್ಯವಸ್ಥಾಪಕರು, ದೊಡ್ಡ ಹಾಸ್ಪಿಟಲ್ ಗಳ ಜಾಲಗಳು, ಐಟಿ ಪಾರ್ಕ್ ಗಳ ಪ್ರಮುಖರು ಈ ಸಂದರ್ಭದಲ್ಲಿದ್ದರು.

ಕಂಪನಿಯ ಅಂತಾರಾಷ್ಟ್ರೀಯ ಕಾರ್ಯಾಚರಣೆಯ ಉಪಾಧ್ಯಕ್ಷರಾದ ಜಾಕ್ವೀಲೀನ್ ವ್ಯಾನ್ ಡೆಲ್ಫ್ಟ್, ಏಷ್ಯಾ ಮತ್ತು ಓಶಿಯಾನಾದ ಪ್ರಾದೇಶಿಕ ಮುಖ್ಯಸ್ಥ ಜೋಜು ವೆಲಾರ್ಡೆ, ವಿಭವದ ಕಾರ್ಯ ನಿರ್ವಾಹಕ ಮುಖ್ಯಸ್ಥ ಎಚ್.ಎನ್.ನಂದಕುಮಾರ್ ಸೇರಿದಂತೆ ಮತ್ತಿತರೆ ಪ್ರಮುಖರ ಸಮ್ಮುಖದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

English summary
One of the largest players in the world in Floor Care and House Keeping products Amano Pioneer Eclipse launches its product at Bengaluru with a strategic tie-up with Vibhava Marketing Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X