ವರ್ಷಾಂತ್ಯದ ಸೇಲ್ : ಫ್ಲಿಪ್ ಕಾರ್ಟ್ ನಿಂದ ರಿಯಾಯಿತಿ ಘೋಷಣೆ!

ಬೆಂಗಳೂರು, ಡಿಸೆಂಬರ್ 23: ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಅಂಗವಾಗಿ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ತನ್ನ ವೆಬ್ಸೈಟ್ ನಲ್ಲಿ ವರ್ಷಾಂತ್ಯದ ಭಾರಿ ರಿಯಾಯಿತಿ ಸೇಲ್ ಆರಂಭಿಸಿದೆ.

ಡಿಸೆಂಬರ್ 23 ರಿಂದ ಇಯರ್ ಎಂಡ್ ಕಾರ್ನಿವಲ್ ಸೇಲ್ ಆಯೋಜನೆ ಮಾಡಿದೆ. ಫ್ಲಿಪ್ಕಾರ್ಟ್ ಮಾರಾಟವು ಡಿಸೆಂಬರ್ 31 ರವರೆಗೆ ಇರಲಿದೆ. ಟಿವಿ ಸೇರಿದಂತೆ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ 70ರಷ್ಟು ರಿಯಾಯಿತಿ ಸಿಗಲಿದೆ.

ಒಂಭತ್ತು ದಿನಗಳ ಈ ಸೇಲ್ ನಲ್ಲಿ ಶಿಯೊಮಿ, ಸ್ಯಾಮ್ಸಂಗ್ ಸೇರಿದಂತೆ ಅನೇಕ ಕಂಪನಿಗಳು ರಿಯಾಯಿತಿ ನೀಡಲಿವೆ. ಗ್ರಾಹಕರಿಗೆ ವಾಷಿಂಗ್ ಮಷಿನ್, ಫ್ರಿಜ್, ಮೈಕ್ರೋವೇವ್ ಮೇಲೆ ಭರ್ಜರಿ ರಿಯಾಯಿತಿ ಸಿಗಲಿದೆ. ರಾತ್ರಿ 12 ಗಂಟೆಯಿಂದ 1 ಗಂಟೆಯವರೆಗೆ ಕೆಲ ಮ್ಯಾಜಿಕಲ್ ಡೀಲ್ಸ್ ಕೂಡ ಸಿಗಲಿದೆ.

Flipkart to offer massive year-end sale on large appliances

ಸೇಲ್ ನಲ್ಲಿ ಶಿಯೊಮಿ 22,999 ರೂಪಾಯಿಯ Mi 43 ಇಂಚಿನ ಟಿವಿ 4ಎಯನ್ನು 21,999 ರೂಪಾಯಿಗೆ ನೀಡ್ತಿದೆ. ಸ್ಯಾಮ್ಸಂಗ್ ನ 32 ಇಂಚಿನ ಹೆಚ್ ಡಿ ಎಲ್ಇಡಿ ಟಿವಿ 2018, 15,999 ರೂಪಾಯಿಗೆ ಸಿಗಲಿದೆ. ಇದರ ಮೂಲ ಬೆಲೆ 26,900 ರೂಪಾಯಿಯಾಗಿದೆ. ಈ ಟಿವಿ ಮೇಲೆ ಕಂಪನಿ 10,901 ರೂಪಾಯಿ ರಿಯಾಯಿತಿ ನೀಡಲಿದೆ.

Thomson B9 Pro 40 ಇಂಚಿನ ಫುಲ್ ಹೆಚ್ ಡಿ ಸ್ಮಾರ್ಟ್ ಟಿವಿ 25,999 ರೂಪಾಯಿ ಬದಲು 17,999 ರೂಪಾಯಿಗೆ ಸಿಗುತ್ತಿದೆ.

ಫ್ಯಾಷನ್ ವಸ್ತುಗಳ ಮೇಲೆ ಶೇ 90ರಷ್ಟು, ಪೀಠೋಪಕರಣದ ಮೇಲೆ ಶೇ 80ರಷ್ಟು ರಿಯಾಯಿತಿ ಸಿಗಲಿದೆ. ಎಸ್ ಬಿಐ ಕಾರ್ಡುದಾರರಿಗೆ ಶೇ 10ರಷ್ಟು ರಿಯಾಯಿತಿಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+