• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸ್ಕಿಲ್ ಇಂಡಿಯಾ: 20 ಸಾವಿರ ಸಿಬ್ಬಂದಿಗೆ ಫ್ಲಿಪ್ ಕಾರ್ಟ್ ಟ್ರೈನಿಂಗ್

|

ಬೆಂಗಳೂರು, ಆಗಸ್ಟ್ 12: ಭಾರತದಲ್ಲಿ ಮುಂಚೂಣಿಯಲ್ಲಿರುವ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಫ್ಲಿಪ್‍ಕಾರ್ಟ್ ದೇಶಾದ್ಯಂತ ತನ್ನ 20,000 ಕ್ಕೂ ಅಧಿಕ ವಿಶ್‍ಮಾಸ್ಟರ್ ಗಳಿಗೆ (ವಿತರಣಾ ಪ್ರತಿನಿಧಿಗಳು) ತರಬೇತಿ ನೀಡಲು ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೋರೇಶನ್(ಎನ್‍ಎಸ್‍ಡಿಸಿ) ನ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಎಲ್‍ಎಸ್‍ಸಿ) ಯೊಂದಿಗೆ ಪಾಲುದಾರಿಕೆಯನ್ನು ಸಾಧಿಸಿದೆ.

ಒಂದು ಇ-ಕಾಮರ್ಸ್ ಕಂಪನಿ ಮತ್ತು ಎನ್‍ಎಸ್‍ಸಿ ನಡುವೆ ಆಗಿರುವ ಮೊದಲ ಪಾಲುದಾರಿಕೆ ಇದಾಗಿದೆ. ಉತ್ಪನ್ನಗಳ ವಿತರಣೆ ಮತ್ತು ಗ್ರಾಹಕ ಅನುಭವದ ಎಲ್ಲಾ ಆಯಾಮಗಳಲ್ಲಿ ಈ ಸಪ್ಲೈ ಚೇನ್ ಮಾನವ ಶಕ್ತಿಯ ಕಾರ್ಯದಕ್ಷತೆಯನ್ನು ಪ್ರಮಾಣೀಕರಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ತನ್ನ ಕಾರ್ಯಪಡೆಗೆ ವೃತ್ತಿ ಪ್ರಗತಿಗೆ ಪೂರಕವಾದ ನೆರವನ್ನು ನೀಡಲು ಬದ್ಧತೆಯನ್ನು ಹೊಂದಿರುವ ಫ್ಲಿಪ್‍ಕಾರ್ಟ್, ಎಲ್‍ಎಸ್‍ಸಿಯೊಂದಿಗೆ ತನ್ನ ಹೆಚ್ಚುವರಿ 30,000 ಸ್ಟ್ರಾಂಗ್ ಸಪ್ಲೈ ಚೇನ್ ವರ್ಕ್‍ಫೋರ್ಸ್‍ಗೂ ಸಹ ತರಬೇತಿ ನೀಡಲಿದೆ.

54 ಲಕ್ಷ ಷೇರುಗಳನ್ನು ವಾಲ್ಮಾರ್ಟಿಗೆ ಮಾರಿದ ಬಿನ್ನಿ ಬನ್ಸಾಲ್

ತರಬೇತಿಯ ಭಾಗವಾಗಿ ಫ್ಲಿಪ್‍ಕಾರ್ಟ್, ಅತ್ಯುತ್ತಮವಾದ ರೀತಿಯಲ್ಲಿ ವಿತರಣೆ ವಿಧಾನಗಳನ್ನು ಅನುಸರಿಸಲು ಪೂರಕವಾಗುವಂತೆ ತನ್ನ ವಿತರಣಾ ಪ್ರತಿನಿಧಿಗಳಿಗೆ 8 ಗಂಟೆಗಳ ತರಬೇತಿಯನ್ನು ಎಲ್‍ಎಸ್‍ಸಿ ಮೂಲಕ ಕೊಡಿಸಲಿದೆ. ವಿತರಣೆಗೆ ಸಿದ್ಧಗೊಳ್ಳುವ ಸಂದರ್ಭದಿಂದ ಸ್ಥಳೀಯ ಸಂಚಾರ ನಿಯಮ ಮತ್ತು ಕಾನೂನುಗಳನ್ನು ತಿಳಿದುಕೊಳ್ಳುವುದು ಮತ್ತು ಕಡೆಯ ಗ್ರಾಹಕನವರೆಗಿನ ಸಪ್ಲೈ ಚೇನ್ ಬಗ್ಗೆ ವಿಸ್ತೃತವಾದ ಜ್ಞಾನವನ್ನು ಹೊಂದುವಂತೆ ಮಾಡುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ಇ-ಕಾಮರ್ಸ್ ಉದ್ದಿಮೆಯ ವಿಸ್ತೃತವಾದ ಪರಿಚಯ

ಇ-ಕಾಮರ್ಸ್ ಉದ್ದಿಮೆಯ ವಿಸ್ತೃತವಾದ ಪರಿಚಯ

ಒಟ್ಟಾರೆ ಈ ತರಬೇತಿ ತರಗತಿಗಳು ಕಾರ್ಯಪಡೆಗೆ ಇ-ಕಾಮರ್ಸ್ ಉದ್ದಿಮೆಯ ವಿಸ್ತೃತವಾದ ಪರಿಚಯವನ್ನು ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಇವುಗಳಲ್ಲದೇ, ಗ್ರಾಹಕರೊಂದಿಗೆ ಮೃದುವಾಗಿ ಸಂವಹನ ನಡೆಸುವ ಅಗತ್ಯತೆಗಳನ್ನು ಹೇಳಿಕೊಡುವ ವರ್ತನೆ ಕೇಂದ್ರಿತ ತರಗತಿಗಳು ಸಹ ಇರಲಿವೆ. ಈ ಉತ್ತಮ ಅಂಶಗಳು ಕಾರ್ಯದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ ಗ್ರಾಹಕ ಅನುಭವವನ್ನು ಸುಧಾರಿಸಲು ನೆರವಾಗುತ್ತವೆ.

ಲಾಜಿಸ್ಟಿಕ್ಸ್ ಸ್ಕಿಲ್ ಸೆಕ್ಟರ್ ಕೌನ್ಸಿಲ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ಯಾಪ್ಟನ್ ಟಿ.ಎಸ್.ರಾಮಾನುಜಂ ಅವರು ಮಾತನಾಡಿ, "ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಮತ್ತು ದೊಡ್ಡ ಮಟ್ಟದಲ್ಲಿ ಅಸಂಘಟಿತ ಲಾಜಿಸ್ಟಿಕ್ ಉದ್ಯಮಕ್ಕೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿದೆ. ಭಾರತದಲ್ಲಿ ಫ್ಲಿಪ್‍ಕಾರ್ಟ್ ಅತಿದೊಡ್ಡ ಇ-ಕಾಮಸ್ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಇಂತಹ ದೊಡ್ಡ ಮಟ್ಟದ ಸಹಯೋಗ ಹೊಂದಲು ಮುಂದೆ ಬಂದಿರುವುದಕ್ಕೆ ಸಂತಸವಾಗುತ್ತಿದೆ.

ಭಾರತೀಯ ಲಾಜಿಸ್ಟಿಕ್ ಕಾರ್ಯಪಡೆ

ಭಾರತೀಯ ಲಾಜಿಸ್ಟಿಕ್ ಕಾರ್ಯಪಡೆ

ಈ ಸಹಯೋಗವು ದೊಡ್ಡ ಸಂಖ್ಯೆಯಲ್ಲಿ ವಿತರಣಾ ಪ್ರತಿನಿಧಿಗಳನ್ನು ಹೊಂದಿರುವ ಇತರೆ ದೊಡ್ಡ ಕಂಪನಿಗಳಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ. ಅದೇ ರೀತಿ, ಅವರ ಬೆಳವಣಿಗೆ ಮತ್ತು ಯಶಸ್ಸಿಗೆ ಅವಕಾಶಗಳನ್ನು ಈ ಮೂಲಕ ಪಡೆಯಬಹುದಾಗಿದೆ. ನಮ್ಮ ಈ ಸಹಯೋಗ ಇದೇ ರೀತಿ ಮುಂದುವರಿದು ಭಾರತೀಯ ಲಾಜಿಸ್ಟಿಕ್ ಕಾರ್ಯಪಡೆಯಿಂದ ಸಂಘಟಿತ ಕ್ಷೇತ್ರವನ್ನಾಗಿ ಸೃಷ್ಟಿಸುತ್ತ ಸಾಗಲಿದೆ" ಎಂದು ಆಶಿಸಿದರು.

ಈ ತರಬೇತಿ ಪೂರ್ಣಗೊಂಡ ನಂತರ ವಿಶ್‍ಮಾಸ್ಟರ್ ಗಳಿಗೆ ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಶನ್ ಫ್ರೇಂವರ್ಕ್(ಎನ್‍ಎಸ್‍ಎಫ್‍ಕ್ಯೂ) ಪ್ರಕಾರ `ರೆಕಗ್ನಿಶನ್ ಆಫ್ ಪ್ರಿಯರ್ ಲರ್ನಿಂಗ್' (ಆರ್‍ಪಿಎಲ್) ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆಗಳ ಇಲಾಖೆ ನೀಡಲಿದೆ. ಜರ್ಮನಿ, ಡೆನ್ಮಾರ್ಕ್, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ಸೇರಿದಂತೆ 7 ದೇಶಗಳಲ್ಲಿ ಈ ಪ್ರಮಾಣಪತ್ರವನ್ನು ಪರಿಗಣಿಸಲಾಗುತ್ತದೆ. ಫ್ಲಿಪ್‍ಕಾರ್ಟ್ ಪ್ರಸ್ತುತ ಪ್ರತಿದಿನ ಎಲ್ಲಾ ಸ್ಥಳಗಳಲ್ಲಿ 1 ದಶಲಕ್ಷಕ್ಕೂ ಅಧಿಕ ಶಿಪ್‍ಮೆಂಟ್‍ಗಳನ್ನು ವಿತರಣೆ ಮಾಡುತ್ತಿದೆ.

ಫ್ಲಿಪ್‍ಕಾರ್ಟ್ ನಿಂದ ಮಹತ್ವದ ನಿರ್ಧಾರ, ಇ ವೆಹಿಕಲ್ ಬಳಕೆ ಹೆಚ್ಚಳ

ಉಪಾಧ್ಯಕ್ಷ ಅಮಿತೇಶ್ ಝಾ

ಉಪಾಧ್ಯಕ್ಷ ಅಮಿತೇಶ್ ಝಾ

ಇ-ಕಾರ್ಟ್‍ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಅವರು ಈ ಬಗ್ಗೆ ಮಾತನಾಡಿ, ``ಬದ್ಧತೆ ಹೊಂದಿರುವ ಕಂಪನಿಯಾಗಿರುವ ಫ್ಲಿಪ್‍ಕಾರ್ಟ್, ನಮ್ಮ ಕಾರ್ಮಿಕರಿಗೆ ಕೇವಲ ತರಬೇತಿ ನೀಡುವುದಷ್ಟೇ ಅಲ್ಲ, ಅವರ ಬೆಳಗವಣಿಗೆಯ ಮಾರ್ಗವನ್ನೂ ನೀಡುತ್ತೇವೆ. ಲಾಜಿಸ್ಟಿಕ್ ಸ್ಕಿಲ್ ಸೆಕ್ಟರ್ ಕೌನ್ಸಿಲ್‍ನ ಸಹಯೋಗದಲ್ಲಿ ನೀಡುತ್ತಿರುವ ತರಬೇತಿಯು ಅತ್ಯುತ್ತಮವಾಗಿದ್ದು, ಉತ್ಪನ್ನಗಳ ವಿತರಣೆ ಮತ್ತು ಗ್ರಾಹಕರ ಅನುಭವವನ್ನು ಹೆಚ್ಚು ಮಾಡುವ ಸಾಮಥ್ರ್ಯವನ್ನು ನಿರ್ಮಾಣ ಮಾಡುವ ರೀತಿಯಲ್ಲಿ ನಮ್ಮ ಬಲವಾದ ವಿತರಣಾ ಜಾಲದ ಕಾರ್ಯಪಡೆಯನ್ನು ಸಜ್ಜುಗೊಳಿಸಲು ನೆರವಾಗುತ್ತದೆ. ಈ ಪಾಲುದಾರಿಕೆಯೊಂದಿಗೆ ಸರ್ಕಾರದ ಕೌಶಲ್ಯ ಆಧಾರಿತ ಕಾರ್ಯಕ್ರಮವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ ಮತ್ತು ವಿತರಣಾ ಪ್ರತಿನಿಧಿಗಳು ಮತ್ತು ಗ್ರಾಹಕರ ಮೌಲ್ಯವನ್ನು ಹೆಚ್ಚಿಸಲಿದ್ದೇವೆ'' ಎಂದು ತಿಳಿಸಿದರು.

ಎಲ್‍ಎಸ್‍ಸಿ ಕಳೆದ ಮೇ ತಿಂಗಳಲ್ಲಿ ಫ್ಲಿಪ್‍ಕಾರ್ಟ್‍ನ ವಿಶ್‍ಮಾಸ್ಟರ್‍ಗಳಿಗೆ ತರಬೇತಿ ನೀಡಲು ಆರಂಭಿಸಿದೆ. ಇದುವರೆಗೆ 4,000 ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದ್ದು, ಮುಂಬರುವ ತಿಂಗಳುಗಳಲ್ಲಿ ತನ್ನ 30,000 ಪ್ರತಿನಿಧಿಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ.

ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು

ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು

ಲಾಜಿಸ್ಟಿಕ್ಸ್ ಸ್ಕಿಲ್ ಸೆಕ್ಟರ್ ಕೌನ್ಸಿಲ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕ್ಯಾಪ್ಟನ್ ಟಿ.ಎಸ್.ರಾಮಾನುಜಂ ಅವರು ಮಾತನಾಡಿ, ``ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಮತ್ತು ದೊಡ್ಡ ಮಟ್ಟದಲ್ಲಿ ಅಸಂಘಟಿತ ಲಾಜಿಸ್ಟಿಕ್ ಉದ್ಯಮಕ್ಕೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿದೆ. ಭಾರತದಲ್ಲಿ ಫ್ಲಿಪ್‍ಕಾರ್ಟ್ ಅತಿದೊಡ್ಡ ಇ-ಕಾಮಸ್ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಇಂತಹ ದೊಡ್ಡ ಮಟ್ಟದ ಸಹಯೋಗ ಹೊಂದಲು ಮುಂದೆ ಬಂದಿರುವುದಕ್ಕೆ ಸಂತಸವಾಗುತ್ತಿದೆ. ಈ ಸಹಯೋಗವು ದೊಡ್ಡ ಸಂಖ್ಯೆಯಲ್ಲಿ ವಿತರಣಾ ಪ್ರತಿನಿಧಿಗಳನ್ನು ಹೊಂದಿರುವ ಇತರೆ ದೊಡ್ಡ ಕಂಪನಿಗಳಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ. ಅದೇ ರೀತಿ, ಅವರ ಬೆಳವಣಿಗೆ ಮತ್ತು ಯಶಸ್ಸಿಗೆ ಅವಕಾಶಗಳನ್ನು ಈ ಮೂಲಕ ಪಡೆಯಬಹುದಾಗಿದೆ. ನಮ್ಮ ಈ ಸಹಯೋಗ ಇದೇ ರೀತಿ ಮುಂದುವರಿದು ಭಾರತೀಯ ಲಾಜಿಸ್ಟಿಕ್ ಕಾರ್ಯಪಡೆಯಿಂದ ಸಂಘಟಿತ ಕ್ಷೇತ್ರವನ್ನಾಗಿ ಸೃಷ್ಟಿಸುತ್ತ ಸಾಗಲಿದೆ'' ಎಂದು ಆಶಿಸಿದರು.

English summary
Walmart-owned Flipkart on August 11 said it has partnered with National Skill Development Corporation's Logistics Sector Skill Council (LSC) to train 20,000 of its delivery executives across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X