• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಕರೆಯಂತೆ ಮೇಡ್ ಇನ್ ಇಂಡಿಯಾ ಫರ್ನಿಚರ್: ಫ್ಲಿಪ್ ಕಾರ್ಟ್

|

ಬೆಂಗಳೂರು, ಜೂನ್ 16: ಭಾರತದ ದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ಪರ್ಫೆಕ್ಟ್ ಹೋಮ್ಸ್ ಜೂನಿಯರ್ ತನ್ನ ಫರ್ನಿಚರ್ ಆಯ್ಕೆಯನ್ನು ಸರಣಿಯನ್ನು ವಿಸ್ತರಣೆ ಮಾಡಿದೆ. ಸ್ಥಳೀಯವಾಗಿ ತಯಾರಾಗಿರುವ ಬೆಡ್ ಗಳು, ಸ್ಟಡಿ ಡೆಸ್ಕ್ ಗಳು, ಕಿಡ್ಸ್ ಸೀಟಿಂಗ್/ಟೇಬಲ್ ಮತ್ತು ಚೇರ್ ಹಾಗೂ ಸ್ಟೋರೇಜ್/ವಾರ್ಡ್ ರೋಬ್ ಗಳನ್ನು ತಯಾರಿಸುತ್ತಿದೆ. ಈ ಮೂಲಕ ಪ್ರಧಾನಿ ಮೋದಿ ಅವರು ಕರೆ ನೀಡಿದಂತೆ ವೋಕಲ್ ಫಾರ್ ಲೋಕಲ್ ಮಾರ್ಗ ಅನುಸರಿಸಿ ಮೇಡ್ ಇನ್ ಇಂಡಿಯಾ ಪೀಠೋಪಕರಣ ಕ್ಷೇತ್ರಕ್ಕೆ ಜಿಗಿದಿದೆ.

   America helps India by delivering its first batch of ventilators | Oneindia Kannada

   ಗ್ರಾಹಕರ ಸಂಶೋಧನೆ ಪ್ರಕಾರ ಮಕ್ಕಳು ತಮ್ಮದೇ ಆದ ಸ್ಥಳ ಮತ್ತು ಪೀಠೋಪಕರಣಗಳನ್ನು ಒದಗಿಸುವ ಸ್ವಾತಂತ್ರ್ಯವನ್ನು ಹೆಚ್ಚು ಹೊಂದಿದ್ದಾರೆ. ಈ ಸಂಶೋಧನೆಯ ಒಳನೋಟದ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಪರ್ಫೆಕ್ಟ್ ಹೋಮ್ಸ್ ಜೂನಿಯರ್ ಸರಣಿಯನ್ನು ವಿಶೇಷವಾಗಿ 'ಮಕ್ಕಳಿಗಾಗಿ ವಿನ್ಯಾಸ' ಗೊಳಿಸಲಾಗಿದೆ ಮತ್ತು ಗಾತ್ರವನ್ನು ಕಡಿಮೆ ಮಾಡಿಲ್ಲ.

   ಮನೆ ಬಾಗಿಲಿಗೆ ದಿನಸಿ; ಫ್ಲಿಪ್‌ ಕಾರ್ಟ್, ವಿಶಾಲ್ ಮಾರ್ಟ್‌ ಒಪ್ಪಂದ

   ಮಕ್ಕಳ ಶ್ರೇಣಿಯು ಕಾರ್ಯದಕ್ಷತೆ, ವೈಬ್ರೆಂಟ್ ಮತ್ತು ಅತ್ಯುನ್ನತ ದರ್ಜೆಯ ಫರ್ನಿಚರ್ ಅನ್ನು ಒಳಗೊಂಡಿದೆ. ಈ ಫರ್ನಿಚರ್ ಗಳಲ್ಲಿ ವಿಶಾಲವಾದ ಸ್ಟೋರೇಜ್ ಜಾಗ ಮತ್ತು ಅತ್ಯಾಕರ್ಷಕವಾಗಿ ಕಾಣುತ್ತವೆ. ಫ್ಲಿಪ್ ಕಾರ್ಟ್ ನ ಗ್ರಾಹಕ ಕೇಂದ್ರಿತ ತತ್ತ್ವದ ಆಧಾರದಲ್ಲಿ ಪರ್ಫೆಕ್ಟ್ ಹೋಮ್ಸ್ ಜೂನಿಯರ್ ಶ್ರೇಣಿಯಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.

   ರಾಸಾಯನಿಕಗಳಿಂದ ಮುಕ್ತ ಫರ್ನಿಚರ್

   ರಾಸಾಯನಿಕಗಳಿಂದ ಮುಕ್ತ ಫರ್ನಿಚರ್

   ಅಂದರೆ, ರೌಂಡೆಡ್ ಎಡ್ಜ್, ರಾಸಾಯನಿಕಗಳಿಂದ ಮುಕ್ತ, ಯಾವುದೇ ಪಿಂಚ್ ಮಾಡುವ ಭಾಗಗಳಿಲ್ಲದ ಗಟ್ಟಿಮುಟ್ಟಾದ ಭಾಗಗಳಿಲ್ಲ ಹಾಗೂ ದೀರ್ಘಬಾಳಿಕೆ ಸೇರಿದಂತೆ ಮತ್ತಿತರೆ ವೈಶಿಷ್ಟ್ಯತೆಗಳನ್ನು ಒಳಗೊಂಡಿವೆ. ಪ್ರತಿಯೊಂದು ಉತ್ಪನ್ನಗಳನ್ನು ಫ್ಲಿಪ್ ಕಾರ್ಟ್ ನಿಂದ ತರಬೇತಿ ಹೊಂದಿದ ತಂಡದಿಂದ ಅತ್ಯಂತ ಕಠಿಣ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮೂಲಕ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ನಿರ್ವಹಣೆ ಮಾಡಲಾಗುತ್ತದೆ.

   ಉಪಾಧ್ಯಕ್ಷ ದೇವ್ ಅಯ್ಯರ್ ಮಾತನಾಡಿ

   ಉಪಾಧ್ಯಕ್ಷ ದೇವ್ ಅಯ್ಯರ್ ಮಾತನಾಡಿ

   ಫ್ಲಿಪ್ ಕಾರ್ಟ್ ನ ಪ್ರೈವೇಟ್ ಲೇಬಲ್ ವಿಭಾಗದ ಉಪಾಧ್ಯಕ್ಷ ದೇವ್ ಅಯ್ಯರ್ ಅವರು ಮಾತನಾಡಿ, ''ಭಾರತೀಯ ಪೋಷಕರು ತಮ್ಮ ಮಕ್ಕಳಿಗೆ ಸೂಕ್ತವಾದ ಉತ್ಪನ್ನಗಳನ್ನು ಖರೀದಿ ಮಾಡುವಾಗ ಅವರ ಮನಸ್ಸಿನಲ್ಲಿರುವ ಕಳಕಳಿ ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಇವುಗಳು ಮೌಲ್ಯಾಧಾರಿತ ಮತ್ತು ಅತ್ಯುತ್ಕೃಷ್ಠವಾದ ಗುಣಮಟ್ಟವನ್ನು ಹೊಂದಿರುತ್ತವೆ'' ಎಂದಿದ್ದಾರೆ.

   Flipkart ಮೂಲಕ ನಿಮ್ಮನೆಗೆ ತಾಜಾ ಮಾವಿನ ಹಣ್ಣು ತರಿಸಿಕೊಳ್ಳಿ

   ಪರ್ಫೆಕ್ಟ್ ಹೋಮ್ಸ್ ಜೂನಿಯರ್ ಶ್ರೇಣಿ

   ಪರ್ಫೆಕ್ಟ್ ಹೋಮ್ಸ್ ಜೂನಿಯರ್ ಶ್ರೇಣಿ

   ''ಸುರಕ್ಷತೆ ಮತ್ತು ಕ್ರಿಯಾತ್ಮಕತೆಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿದೆ. ಫ್ಲಿಪ್ ಕಾರ್ಟ್ ಪರ್ಫೆಕ್ಟ್ ಹೋಮ್ಸ್ ಜೂನಿಯರ್ ಶ್ರೇಣಿಗಳು ಈ ಎಲ್ಲಾ ಅಗತ್ಯತೆಗಳನ್ನು ಪೂರೈಸಲಿವೆ. ಈ ವಿಸ್ತರಣೆಯೊಂದಿಗೆ ನಾವು ನಮ್ಮ ಕೊಡುಗೆಗಳನ್ನು ಆನ್ ಲೈನ್ ಫರ್ನಿಚರ್ ಕ್ಷೇತ್ರದಲ್ಲಿ ಮತ್ತಷ್ಟು ಬಲಗೊಳಿಸುತ್ತಿದ್ದೇವೆ. ವಿಶೇಷವಾಗಿ ಪೋಷಕರು ಮನೆಯಲ್ಲಿರುವ ತಮ್ಮ ಮಕ್ಕಳಿಗೆ ಪ್ರತ್ಯೇಕವಾದ ಜಾಗದ ಬಗ್ಗೆ ಹೆಚ್ಚು ಗಮನಹರಿಸುತ್ತಿರುವ ಈ ದಿನಗಳಲ್ಲಿ ಆನ್ ಲೈನ್ ಫರ್ನಿಚರ್ ಕ್ಷೇತ್ರವನ್ನು ಬಲಗೊಳಿಸುವ ನಿಟ್ಟಿನಲ್ಲಿ ಗಮನಹರಿಸಿದ್ದೇವೆ'' ಎಂದು ದೇವ್ ಅಯ್ಯರ್ ತಿಳಿಸಿದರು.

   ಪರ್ಫೆಕ್ಟ್ ಹೋಮ್ಸ್ ಸ್ಟುಡಿಯೋ ಶ್ರೇಣಿ

   ಪರ್ಫೆಕ್ಟ್ ಹೋಮ್ಸ್ ಸ್ಟುಡಿಯೋ ಶ್ರೇಣಿ

   ಫ್ಲಿಪ್ ಕಾರ್ಟ್ ಕಳೆದ ಫೆಬ್ರವರಿ 2020 ರಲ್ಲಿ ಪರ್ಫೆಕ್ಟ್ ಹೋಮ್ಸ್ ಸ್ಟುಡಿಯೋ ಶ್ರೇಣಿಯನ್ನು ಬಿಡುಗಡೆ ಮಾಡಿತ್ತು. ಸ್ಲೀಕ್, ಕನಿಷ್ಠ ಮತ್ತು ಕ್ರಿಯಾತ್ಮಕ ಫರ್ನಿಚರ್ ಗಳನ್ನು ಇಷ್ಟಪಡುವ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಶ್ರೇಣಿಯನ್ನು ಬಿಡುಗಡೆ ಮಾಡಿತ್ತು. ಬೆಲೆ, ಗುಣಮಟ್ಟ ಮತ್ತು ವೆರೈಟಿ ವಿಚಾರದಲ್ಲಿ ಆನ್ ಲೈನ್ ಫರ್ನಿಚರ್ ಆಫರ್ ನಲ್ಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಉತ್ಪನ್ನಗಳು ಸ್ಥಳೀಯವಾಗಿ ಉತ್ಪಾದನೆಯಾಗುವ ಮೂಲಕ ಸ್ಥಳೀಯ ಮಟ್ಟದ ಉತ್ಪಾದನಾ ಸಮುದಾಯದ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಉದ್ಯೋಗ ಸೃಷ್ಠಿಗೆ ಸಹಕಾರಿಯಾಗಿ ಅವರ ಜೀವನೋಪಾಯ ಉತ್ತಮವಾಗುವಂತೆ ಮಾಡುತ್ತದೆ.

   English summary
   Major e-commerce giant Flipkart has debuted into the kids furniture segment which suites vocal for local call from PM.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X