ಹೋಟೆಲ್ ರೂಮ್ ಬುಕ್ಕಿಂಗ್ ವಲಯಕ್ಕೆ ಲಗ್ಗೆಯಿಟ್ಟ ಫ್ಲಿಪ್‌ಕಾರ್ಟ್!
ನವದೆಹಲಿ, ಸೆಪ್ಟೆಂಬರ್ 6: ಶಾಪಿಂಗ್ ಮಾಡುವ ಮಂದಿಗೆ ಫ್ಲಿಪ್‌ಕಾರ್ಟ್ ಬಗ್ಗೆ ಗೊತ್ತಿರದೇ ಇರುವುದಿಲ್ಲ. ಶಾಪಿಂಗ್ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿರುವ ಅದೇ ಪ್ಲಿಪ್ ಕಾರ್ಟ್ ಕಂಪನಿಯು ಮತ್ತೊಂದು ವಲಯಕ್ಕೆ ಎಂಟ್ರಿ ಕೊಟ್ಟಿದೆ.
ಆನ್‌ಲೈನ್ ಟ್ರಾವೆಲ್ ಅಗ್ರಿಗೇಟರ್ ಕ್ಲಿಯರ್‌ಟ್ರಿಪ್ ಅನ್ನು ಸ್ವಾಧೀನಪಡಿಸಿಕೊಂಡ ಒಂದೇ ವರ್ಷದಲ್ಲಿ ಹೋಟೆಲ್ ಬುಕ್ಕಿಂಗ್ ವಲಯದಲ್ಲೂ ತನ್ನ ಛಾಪು ಮೂಡಿಸುವುದಕ್ಕೆ ಫ್ಲಿಪ್‌ಕಾರ್ಟ್ ಅಣಿಯಾಗಿದೆ. ವಾಲ್‌ಮಾರ್ಟ್-ಮಾಲೀಕತ್ವದ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್, ಹಬ್ಬದ ಸೀಸನ್‌ಗೆ ಮೊದಲೇ ಹೋಟೆಲ್-ಬುಕಿಂಗ್ ವಿಭಾಗವನ್ನು ಪ್ರವೇಶಿಸಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಅವಕಾಶವನ್ನು ಫ್ಲಿಪ್‌ಕಾರ್ಟ್ ಒದಗಿಸುತ್ತದೆ. 3 ಲಕ್ಷದವರೆಗೆ ಗ್ರಾಹಕರು ಫ್ಲಿಪ್‌ಕಾರ್ಟ್ ಮುಖೇನ ರೂಮ್ಸ್ ಬುಕ್ಕಿಂಗ್ ಮಾಡಬಹುದು. ಹೋಟೆಲ್ ವಲಯದಲ್ಲಿ ಫ್ಲಿಪ್‌ಕಾರ್ಟ್ ಲಗ್ಗೆ ಇಡುವುದಕ್ಕೆ ಕಾರಣವೇನು? ಇದು ಸಾಮಾನ್ಯ ಗ್ರಾಹಕರಿಗೆ ಹೇಗೆ ಉಪಯುಕ್ತವಾಗಲಿದೆ?. ಫ್ಲಿಪ್‌ಕಾರ್ಟ್ ಮೂಲಕ ರೂಮ್ ಬುಕ್ಕಿಂಗ್ ಮಾಡುವುದು ಹೇಗೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ಫ್ಲಿಪ್‌ಕಾರ್ಟ್ ಮೂಲಕ ಹೋಟೆಲ್ ಬುಕ್ಕಿಂಗ್ ವೈಶಿಷ್ಟ್ಯ
ಸಾಲು ಸಾಲು ಹಬ್ಬದ ಹೊಸ್ತಿಲಿನಲ್ಲಿ ಹೋಟೆಲ್ ಬುಕ್ಕಿಂಗ್ ಉದ್ಯಮಕ್ಕೆ ಫ್ಲಿಪ್‌ಕಾರ್ಟ್ ಎಂಟ್ರಿ ಕೊಟ್ಟಿದ್ದು ಆಗಿದೆ. ಇದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಪ್ರಯಾಣ, ಬುಕ್ಕಿಂಗ್ ಸಂಬಂಧಿತ ನೀತಿಗಳು, ಕೈಗೆಟುಕುವ ದರದಲ್ಲಿ ಇಎಂಐ ಆಯ್ಕೆಗಳು, ಬಜೆಟ್ ಸ್ನೇಹಿ ಆಯ್ಕೆಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಆ ಮೂಲಕ ಗ್ರಾಹಕರನ್ನು ಸೆಳೆಯುವುದಕ್ಕೆ ಫ್ಲಿಪ್‌ಕಾರ್ಟ್ ಯೋಜನೆ ಹಾಕಿಕೊಂಡಿದೆ.
"ಕ್ಲಿಯರ್‌ಟ್ರಿಪ್‌ನ API ಬೆಂಬಲದೊಂದಿಗ ಪ್ರಯಾಣದ ಗ್ರಾಹಕರು ಫ್ಲಿಪ್‌ಕಾರ್ಟ್ ಹೋಟೆಲ್‌ಗಳ ಬಗ್ಗೆ ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬಹುದು. ಇದರ ಜೊತೆಗೆ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಕೂಡ ಈ ಅವಕಾಶ ಲಭ್ಯವಿರುತ್ತದೆ. ಹೊಸ ಕೊಡುಗೆಯು ತೊಂದರೆ-ಮುಕ್ತ ಬುಕಿಂಗ್ ಅನುಭವವನ್ನು ಮತ್ತು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಸಮಯೋಚಿತ ಸಂವಹನವನ್ನು ಒದಗಿಸುತ್ತದೆ," ಎಂದು ಕಂಪನಿ ಹೇಳಿದೆ.

ಬೆಸ್ಟ್ ಆಫರ್ ಅನ್ನು ನೀಡುತ್ತಿರುವ ಫ್ಲಿಪ್‌ಕಾರ್ಟ್
ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಮೂರನೇ ವ್ಯಕ್ತಿಯ ಕೊಡುಗೆಗಳನ್ನು ಪಡೆಯಲು ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಮತ್ತಷ್ಟು ಅನುವು ಮಾಡಿಕೊಡುತ್ತದೆ. ಹೋಟೆಲ್ ಬುಕಿಂಗ್ ಸೇವೆಯಿಂದ ಉಂಟಾಗುವ ಬಳಕೆದಾರರಿಗೆ ಸಂಬಂಧಿಸಿದ ಪ್ರಶ್ನೆಗಳೊಂದಿಗೆ ಗ್ರಾಹಕರನ್ನು ಬೆಂಬಲಿಸಲು ಕಂಪನಿಯು ಮೀಸಲಾದ ಗ್ರಾಹಕರ ಸಹಾಯವಾಣಿ ಕೇಂದ್ರವನ್ನು ಸಹ ಸ್ಥಾಪಿಸಿದೆ.
"2022 ರೂ. ಇಲ್ಲಿಯವರೆಗೆ ಆತಿಥ್ಯ ಉದ್ಯಮಕ್ಕೆ ಉತ್ತಮ ವರ್ಷವಾಗಿದೆ, ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ವಸತಿ ಮಾರುಕಟ್ಟೆಯಲ್ಲಿ ಬೇಡಿಕೆಯು ಗಮನಾರ್ಹವಾಗಿ ಏರಿಕೆ ಆಗುವಂತೆ ಮಾಡಿದೆ. ಹೊಸ ಸ್ಥಳಗಳ ಅನ್ವೇಷಿಸುವಂತಹ ಹೊಸ ಪ್ರಯಾಣದ ಪ್ರವೃತ್ತಿ, ಕೆಲಸ, ದೀರ್ಘಾವಧಿಯ ತಂಗುವಿಕೆ ಮತ್ತು ರಜೆ ದಿನದ ಬಾಡಿಗೆ ತೆಗೆದುಕೊಳ್ಳುವವರು ಮುಖ್ಯವಾಹಿನಿಗೆ ಬರುತ್ತಾರೆ," ಎಂದು ಕಂಪನಿ ಹೇಳಿದೆ.

ದೇಶದಲ್ಲಿ ಪ್ರಯಾಣ ಉದ್ಯಮದಲ್ಲಿ ಚೈತನ್ಯ
ಭಾರತದಲ್ಲಿ ಕೋವಿಡ್-19 ಕಾಲದ ನಂತರದಲ್ಲಿ ಪ್ರಯಾಣದ ಉದ್ಯಮಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ. "ಈ ಬೆಳವಣಿಗೆಗಳು ಪ್ರಯಾಣ ಉದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಶೇ.60ರಷ್ಟಿದ್ದ ಪ್ರಮಾಣವು ಸಿಎಜಿಆರ್‌ಗೆ ಹೋಲಿಸಿದರೆ ಕಳೆದ ತ್ರೈಮಾಸಿಕದಲ್ಲಿ ಶೇ.70 ಪ್ರತಿಶತದಷ್ಟು ಬೆಳವಣಿಗೆಯಾಗಿದೆ. ಮುಂದಿನ ಹಬ್ಬದ ತ್ರೈಮಾಸಿಕದಲ್ಲಿ ಒಟ್ಟಾರೆ ಪ್ರಯಾಣ ಉದ್ಯಮಕ್ಕೆ ಇನ್ನೂ ಉತ್ತಮವಾಗಿರುತ್ತದೆ ಎಂದು ಕಂಪನಿಯು ಹೇಳಿದೆ. ಆದಾಗ್ಯೂ, ಹಣದುಬ್ಬರದಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಬ್ಬದ ಕಾಲದಲ್ಲಿ ಮಾರಾಟದಲ್ಲಿನ ಬೆಳವಣಿಗೆ ಈ ವರ್ಷ ಮ್ಯೂಟ್ ಆಗುವ ನಿರೀಕ್ಷೆಯಿದೆ. ಕಳೆದ ಕೆಲವು ವರ್ಷಗಳಲ್ಲಿ 25-50 ಪ್ರತಿಶತಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ 15-20 ಪ್ರತಿಶತದಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಆನ್‌ಲೈನ್ ಮಾರಾಟದ ಬೆಳವಣಿಗೆಯ ಮೇಲೆ ಪರಿಣಾಮ
ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟವು ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ. ಫ್ಯಾಷನ್, ಸೌಂದರ್ಯವರ್ಧಕಗಳು ಮತ್ತು ಗೃಹಾಲಂಕಾರಗಳ ಮಾರಾಟದಲ್ಲಿ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ಕೋವಿಡ್-19 ಭಯದಿಂದ ಹೊರಗೆ ಬಂದಿರುವ ಜನರು ಆಫ್‌ಲೈನ್ ಶಾಪಿಂಗ್ ಕಡೆಗೆ ಮುಖ ಮಾಡಿದ್ದಾರೆ. ಆಫ್‌ಲೈನ್ ಶಾಪಿಂಗ್ ಪುನಾರಂಭವು ಆನ್‌ಲೈನ್ ಮಾರಾಟದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಲ್ಲದು.
"ಆಫ್‌ಲೈನ್‌ನ ಪುನಾರಂಭದಿಂದ ಇ-ಕಾಮರ್ಸ್ ಮಾರಾಟವು ಈಗ ಎರಡು ವಿಷಯಗಳ ಮೇಲೆ ನಿಂತಿರುತ್ತದೆ. ಯಾವ ರೀತಿ ದರವನ್ನು ನಿಗದಿಪಡಿಸಲಾಗುವುದು ಹಾಗೂ ಎಷ್ಟು ರಿಯಾಯತಿಯನ್ನು ನೀಡುತ್ತಾರೆ ಎಂಬುದರ ಮೇಲೆ ವಹಿವಾಟುಗಳು ನಿರ್ಧಾರವಾಗುತ್ತವೆ. 3 ಮತ್ತು 4ನೇ ಶ್ರೇಣಿಯ ಮಾರುಕಟ್ಟೆಗಳಲ್ಲಿ ಚಿಲ್ಲರೆ ವ್ಯಾಪಾರಿಯು ತೀವ್ರ ಕುಸಿತವನ್ನು ಎದುರಿಸುತ್ತಿದ್ದಾನೆ. ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಚಿಲ್ಲರೇ ವ್ಯಾಪಾರವು ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ," ಎಂದು ತಿಳಿಸಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications