ನಿಮ್ಮ ಕನಸಿನ ಮನೆ ಹುಡುಕ್ತಿದ್ದೀರಾ, ಅದೀಗ ಇನ್ನೂ ಸುಲಭ!

Posted By:
Subscribe to Oneindia Kannada

ಮೊದಲ ಹುಟ್ಟುಹಬ್ಬ, ಪುಟ್ಟ ತಂಗಿಯೋ ತಮ್ಮನೋ ಬರುವ ಸಂಭ್ರಮ, ಮೆಚ್ಚಿನ ತೋಟದಲ್ಲಿ ಅರಳಿದ ಹೂಗಳೊಂದಿಗೆ ಗಂಟೆಗಟ್ಟಲೆ ಆಡುವ ಸಂತಸ, ಅದೇ ತೋಟದಲ್ಲಿ ಕುಳಿತು ಸುಂದರ ಕಥೆಗಳನ್ನು ಕೇಳುವ ಹರುಷ... ವಾವ್ ವಾವ್ ಇಂಥ ಅವಿಸ್ಮರಣೀಯ ಕ್ಷಣಗಳನ್ನು ಮರೆಯಲು ಸಾಧ್ಯವೆ? ಮನೆಗೆ ಸಂಬಂಧಿಸಿದಂತೆ ಇಂಥ ಹಲವಾರು ಘಟನೆಗಳು ಮನದಲ್ಲಿ ಅಚ್ಚಳಿಯದೆ ಉಳಿದಿರುತ್ತವೆ. ಅಲ್ಲವೆ?

ಇಂಥ ಅವೆಷ್ಟೋ ಘಟನೆಗಳು ನೆನಪೆಂಬ ತೋಟದಲ್ಲಿ ಆಗಾಗ ಅರಳುತ್ತಿರುತ್ತವೆ, ಸುವಾಸನೆ ಬೀರುತ್ತಿರುತ್ತವೆ. ಅವುಗಳನ್ನು ಆಗಾಗ ನೆನೆದಾಗ ಮನಸ್ಸು ಜೋಕಾಲಿಯಾಗುತ್ತದೆ, ಹಾರುವ ಹಕ್ಕಿಯಾಗುತ್ತದೆ. ನಮ್ಮ ಬದುಕಲ್ಲಿ ಮರುಕಳಿಸುವ ಈ ನೆನಪುಗಳು ನಮ್ಮನ್ನು ಭಾವುಕವನ್ನಾಗಿಯೂ ಮಾಡಿಸುತ್ತವೆ.

ತುಂಬ ಮುಖ್ಯವಾದ, ಭಾವನಾತ್ಮಕವಾಗಿ ತಳಕು ಹಾಕಿಕೊಂಡ ಅದೆಷ್ಟು ಘಟನೆಗಳು ನಮ್ಮ ನೆನಪುಗಳಲ್ಲಿ ಹೆಜ್ಜೆಯೂರಿವೆ ಅಲ್ಲವೇ? ಮಗುವೊಂದು ಪುಟ್ಟ ಹೆಜ್ಜೆಯಿಡುತ್ತಾ ಬಂದ ಕ್ಷಣ, ಮದುವೆಯಾಗುವ ಮಧುರ ಘಳಿಗೆ, ಅಪ್ಪ-ಅಮ್ಮನಿಗೆ ಹುಷಾರಿಲ್ಲದಾಗ ರಾತ್ರಿಯಿಡೀ ಎಚ್ಚರವಾಗಿದ್ದು ತೋಳಿನ ಆಸರೆ ನೀಡಿದ್ದು, ರಜೆ ಮುಗಿಸಿ ಕಾಲೇಜಿಗೆ ಹೋದ ಮೊದಲ ದಿನ, ಹೊಸ ಕೆಲಸ, ಹೊಸ ಮನೆ ಖರೀದಿಸಿದ ಕ್ಷಣ.. ಓಹ್ ಎಷ್ಟು ಸಂತಸ!

Finding Your Dream House, Just Got Better

ಈ ನೆನಪುಗಳದ್ದು ಒಂದು ತೂಕವಾದರೆ, ಮನೆ ಖರೀದಿ ಮಾಡಿ, ಗೃಹ ಪ್ರವೇಶ ಮಾಡುವ ಆ ಖುಷಿಯಿದೆಯಲ್ಲ, ಅದಕ್ಕೆ ಸಮವಾದದ್ದು ಯಾವುದೂ ಇಲ್ಲ. ಕೆಲವರು ಒಪ್ಪಬಹುದು, ಒಪ್ಪದೆಯೂ ಇರಬಹುದು, ಮನೆ ಕೊಳ್ಳುವ ಹಂತ ತ್ರಾಸದಾಯಕವಾಗಿದ್ದರೂ, ಕೊನೆಯಲ್ಲಿ ನೀಡುವ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುವುದಿಲ್ಲ.

ಮನೆ ಕೊಳ್ಳುವುದನ್ನು ಕೇವಲ ಹೂಡಿಕೆಯಾಗಿ ಮಾತ್ರ ತಿಳಿಯಬಾರದು. ಅದೊಂದು ಸಾಧನೆ ಬದುಕಿನ ಉಳಿದ ಅವಧಿಗೂ ಖುಷಿಯನ್ನು, ಹೆಮ್ಮೆಯನ್ನು ಸಾಧಿಸಿದ ಮುಗುಳುನಗೆಯೊಂದನ್ನು ಹೃದಯದಲ್ಲಿ ಚಿರಸ್ಥಾಯಿಯಾಗಿ ಅರಳಿಸಿರುತ್ತದೆ.

ಮನೆ ನಮಗೆ ಕೇವಲ ಸೂರಲ್ಲ. ಅಲ್ಲಿ ನೆನಪುಗಳಿವೆ. ಮಕ್ಕಳ ಬೆಳವಣಿಗೆ, ಅವರ ಆಟ, ಪುಟ್ಟ ಬೆರಳುಗಳಿಂದ ಗೀಚಿದ ಗೋಡೆ ಮೇಲಿನ ಚಿತ್ರಗಳು, ಹಾಲು ಹಾಲು ಪಾದಗಳ ಗುರುತು, ಹೆಂಡತಿಯ ಮಡಿಲಲ್ಲಿ ಬರೀ ನೆಲದ ಮೇಲೆ ಮಲಗಿದ ಕ್ಷಣಗಳು, ಗಂಡನ ತೋಳಲ್ಲಿ ಸುಮ್ಮನೆ ಬಿಕ್ಕಿದ್ದು, ವಯಸ್ಸಿನ ಚಕ್ರ ಸಾಗಿದಂತೆಲ್ಲ ನೆನಪುಗಳು ಕಣಜ ತುಂಬಿ, ಮನೆಯ ಪ್ರತಿ ಇಟ್ಟಿಗೆಯೂ ಏನನ್ನೋ ಹೇಳುತ್ತದೆ ಎನಿಸುತ್ತದೆ.

ಮನೆಯೊಂದನ್ನು ಕೊಳ್ಳುವುದೋ ಮಾರುವುದೋ ಅದು ಬರೀ ನಿರ್ಧಾರವಲ್ಲ. ಅದರ ಜತೆಗೆ ದುಡ್ಡು-ಕಾಸು, ಭಾವನೆಗಳು ಎಲ್ಲವೂ ಇದೆ. ಒಂಚೂರು ಮೈ ಮರೆತರೆ ಪಾತಾಳಕ್ಕೆ ತಲುಪಿಸುವ ನಿರ್ಧಾರ, ಒಂದೊಳ್ಳೆ ತೀರ್ಮಾನದಿಂದ ಅದೆಷ್ಟೋ ತಲೆಮಾರಿನ ಸಂತಸಕ್ಕೆ, ಸಂಭ್ರಮಕ್ಕೆ ಕಾರಣವಾಗುತ್ತದೆ. ಆದ್ದರಿಂದ ಒಂದು ಒಳ್ಳೆ ಹಾಗೂ ಜೇಬಿಗೆ ಸರಿಹೊಂದುವ ಆಸ್ತಿ ಹುಡುಕುವುದು ಕೂಡ ಬಹಳ ಮುಖ್ಯ.

ಮನೆ ಖರೀದಿಸುವುದಕ್ಕೋ ಮಾರುವುದಕ್ಕೋ ಹೊರಡುವ ನಮಗೆ ಮನೆಗಳ ಮಾರುಕಟ್ಟೆ, ಅದರ ಬೆಲೆಗಳ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ನಾವು ಯಾರನ್ನೋ ಅವಲಂಬಿಸಬೇಕು, ಅವರು ಕರೆದುಕೊಂಡು ಹೋದ ಕಡೆ ಹೋಗಬೇಕು. ಕೆಲವು ಸಲ ನಮಗೆ ಅದರ ಸರಿಯಾದ ಬೆಲೆ ಗೊತ್ತಿಲ್ಲದೆ ನಮ್ಮ ವರ್ಷಗಳ ದುಡಿಮೆಯ ದೊಡ್ಡ ಪಾಲನ್ನು ಹೆಚ್ಚಿಗೆ ಕೊಟ್ಟು, ಶ್ರಮ ಪಡ್ತೀವಿ.

Finding Your Dream House, Just Got Better

ಈ ರೀತಿ ಆದಾಗ ಆಶ್ಚರ್ಯ ಆಗೋದು ಏನೆಂದರೆ, ನಾವು ಧೈರ್ಯವಾಗಿ ನಂಬಬಹುದಾದ ದಾರಿಯೊಂದಿದ್ದರೆ ಅಂತ. ಒಂದು ಮೊಬೈಲ್ ಅಪ್ಲಿಕೇಷನ್ನೋ, ವೆಬ್ ಸೈಟೋ ಅದರಿಂದ ನಮಗೆ ಯಾವುದೇ ಆಸ್ತಿಯ ಸರಿಯಾದ ಬೆಲೆ ಗೊತ್ತಾಗಬೇಕು. ನಾವು ಯಾವುದೇ ಭಯಪಡದೆ ಮನೆಯನ್ನು ಕೊಳ್ಳುವುದಕ್ಕೋ ಮಾರುವುದಕ್ಕೋ ಸಾಧ್ಯ ಆಗಬೇಕು.

ಮೊದಲ ಸಲ ಮನೆ ಮಾರುವಾಗಲೋ ಕೊಳ್ಳುವಾಗಲೋ ಏನೂ ಗೊತ್ತಿಲ್ಲದಿರುವ ಬೇರೆಯವರ ಥರ ನಮ್ಮ ಸ್ಥಿತಿ ಆಗಬಾರದು. ನಮ್ಮ ಕನಸಿನ ಮನೆ ಹುಡುಕುವಾಗ ವಿಪರೀತ ಆತಂಕ ಆಗಬಾರದು. ನಾವೇನಾದರೂ ಹೆಚ್ಚು ಹಣ ಕೊಟ್ಟುಬಿಡ್ತೇವೆ ಎಂಬ ಆತಂಕ ನಮಗಿತ್ತು. ಆಗ ನನ್ನ ಸ್ನೇಹಿತರು ಹೇಳಿದ್ದು ಮ್ಯಾಜಿಕ್ ಬ್ರಿಕ್ಸ್ ನ ಪ್ರಾಪ್ ವರ್ತ್ ಫೀಚರ್ ಬಗ್ಗೆ. ಪ್ರಾಪ್ ವರ್ತ್ ಯಾವುದೇ ಆಸ್ತಿಯ ಸರಿಯಾದ ಬೆಲೆಯನ್ನು ತಿಳಿಯುವುದಕ್ಕೆ ಸಹಾಯ ಮಾಡುತ್ತೆ. ಅದೂ ಮೂರೇ ಸ್ಟೆಪ್ಸ್ ನಲ್ಲಿ.

ಇದು ನಮ್ಮ ಹುಡುಕಾಟವನ್ನ ಇನ್ನೂ ಸುಲಭ ಮಾಡಿತು. ಲೋಕಲ್ ಏಜೆಂಟ್ ಗಳು, ಮಾರಾಟಗಾರರ ಜತೆ ಮಾತನಾಡುವ ಮುಂಚೆ ಆಸ್ತಿಯ ಮೌಲ್ಯ ತಿಳಿದುಕೊಳ್ಳೋಕೆ ಸಹಾಯ ಆಯಿತು. ಅವರ ಜೊತೆ ಮಾತುಕತೆಗೆ ಇಳಿಯುವುದಕ್ಕೆ, ಚೌಕಾಶಿ ಮಾಡೋದಿಕ್ಕೆ ತುಂಬ ಸಲೀಸಾಯಿತು. ಮನೆ ಖರೀದಿಸುವಾಗ ಎಂಆರ್ ಪಿ ಎಲ್ಲಾದರೂ ಉಂಟಾ? ಈ ಅಪ್ಲಿಕೇಷನ್ ಈಗ ಮನೆ ಕೊಳ್ಳುವವರು, ಮಾರುವವರು, ಏಜೆಂಟರು ಹಾಗೂ ಬ್ರೋಕರ್ ಗಳಿಗೆ ಬೆಲೆ ನಿರ್ಧರಿಸುವುದಕ್ಕೆ ಬೆಂಚ್ ಮಾರ್ಕ್ ನಂತೆ ಆಗಿದೆ.

ಮನೆ ಮಾರುವವರಿಗೆ ಅದರ ನಿಜವಾದ ಮಾರುಕಟ್ಟೆ ಮೌಲ್ಯ ಎಷ್ಟು ಎಂದು ಗೊತ್ತಾದರೆ, ಖರೀದಿಸುವವರಿಗೆ ತಮ್ಮ ಹಣಕ್ಕೆ ತಕ್ಕ ಮೌಲ್ಯ ಗೊತ್ತಾಗುತ್ತದೆ. ಇನ್ನು ಏಜೆಂಟರು ಸರಿಯಾದ ಸಲಹೆ ಕೂಡ ನೀಡಬಹುದು. ಆಸ್ತಿಗೆ ಹಣ ಹಾಕುವಾಗ ಆಗುತ್ತಿದ್ದ ದೊಡ್ಡ ಗೊಂದಲ ಇದರಿಂದ ನಿವಾರಣೆ ಆಗಿದೆ. ಜತೆಗೆ ಸರಿಯಾದ ಬೆಲೆಗೆ ಚೌಕಾಶಿ ಮಾಡಬಹುದು. ಮನೆ ಹುಡುಕುವುದಕ್ಕೆ ತಿಂಗಳುಗಟ್ಟಲೆ ನಾವು ಪಡುತ್ತಿದ್ದ ಪಡಿಪಾಟಲು ಈಗ ಖಂಡಿತಾ ಇಲ್ಲ.

ಅಪ್ಲಿಕೇಷನ್ ಬಳಸುವ ಡೇಟಾ ಪಕ್ಕಾ ಆಗಿರುತ್ತೆ. ಅದು ಪ್ರತಿ ದಿನ ಅಪ್ ಡೇಟ್ ಆಗುತ್ತಿರುತ್ತದೆ. ಆದ್ದರಿಂದ ಬೆಲೆ ನಿರ್ಧರಿಸುವುದಕ್ಕೆ ಅನುಕೂಲವಾಗುತ್ತದೆ. ದಿನದ ಕೊನೆಗೆ ನಾವು ಹುಡುಕುತ್ತಿರುವ ಕನಸಿನ ಮನೆ ಖರೀದಿಸಿದ ತೃಪ್ತಿ, ಸಮಾಧಾನ ನಮ್ಮ ಪಾಲಿಗೆ ಎಂದೆಂದಿಗೂ ಇರುತ್ತದೆ.

ಈಗ ಮುಂದಿನ ಸಲ ನೀವು ಮನೆ ಖರೀದಿಸುವುದಕ್ಕೋ ಮಾರುವುದಕ್ಕೋ ಹೊರಟಾಗ PropWorth ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ನಿಮ್ಮ ಆಯ್ಕೆಯ ಆಸ್ತಿಯ ನಿಖರವಾದ ಮೌಲ್ಯ ತಿಳಿದುಕೊಳ್ಳಿ. ಇದಾಯಿತು, ಇನ್ನು ಇಂಟೀರಿಯರ್ಸ್ ಅಂತೀರಾ? ಸರಿ, ಅದನ್ನ ಇನ್ನೊಂದು ಸಲ ಹೇಳ್ತೀನಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A home is a place that not only provides us shelter from the world but it is also a place where we plan to raise our children in and grow old with our partners. We fall in love with our house and the memories we have accumulated there.
Please Wait while comments are loading...