ಹಬ್ಬದ ಸೀಸನ್: ಬಿಎಸ್ಎನ್ಎಲ್ ಗ್ರಾಹಕರಿಗೆ 'ಡಬ್ಬಲ್ ಆಫರ್'

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ನಿಯಮಿತ(ಬಿಎಸ್ಎನ್ಎಲ್) ದಸರಾ, ಮೊಹರಮ್ ಸಂದರ್ಭದಲ್ಲಿ ನೀಡಲಾಗಿದ್ದ ಆಫರ್ ಗಳನ್ನು ವಿಸ್ತರಿಸಿದೆ.

ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ವಿಶೇಷ ದರ ಯೋಜನೆ ಪ್ರಕಟಿಸಿದ್ದು, ಹಾಲಿ ಯೋಜನೆಯ ಸೌಲಭ್ಯಗಳು ಡಬ್ಬಲ್ ಆಗಲಿವೆ.[ಜಿಯೋ ಎಫೆಕ್ಟ್ : ಉಚಿತ ಕರೆ ಆಫರ್ ನೀಡಿದ ಬಿಎಸ್ಎನ್ಎಲ್]

* ಈ ಯೋಜನೆ ಅಡಿಯಲ್ಲಿ 1,498 ರು ಗೆ 9 ಜಿಬಿ ಡಾಟಾ ಬದಲಿಗೆ 18 ಜಿಬಿ ಸಿಗಲಿದೆ.
* 2,798 ರು ಗಳಿಗೆ 18 ಜಿಬಿ ಬದಲಿಗೆ 36 ಜಿಬಿ ದೊರೆಯಲಿದೆ.
* 3,998 ರು ಗಳಿಗೆ 30 ಜಿಬಿ ಬದಲಿಗೆ 60 ಜಿಬಿ ದೊರೆಯಲಿದೆ.
* 4,498 ರು ಗಳಿಗೆ 40 ಜಿಬಿ ಬದಲಿಗೆ 80 ಜಿಬಿ ದೊರೆಯಲಿದೆ. [ಲ್ಯಾಂಡ್ ಲೈನ್ ನಿಂದ ಭಾನುವಾರ ಫ್ರೀ ಕಾಲ್ಸ್]

Festival Season BSNL offers get double benefit for prepaid subscribers

ಸ್ಪೆಷಲ್ ಟಾರಿಫ್ ವೋಚರ್ (ಎಸ್ ಟಿವಿ) ಅಡಿಯಲ್ಲಿ ನಾಲ್ಕು ಹೊಸ ಡಾಟಾ ಯೋಜನೆಗಳನ್ನು ಹಬ್ಬದ ಸೀಸನ್ ಗಾಗಿ ಪ್ರಕಟಿಸಲಾಗಿದ್ದು, ಇದು ಭಾರತದೆಲ್ಲೆಡೆ ಪ್ರೀಪೇಯ್ಡ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಹೊಸ ಆಫರ್ ನ ವ್ಯಾಲಿಟಿಡಿ 365 ದಿನಗಳು. ಅಕ್ಟೋಬರ್ 10 ರಿಂದ 31, 2016ರೊಳಗೆ ಡಬ್ಬಲ್ ಡಾಟಾ ಆಫರ್ ಪಡೆದುಕೊಳ್ಳಬಹುದು ಎಂದು ಬಿಎಸ್ ಎನ್ಎಲ್ ನಿರ್ದೇಶಕ ಆರ್ ಕೆ ಮಿತ್ತಲ್ ಹೇಳಿದ್ದಾರೆ.[ಫೇಸ್ಬುಕ್, ವಾಟ್ಸಪ್ ದಾಖಲೆ ಮುರಿದ ರಿಲಯನ್ಸ್ ಜಿಯೋ]

ರಿಲಯನ್ಸ್ ಜಿಯೋ ಆಫರ್ ಗೆ ಪೈಪೋಟಿ ನೀಡಲು ಎಲ್ಲಾ ಟೆಲಿಕಾಮ್ ಕಂಪೆನಿಗಳು ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿವೆ. ಬಿಎಸ್‌ಎನ್‌ಎಲ್‌ನ ಬಿಬಿ 249 ಯೋಜನೆಯು ಅನಿಯಮಿತ ಬ್ರಾಡ್‌ಬ್ಯಾಂಡ್ ಯೋಜನೆಯು 3ಜಿ ಬಳಕೆದಾರರಿಗೆ ರೂ 249 ಕ್ಕೆ ಲಭ್ಯವಾಗುತ್ತಿದೆ. ಈ ಹೊಸ ಡೇಟಾ ಯೋಜನೆಯನ್ನು ಜನಪ್ರಿಯಗೊಳಿಸಲು ಬಿಎಸ್‌ಎನ್‌ಎಲ್ ಸಪ್ಟೆಂಬರ್ 9 ರಿಂದ ಅಕ್ಟೋಬರ್ 31 ರವರೆಗೆ ಉಚಿತ ಇನ್‌ಸ್ಟಾಲೇಶನ್ ಅನ್ನು ನೀಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State-owned BSNL has launched a promotional offer under which prepaid customers get double benefit on four new data Special Tariff Vouchers (STVs).
Please Wait while comments are loading...