• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೇಸ್ ಬುಕ್ ಫ್ರೊಫೈಲ್ ಬದಲಿಸಿ ಚಿಂತೆ ಬೇಡ

By Mahesh
|

ಕ್ಯಾಲಿಫೋರ್ನಿಯಾ, ಸೆ. 29: ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝಕರ್ ಬರ್ಗ್ ಹಾಗೂ ಭಾರತದ ಪ್ರಧಾನಿ ಮೋದಿ ಅವರ ಫೇಸ್ ಬುಕ್ ಫ್ರೊಫೈಲ್ ಗಳು ತ್ರಿವರ್ಣದ ಹಿನ್ನಲೆಯುಳ್ಳ ಚಿತ್ರಕ್ಕೆ ಬದಲಾಗಿದ್ದ ಬಗ್ಗೆ ಭಾರಿ ಚರ್ಚೆ ನಡೆದಿರುವುದು ಎಲ್ಲರಿಗೂ ಗೊತ್ತಿರಬಹುದು. ಫ್ರೊಫೈಲ್ ಬದಲಾಯಿಸಿದರೆ ಫೇಸ್ ಬುಕ್ಕಿನ ಯೋಜನೆ ಇಂಟರ್ನೆಟ್.ಆರ್ಗ್ ಗೆ ಪರೋಕ್ಷವಾಗಿ ಒಪ್ಪಿಕೊಂಡಂತೆ ಎಂಬ ಸುದ್ದಿಯನ್ನು ಫೇಸ್ ಬುಕ್ ಅಲ್ಲಗೆಳೆದಿದೆ.

ಫೇಸ್ ಬುಕ್ ಪ್ರೊಫೈಲ್ ಗಳು ಬದಲಾದ ಮೇಲೆ ಸೋರ್ಸ್ ಕೋಡ್ ಹೋಗಿ ನೋಡಿದರೆ ಅದರಲ್ಲಿ ಇಂಟರ್ನೆಟ್ ಡಾಟ್ .ಆರ್ಗ್ ಇದ್ದ ಅಂಶ ಹಲವಾರು ಮರಿ-ಹಿರಿ ಸಾಫ್ಟ್ ವೇರ್ ತಂತ್ರಜ್ಞರ ತಲೆಕೆಡಿಸಿತ್ತು.[ಡಿಜಿಟಲ್ ಇಂಡಿಯಾ ಎಂದರೇನು?]

ಇದು ಫೇಸ್ ಬುಕ್ ಮಾಡಿರುವ ಹುನ್ನಾರ ಎಂಬ ಮಾತುಗಳು ಕೇಳಿ ಬಂದಿತ್ತು. ಅದರೆ, ಇದು ನಮ್ಮ ಇಂಜಿನಿಯರ್ ಮಾಡಿದ ಸಣ್ಣ ಪ್ರಮಾದ, ಅದರೆ, ಇದರಿಂದ ಯಾವುದೇ ಹಾನಿಯಿಲ್ಲ ಎಂದು ಫೇಸ್ ಬುಕ್ ಮಂಗಳವಾರ ಸ್ಪಷ್ಟನೆ ನೀಡಿದೆ.[ಫೇಸ್ ಬುಕ್, ಗೂಗಲ್ ಕಚೇರಿಯಲ್ಲಿ ಮೋದಿ ಸಂಚಾರ]

ಡಿಜಿಟಲ್ ಇಂಡಿಯಾ ಹಾಗೂ ಇಂಟರ್ನೆಟ್ .ಆರ್ಗ್ ಎರಡನ್ನು ಸೇರಿಸಿ ತಕ್ಷಣಕ್ಕೆ ಫ್ರೊಫೈಲ್ ಪಿಕ್ಚರ್ ಬದಲಾಯಿಸಲು ಅನುಕೂಲವಾಗುವಂಥ ಪ್ಲಗ್ ಇನ್ ಕೋಡಿಂಗ್ ಗೆ ಹೆಸರಿಡುವಾಗ 'Internet.org profile picture' ಎಂಬುದನ್ನು ನಮ್ಮ ಇಂಜಿನಿಯರ್ ಬಳಸಿದ್ದರು. ಇದನ್ನು ಗಮಿಸಿದ ಹಲವರಿಗೆ ಹಲವು ರೀತಿ ಅನುಮಾನ ಬಂದಿರಬಹುದು. ಅದರೆ, ಇದರಿಂದ ನಾವು ಏನು ಬಯಸಿಲ್ಲ ಹಾಗೂ ನಿಮಗೆ ಏನು ಹಾನಿ ಇಲ್ಲ ಎಂದು ಫೇಸ್ ಬುಕ್ ವಕ್ತಾರರು ಹೇಳಿದ್ದಾರೆ.

ಡಿಜಿಟಲ್ ಇಂಡಿಯಾ ಹಾಗೂ ಇಂಟರ್ನೆಟ್.ಆರ್ಗ್

ಡಿಜಿಟಲ್ ಇಂಡಿಯಾ ಹಾಗೂ ಇಂಟರ್ನೆಟ್.ಆರ್ಗ್

ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಾದ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಇತ್ಯಾದಿಗಳಿಗೆ ಹೂಡಿಕೆ ಹಾಗೂ ಪ್ರಚಾರಕ್ಕಾಗಿ ಫೇಸ್ ಬುಕ್ ಅತ್ಯಗತ್ಯ. ಮೋದಿ ಅವರ ಆಹ್ವಾನ ಹಾಗೂ ಮನವಿಗೆ ಝುಕರ್ ಬರ್ಗ್ ಕೂಡಾ ಸ್ಪಂದಿಸಿದ್ದಾರೆ

ಈ ಸಮಯಕ್ಕೆ ಮೋದಿ ಅವರ ಫ್ರೊಫೈಲ್ ಗೆ

ಈ ಸಮಯಕ್ಕೆ ಮೋದಿ ಅವರ ಫ್ರೊಫೈಲ್ ಗೆ

ಅಂದಹಾಗೆ, ಈ ಸಮಯಕ್ಕೆ ಮೋದಿ ಅವರ ಫ್ರೊಫೈಲ್ ಗೆ 14 ಲಕ್ಷ ಲೈಕ್ಸ್ 35,934 ಹಂಚಿಕೆ, 29,403 ಕಾಮೆಂಟ್ಸ್ ಬಂದಿದೆ. ಮಾರ್ಕ್ ಝಕರ್ ಬರ್ಗ್ ಗೆ 7,24,618 ಲೈಕ್ಸ್, 1,02,789 ಹಂಚಿಕೆ, 20,583 ಕಾಮೆಂಟ್ಸ್ ಬಂದಿದೆ.

ಇಂಟರ್ನೆಟ್.ಆರ್ಗ್ ಏಕೆ?

ಇಂಟರ್ನೆಟ್.ಆರ್ಗ್ ಏಕೆ?

ಜ್ಞಾನ ವಾಹಿನಿಯ ಹರಿವು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಅಲ್ಲಲ್ಲಿ ಕುಂಠಿತಗೊಳ್ಳುತ್ತಿದೆ. ಇದನ್ನು ನಿವಾರಿಸಲು ಇಂಟರ್ನೆಟ್.ಆರ್ಗ್ ಸ್ಥಾಪನೆ ಮಾಡಲಾಗಿದೆ. ಸದ್ಯ ಇಂಟರ್ನೆಟ್ ಸಂಪರ್ಕ ಸಾಧಿಸಲು ಕಷ್ಟಪಡುತ್ತಿರುವವರಿಗೆ internet. org ವರದಾನವಾಗಲಿದೆ.

ವಿಶ್ವದ ಪ್ರಮುಖ ಸಂಸ್ಥೆಗಳು ಕೈಜೋಡಿಸಿವೆ

ವಿಶ್ವದ ಪ್ರಮುಖ ಸಂಸ್ಥೆಗಳು ಕೈಜೋಡಿಸಿವೆ

ಇಂಟರ್ನೆಟ್. ಆರ್ಗ್‌ನ ಜತೆ ಫೇಸ್ ಬುಕ್, ಎರಿಕ್ಸನ್, ಮೀಡಿಯಾ ಟೆಕ್, ನೋಕಿಯಾ, ಒಪೆರಾ, ಕ್ವಲ್ ಕಾಮ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳು ಜಂಟಿಯಾಗಿ ಕೈ ಜೋಡಿಸಿವೆ. ಜ್ಞಾನ ಹಂಚಿಕೆ, ಸಂಸ್ಥೆ ಪ್ರಸರಣ ಹಾಗೂ ಸರ್ಕಾರಗಳನ್ನು ಜಾಗತಿಕ ಮಟ್ಟದಲ್ಲಿ ಜೋಡಿಸುವ ಮಹತ್ವದ ಯೋಜನೆ ಇದಾಗಿದೆ.

ತಾಯ್ನುಡಿಗೆ ಒತ್ತು ನೀಡಿ ಎಂದ ಮಾರ್ಕ್

ತಾಯ್ನುಡಿಗೆ ಒತ್ತು ನೀಡಿ ಎಂದ ಮಾರ್ಕ್

ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಳವಾಗುತ್ತಿದ್ದು ಇದಕ್ಕೆ ಪೂರಕವಾಗಿ ಸರ್ಕಾರ ಕೂಡಾ ಹಳ್ಳಿ ಹಳ್ಳಿಗೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ನೀಡುವ ಸಂಕಲ್ಪ ಹೊಂದಿದೆ. ಭಾರತದಲ್ಲಿ ಭಾಷಾ ವೈವಿಧ್ಯತೆ ಇದ್ದರೂ ವೆಬ್ ನಲ್ಲಿ ಆಯಾ ಭಾಷಿಕರು ತಮ್ಮ ಭಾಷೆಯಲ್ಲೇ ಮಾಹಿತಿ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. 'Connectivity is a Human Right' ಎಂದು ಮಾರ್ಕ್ ಹೇಳಿದ್ದಾರೆ. [ವಿವರ ಇಲ್ಲಿದೆ ಓದಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು facebook ಸುದ್ದಿಗಳುView All

English summary
Social networking giant Facebook on Tuesday defended itself on the 'Internet.org' profile picture imbroglio and said that the issue on the site was a mistake by an engineer which had nothing to do with Internet.org's publicity plans in the country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more