ವಿಜಯ್ ಮಲ್ಯ ಅವರ ಆಪ್ತ ರಘುನಾಥನ್ ಗೆ ಜೈಲು ಶಿಕ್ಷೆ

Posted By:
Subscribe to Oneindia Kannada

ಹೈದರಾಬಾದ್, ಸೆ. 22: ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಪ್ತ, ಒಂದು ಕಾಲದಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ನ ಸಿಎಫ್ ಒ ಆಗಿದ್ದ ರಘುನಾಥನ್ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು 18 ವರ್ಷಗಳ ಕಾಲ ಶಿಕ್ಷೆ ಘೋಷಿಸಿದೆ.

ಎರಡು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ರಘುನಾಥನ್ ಗೆ ಜೈಲು ಶಿಕ್ಷೆ ನೀಡಲಾಗಿದೆ. ಇದೇ ಪ್ರಕರಣದಲ್ಲಿ ವಿಜಯ್ ಮಲ್ಯ ಕೂಡಾ ಸಹ ಆರೋಪಿಯಾಗಿದ್ದಾರೆ. ಮಲ್ಯ ಹಾಗೂ ರಘುನಾಥನ್ ವಿರುದ್ಧ ಜಿಎಂಆರ್ ಹೈದರಾಬಾದ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ದೂರು ಸಲ್ಲಿಸಿತ್ತು.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

Ex-Kingfisher Airlines CFO Gets 18-Month Jail Term In Cheque Bounce Cases

ಇಲ್ಲಿನ ವಿಶೇಷ ಮ್ಯಾಜಿಸ್ಟ್ರೇಟ್ ಕೋರ್ಟಿನ ನ್ಯಾ. ಎಂ ಕೃಷ್ಣರಾವ್ ಅವರು ರಘುನಾಥನ್ ಗೆ ಎರಡು ಕೇಸುಗಳಲ್ಲಿ ತಲಾ 20,000 ರು ದಂಡ ಹಾಗೂ 18 ವರ್ಷಗಳ ಶಿಕ್ಷೆ ಘೋಷಿಸಿದೆ.[ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಹೇಗೆ ಬರಲಿ: ವಿಜಯ್ ಮಲ್ಯ]

ಏಪ್ರಿಲ್ 20ರಂದು ಕಿಂಗ್ ಫಿಷರ್ ಏರ್ ಲೈನ್ ನ ಮಲ್ಯ ಹಾಗೂ ರಘುನಾಥನ್ ಅವರನ್ನು ಈ ಪ್ರಕರಣದಲ್ಲಿ ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿತ್ತು. ಇಬ್ಬರ ಮೇಲೆ 50 ಲಕ್ಷ ರು ಚೆಕ್ ಬೌನ್ಸ್ ಆದ ಆರೋಪಗಳಿವೆ. ಒಟ್ಟಾರೆ ಕಿಂಗ್ ಫಿಷರ್ ಏರ್ ಲೈನ್ಸ್ ವಿರುದ್ಧ 17 ಕೇಸುಗಳಿದ್ದು 22.5 ಕೋಟಿ ರು ಮೌಲ್ಯದ ಆರೋಪವನ್ನು ಜಿಎಂಆರ್ ಹೊರೆಸಿದೆ.[ಮಲ್ಯರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ: ಯುಕೆ]

ಕಿಂಗ್ ಫಿಶರ್ ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ ಓ) ರಘುನಾಥನ್ ಅವರು ಈ ಹಿಂದೆ ಜಾರಿ ನಿರ್ದೇಶನಾಲಯದ ಮುಂದೆ ಕೂಡಾ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A local court on Thursday sentenced A Raghunathan, former CFO of Kingfisher Airlines Ltd, to 18 months imprisonment in connection with two cheque bounce cases filed against him and businessman Vijay Mallya by GMR Hyderabad International Airport Ltd.
Please Wait while comments are loading...