• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಟ್ರಿಕ್ ಮೋಟಾರ್ಸ್ 2 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

|
Google Oneindia Kannada News

ಬೆಂಗಳೂರು, ಆಗಸ್ಟ್ 2: ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದ ಹೊಸ ಸಂಸ್ಥೆ ಇವಿಟ್ರಿಕ್ ಮೋಟಾರ್ಸ್ ಭಾರತೀಯ ಗ್ರಾಹಕರಿಗಾಗಿ ಇವಿಟ್ರಿಕ್ ಆಕ್ಸಿಸ್ ಮತ್ತು ಇವಿಟ್ರಿಕ್ ರೈಡ್ ಎನ್ನುವ ಎರಡು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಕ್ರಮವಾಗಿ ಎಕ್ಸ್-ಶೋರೂಂ ರೂ. 64,994/- ಮತ್ತು ರೂ.67,996/- ರ ಮಿತವ್ಯಯಕಾರಿ ಬೆಲೆ ಹೊಂದಿವೆ. ಇವಿಟ್ರಿಕ್ ಭಾರತದಲ್ಲಿಇ-ಸ್ಕೂಟರ್ ಮೂಲಕ ಯುವ ಮತ್ತು ಕೌಟುಂಬಿಕ ಗ್ರಾಹಕರನ್ನು ಉದ್ದೇಶಿಸಿದ್ದು, ಇದು ಜವಾಬ್ದಾರಿಯುತ ಸಾರಿಗೆ ಹಾಗೂ ಪರಿಸರ ಸ್ನೇಹಿ ಅಭ್ಯಾಸದೆಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ.

ಪಿಎಪಿಎಲ್- ಭಾರತೀಯ ಮೂಲದ ಆಟೋಮೇಷನ್ ಕಂಪನಿ ಭಾರತದಲ್ಲಿ ಪ್ರಸ್ತುತ ಎಲೆಕ್ಟ್ರಿಕ್ ವಾಹನ ಕ್ರಾಂತಿಯನ್ನು ಪ್ರೋತ್ಸಾಹಿಸಲು ಆಟೋಮೇಷನ್ ವಲಯದಲ್ಲಿ ನೈಪುಣ್ಯತೆ ಹೊಂದಿರುವ ಇವಿಟ್ರಿಕ್ ಮೋಟಾರ್ಸ್ ಅನ್ನು ಇತ್ತೀಚೆಗಷ್ಟೇ ಆರಂಭಿಸಿದೆ. ಕಂಪನಿ ಬೈಸಿಕಲ್ ಗಳು, ಎಲೆಕ್ಟ್ರಿಕ್ ಸ್ಕೂಟರ್ ಗಳು, ಎಲೆಕ್ಟ್ರಿಕ್ ವೆಹಿಕಲ್ ಮೋಟಾರ್‍ ಸೈಕಲ್ ಮತ್ತು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಂತಹ ಅತ್ಯುತ್ತಮವಾದ ಎಲೆಕ್ಟ್ರಿಕ್ ವೆಹಿಕಲ್ ಶ್ರೇಣಿಯನ್ನು ನೀಡುತ್ತಿದೆ.

ಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆಆಡಿಯಿಂದ ಮೂರು ಎಲೆಕ್ಟ್ರಿಕ್ ಎಸ್‍ಯುವಿಗಳ ಬಿಡುಗಡೆ

ಇವಿಟ್ರಿಕ್ಸ್ ಆಕ್ಸಿಸ್ ಮರ್ಕ್ಯುರಿ ವೈಟ್, ಪರ್ಷಿಯನ್ ರೆಡ್, ಲೆಮನ್ ಯೆಲ್ಲೋ, ಮತ್ತು ಎಂಪರರ್ ಗ್ರೇ ಎನ್ನುವ ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಇವಿಟ್ರಿಕ್ ರೈಡ್ ಹೆಚ್ಚು ಸೀಟಿಂಗ್ ಸ್ಥಳಾವಕಾಶದೊಂದಿಗೆ ಭಾರತೀಯ ಕುಟುಂಬದ ಅಗತ್ಯಗಳನ್ನು ಗಮನದಲ್ಲಿರಿಸಿ ವಿನ್ಯಾಸಗೊಳಿಸಲಾಗಿದ್ದು, ಇದು ಡೀಪ್ ಸೆರೂಲಿಯನ್ ಬ್ಲೂ, ಪರ್ಷಿಯನ್ ರೆಡ್, ಸಿಲ್ವರ್, ನೋಬಲ್ ಗ್ರೇ, ಮರ್ಕ್ಯುರಿ ವೈಟ್ ಗಳ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

 ಲೀಥಿಯಂ-ಅಯಾನ್ ಬ್ಯಾಟರಿ ಆಯ್ಕೆಯೊಂದಿಗೆ ಲಭ್ಯ

ಲೀಥಿಯಂ-ಅಯಾನ್ ಬ್ಯಾಟರಿ ಆಯ್ಕೆಯೊಂದಿಗೆ ಲಭ್ಯ

ಇ-ಸ್ಕೂಟರ್ ಪ್ರತ್ಯೇಕಿಸಬಹುದಾದ ಲೀಥಿಯಂ-ಅಯಾನ್ ಬ್ಯಾಟರಿ ಆಯ್ಕೆಯೊಂದಿಗೆ ಲಭ್ಯವಿದ್ದು, ಇದು ಬಳಕೆದಾರರಿಗೆ ಚಾರ್ಜಿಂಗ್ ಅನುಕೂಲತೆ ನೀಡುತ್ತದೆ. ಸ್ಕೂಟರ್ 150 ಕೆಜಿಗಳ ತೂಕದ ಸಾಮರ್ಥ್ಯ ಹೊಂದಿದ್ದು, 250W ಮೋಟಾರ್ ಪವರ್ ಸಾಮರ್ಥ್ಯವಿದೆ. ಎರಡೂ ಇ-ಸ್ಕೂಟರ್ ಗಳು ಪೂರ್ಣವಾಗಿ ಬ್ಯಾಟರಿ ಚಾರ್ಜ್ ಮಾಡಲು 3.5 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, ಇದು ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿಮೀವರೆಗೆ ಓಡುತ್ತದೆ, ಇದು ಗಂಟೆಗೆ ಗರಿಷ್ಟ 25 ಕಿಮೀ ವೇಗ ಹೊಂದಿದೆ. ಇವಿಟ್ರಿಕ್ ನ ಗ್ರಾಹಕರಿಗೆ, ಬ್ರಾಂಡ್ ವಿಶಿಷ್ಟ ವೈಶಿಷ್ಟ್ಯತೆಗಳ ಶ್ರೇಣಿಯೊಂದಿಗೆ 2+ ವರ್ಷಗಳ ಬ್ಯಾಟರಿ ವಾರಂಟಿ ನೀಡುತ್ತದೆ.

 ಇವಿಟ್ರಿಕ್ ಕಂಪನಿಯ ವೆಬ್ ಸೈಟ್ ನಲ್ಲಿ ಬುಕ್ಕಿಂಗ್

ಇವಿಟ್ರಿಕ್ ಕಂಪನಿಯ ವೆಬ್ ಸೈಟ್ ನಲ್ಲಿ ಬುಕ್ಕಿಂಗ್

ಉತ್ಪನ್ನ ಎಲ್ ಇ ಡಿ ಹೆಡ್ ಲ್ಯಾಂಪ್ ಗಳು, ರೋಬೋಟಿಕ್ ವೆಲ್ಡಿಂಗ್ ಚಾಸಿಸ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, 12 ಇಂಚಿನ ಟ್ಯೂಬ್ ಲೆಸ್ ಟೈರ್ ನೊಂದಿಗೆ ಉಬ್ಬುಗಳಿರುವ ರಸ್ತೆಯಲ್ಲಿ ಆರಾಮದಾಯಕವಾಗಿ, ಒತ್ತಡಮುಕ್ತವಾಗಿ ಸಾಗಲು 190 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಸಹ ಹೊಂದಿದೆ. ಇ-ಸ್ಕೂಟರ್ ಎಲೆಕ್ಟ್ರಿಕ್ ವೆಹಿಕಲ್ ನಲ್ಲಿ ಬಳಕೆದಾರನ ಅನುಭವವನ್ನು ಹೆಚ್ಚಿಸಲು, ರಿವರ್ಸ್ ಪಾರ್ಕ್ ಅಸಿಸ್ಟ್ ಫಂಕ್ಷನ್ ಹೊಂದಿದ್ದು, ಇದನ್ನು ವೈಶಿಷ್ಟ್ಯತೆಗಳಿಂದ ಕೂಡಿದ ಮೆಷಿನ್ ಆಗಿಸಿದೆ.

ಬಹು ನಿರೀಕ್ಷಿತ ಓಲಾ ಸ್ಕೂಟರ್ 10 ವಿಶಿಷ್ಟ ಬಣ್ಣಗಳಲ್ಲಿ ಮಾರುಕಟ್ಟೆಗೆ

ಇದರ ಬುಕ್ಕಿಂಗ್ ಇವಿಟ್ರಿಕ್ ಕಂಪನಿಯ ವೆಬ್ ಸೈಟ್ ನಲ್ಲಿ (https://evtricmotors.com), ಆಯ್ದ ಇ-ಟೇಲರ್ ನೊಂದಿಗೆ -ಇ-ವ್ಹೀಲರ್ ಗಳು, ಕ್ವರ್ಕಿ ಕಾರ್ಟ್ ಮತ್ತು ಅತಿಯಾಸ್ ಮೊಬಿಲಿಟಿ ಪ್ರೈ ಲಿ ನಲ್ಲಿ ಶೂನ್ಯ ಬುಕ್ಕಿಂಗ್ ಮೊತ್ತದೊಂದಿಗೆ ಆನ್ ಲೈನ್ ಹಾಗೂ ಆಫ್ ಲೈನ್ ಗಳಲ್ಲಿ ತೆರೆದಿದೆ.

 7 ನಗರಗಳಲ್ಲಿ ಇ-ಸ್ಕೂಟರ್ ಲಭ್ಯ

7 ನಗರಗಳಲ್ಲಿ ಇ-ಸ್ಕೂಟರ್ ಲಭ್ಯ

ಮೊದಲ ಹಂತದಲ್ಲಿ, ಬ್ರಾಂಡ್ ದೆಹಲಿ, ಗುರುಗ್ರಾಮ, ಪುಣೆ, ಔರಂಗಾಬಾದ್, ಬೆಂಗಳೂರು, ತಿರುಪತಿ ಮತ್ತು ಹೈದರಾಬಾದ್ ಈ 7 ನಗರಗಳಲ್ಲಿ ಇ-ಸ್ಕೂಟರ್ ಗಳನ್ನು ವಿತರಿಸಲಿದೆ. ಬ್ರಾಂಡ್ ದೇಶದಲ್ಲಿ 28 ರಾಜ್ಯಗಳಲ್ಲಿ (ಜೊತೆಗೆ ಕೇಂದ್ರಾಡಳಿತ ಪ್ರದೇಶ) ಎಲ್ಲಾ ರಾಜಧಾನಿ ನಗರಗಳಲ್ಲಿ, ಕೇವಲ 6 ತಿಂಗಳ ಅಲ್ಪಾವಧಿಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವತ್ತ ಗಮನ ಹರಿಸಿದೆ.

ಬ್ರಾಂಡ್ ಈಗಾಗಲೇ ಡೀಲರ್ ಗಳನ್ನು ಹೊಂದಿದ್ದು, ಆರಂಭಿಕ ವಿಸ್ತರಣಾ ಯೋಜನೆಯ ಭಾಗವಾಗಿ ಆರ್ಥಿಕ ವರ್ಷ 2021-22 ರ ಅಂತ್ಯದಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ, ಕರ್ನಾಟಕ, ದೆಹಲಿ-ಎನ್ ಸಿ ಆರ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಅಸ್ತಿತ್ವ ಹೊಂದಲು ನಿರ್ಧರಿಸಿದೆ.

 ಇವಿಟ್ರಿಕ್ ಮೋಟಾರ್ಸ್ ಎಂಡಿ ಮನೋಜ್ ಪಾಟೀಲ್

ಇವಿಟ್ರಿಕ್ ಮೋಟಾರ್ಸ್ ಎಂಡಿ ಮನೋಜ್ ಪಾಟೀಲ್

"ನಾವು ಕಳೆದ ಒಂದು ದಶಕದಿಂದ ಆಟೋಮೇಷನ್ ವಲಯದಲ್ಲಿದ್ದೇವೆ. ಈಗ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಆಟೋಮೊಬೈಲ್ ಕ್ರಾಂತಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲಿದ್ದೇವೆ. ನಾವು ನಿಧಾನಗತಿಯ ಇ-ಸ್ಕೂಟರ್ ವರ್ಗದಿಂದ ಆರಂಭಿಸಿದ್ದು, ನಮಗೆ ತಿಳಿದಂತೆ, ಪ್ರಸ್ತುತ ತಂತ್ರಜ್ಞಾನದ ಸನ್ನಿವೇಶದಲ್ಲಿ ಬಳಕೆದಾರರ ದೈನಂದಿನ ಸಾರಿಗೆಗೆ ಇದು ನಿಜಕ್ಕೂ ಸೂಕ್ತ ಖರೀದಿಯಾಗಿದೆ. ಈ ಉತ್ಪನ್ನಗಳು ಮಿತವ್ಯಯಕಾರಿ ಪ್ರಯಾಣ ಮತ್ತು ಸುಗಮ ಅನುಭವದೊಂದಿಗೆ ಗ್ರಾಹಕರ ನಿರೀಕ್ಷೆಯನ್ನು ಉತ್ತಮವಾಗಿ ಸಂಧಿಸಿದೆ", ಎಂದು ಇವಿಟ್ರಿಕ್ ಮೋಟಾರ್ಸ್ ಎಂಡಿ ಮತ್ತು ಸಂಸ್ಥಾಪಕ, ಮನೋಜ್ ಪಾಟೀಲ್ ಹೇಳಿದ್ದಾರೆ.

ಜೆಪಿ ನಗರದಲ್ಲಿ ಎಥರ್ ಎನರ್ಜಿ ಇ ಸ್ಕೂಟರ್ ಟೆಸ್ಟ್ ರೈಡ್ ಮಾಡಿ!ಜೆಪಿ ನಗರದಲ್ಲಿ ಎಥರ್ ಎನರ್ಜಿ ಇ ಸ್ಕೂಟರ್ ಟೆಸ್ಟ್ ರೈಡ್ ಮಾಡಿ!

 ಇವಿಟ್ರಿಕ್ ಮೋಟಾರ್ಸ್ ಕುರಿತು

ಇವಿಟ್ರಿಕ್ ಮೋಟಾರ್ಸ್ ಕುರಿತು

ಸಂಸ್ಥಾಪಕ ಮತ್ತು ಎಂಡಿ ಮನೋಜ್ ಪಾಟೀಲ್ 2021ರಲ್ಲಿ ಸ್ಥಾಪಿಸಿದ ಇವಿಟ್ರಿಲ್, ಪುಣೆಯಲ್ಲಿ ಇವಿ ಆಟೋಮೋಟಿವ್ ಸ್ಟಾರ್ಟಪ್ ಬ್ರಾಂಡ್ ಕೇಂದ್ರ ಕಚೇರಿ ಹೊಂದಿದೆ, ವಿವಿಧ ಓಇಎಂ ಮತ್ತು ಅದರ ವರ್ಗ 1 ಪೂರೈಕೆದಾರರಿಗೆ ನಿರ್ಮಾಣ ಉದ್ದಿಮೆ ಮತ್ತು ಸಂಪೂರ್ಣ ಸಮಗ್ರವಾದ ಆಟೋಮೇಷನ್ ಯೋಜನೆಗಳನ್ನು ನೀಡುತ್ತಿರುವ ಭಾರತೀಯ ಮೂಲದ ಆಟೋಮೇಷನ್ ಕಂಪನಿಯಾದ ಪಿಎಪಿಎಲ್‌ನಿಂದ ಬಿಡುಗಡೆ ಮಾಡಲ್ಪಟ್ಟಿದೆ. ಇವಿಟ್ರಿಕ್ ಮೋಟಾರ್ಸ್ ಆಟೋಮೊಬೈಲ್ ವಲಯದಲ್ಲಿ 20 ಕ್ಕೂ ಹೆಚ್ಚಿನ ವರ್ಷಗಳಿಂದ ತೊಡಗಿರುವ ಅನುಭವಿ ಉದ್ಯಮಿಗಳಿಂದ ಮುನ್ನಡೆಸಲ್ಪಟ್ಟಿದೆ ಮತ್ತು ನಿರ್ವಹಿಸಲ್ಪಟ್ಟಿದೆ. ಕಂಪನಿಯ ಉತ್ಪನ್ನಗಳು ಈಗಾಗಲೇ ಐ-ಕ್ಯಾಟ್ ಅನುಮೋದನೆ ಪಡೆದಿದೆ. ಇದು 100% ಭಾರತೀಯ ಎಲೆಕ್ಟ್ರಿಕ್ ಆಟೋಮೋಟಿವ್ ತಯಾರಿಕಾ ಕಂಪನಿಯಾಗಿದ್ದು, 'ಮೇಕ್ ಇನ್ ಇಂಡಿಯಾ' ದತ್ತ ಗಮನ ಹರಿಸಿದೆ.

English summary
EVTRIC Motors a new venture in electric vehicle space launched two electric scooters in the slow speed category -EVTRIC AXIS and EVTRIC RIDE for the Indian audiences at an affordable price of ex-showroom INR 64,994/- and 67,996/- respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X