ಒಳ್ಳೆ ಜನರು ಕೂಡ ಕೆಲವು ತಪ್ಪು ಮಾಡ್ತಾರೆ: ಇನ್ಫಿ ಮೂರ್ತಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ಇನ್ಫೋಸಿಸ್ ಕಂಪೆನಿಯ ಆಡಳಿತದಲ್ಲಿನ ಲೋಪಗಳ ಬಗ್ಗೆ ತಾವು ವ್ಯಕ್ತಪಡಿಸಿದ ಆತಂಕವನ್ನು ಸೋಮವಾರ ಪುನರುಚ್ಚರಿಸಿರುವ ಕಂಪೆನಿಯ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ನಾವು ಎತ್ತಿರುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು. ಪಾರದರ್ಶಕತೆ ಪ್ರದರ್ಶಿಸಬೇಕು. ಯಾರು ಜವಾಬ್ದಾರಿ ಸ್ಥಾನದಲ್ಲಿದ್ದಾರೋ ಅದರ ಉತ್ತರಿಸಬೇಕು ಎಂದಿದ್ದಾರೆ.

ನಾನು ಹೇಳಿದ ಮಾತುಗಳನ್ನು ಹಿಂಪಡೆದಿಲ್ಲ. ಅವೆಲ್ಲಕ್ಕೂ ಆಡಳಿತ ಮಂಡಳಿ ಉತ್ತರಿಸಬೇಕು ಎಂದಿದ್ದಾರೆ ಮೂರ್ತಿ. ಕಾರ್ಪೋರೇಟ್ ಆಡಳಿತದ ಬಗ್ಗೆ ಅವರು ಎತ್ತಿದ್ದ ಪ್ರಶ್ನೆಗಳಿಂದ ಆಡಳಿತ ಮಂಡಳಿ ಜತೆಗೆ ತಿಕ್ಕಾಟ ಎದುರಾಗಿತ್ತು. ಆ ನಂತರ ತಮ್ಮ ನಿಲುವು ಬದಲಿಸಿದಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.[ವಿಶಾಲ್ ಸಿಕ್ಕಾ V/S ಸಂಸ್ಥಾಪಕರು: ಇನ್ಫೋಸಿಸ್ ನಲ್ಲೇನಿದು ಗಲಾಟೆ?]

even good people sometimes make mistakes

ಇನ್ಫೋಸಿಸ್ ಆಡಳಿತ ಮಂಡಳಿ ಸದಸ್ಯರ ಮೇಲಿನ ನಂಬಿಕೆ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅವರು, ಅವರೆಲ್ಲ ಒಳ್ಳೆ ಉದ್ದೇಶ ಇರುವ, ಅತ್ಯಂತ ಹೆಚ್ಚು ವಿಶ್ವಾಸಾರ್ಹ ಜನರು. ಆದರೆ ಒಳ್ಳೆ ಜನರು ಕೂಡ ಕೆಲವು ಸಲ ತಪ್ಪು ಮಾಡ್ತಾರೆ. ಒಳ್ಳೆ ನಾಯಕರಾದವರು ಎಲ್ಲ ಪ್ರಮುಖ ಷೇರುದಾರರ ಮಾತು ಕೇಳಿಸಿಕೊಳ್ಳಬೇಕು. ತಮ್ಮ ನಿರ್ಧಾರವನ್ನು ಮರು ಮೌಲ್ಯಮಾಪನ ಮಾಡಬೇಕು. ಮತ್ತು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

"ಕಂಪೆನಿ ಭವಿಷ್ಯಕ್ಕಾಗಿ ಆಡಳಿತ ವ್ಯವಸ್ಥೆ ಸುಧಾರಣೆಗಾಗಿ ಸರಿಯಾದ ಕ್ರಮವನ್ನು ಶೀಘ್ರದಲ್ಲೇ ತೆಗೆದುಕೊಳ್ತಾರೆ ಅಂದುಕೊಂಡಿದ್ದೀನಿ" ಎಂದು ಕೂಡ ಹೇಳಿದ್ದಾರೆ. ಇನ್ಫೋಸಿಸ್ ಆಡಳಿತದಲ್ಲಿ ಕೆಲವು ಲೋಪ-ದೋಷಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ನಾರಾಯಣ ಮೂರ್ತಿ ಸೇರಿದಂತೆ ಸಹ ಸಂಸ್ಥಾಪಕರು ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.[ಹೆಚ್ 1ಬಿ ವೀಸಾ ಬಳಕೆ ನಿಲ್ಲಲಿ: ನಾರಾಯಣ ಮೂರ್ತಿ ಸಲಹೆ]

ಸಿಇಒ ವಿಶಾಲ್ ಸಿಕ್ಕಾಗೆ 11 ಮಿಲಿಯನ್ ಅಮೆರಿಕನ್ ಡಾಲರ್ ವೇತನ ನಿಗದಿ ಮತ್ತು ನಿರ್ಗಮಿತ ಸಿಎಫ್ ಒ ರಾಜೀವ್ ಬನ್ಸಾಲ್ ಹಾಗೂ ಡೇವಿಡ್ ಕೆನೆಡಿ (ಜನರಲ್ ಕೌನ್ಸಿಲ್) ಅವರಿಗೆ ನೀಡಿದ ವೇತನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದ್ದರಿಂದ ಆಡಳಿತ ಮಂಡಳಿಯನ್ನೇ ಪುನರ್ ರಚಿಸಬೇಕು, ಈ ರೀತಿ ಲೋಪ-ದೋಷಗಳಿಗೆ ಕಾರಣರಾದ ಚೇರ್ ಮನ್ ರಾಮಸ್ವಾಮಿ ಸೇಷಸಾಯಿ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಆದರೆ, ಇನ್ಫೋಸಿಸ್ ಆಡಳಿತ ಮಂಡಳಿಯು ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಕಂಪೆನಿಯ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದು, ಎಲ್ಲ ಬೆಳವಣಿಗೆ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿತ್ತು. ಇನ್ಫೋಸಿಸ್ ಸಂಸ್ಥಾಪಕರು ಮತ್ತು ಅವರ ಕುಟುಂಬ ವರ್ಗ ಡಿಸೆಂಬರ್ 2016ಕ್ಕೆ ಕಂಪೆನಿಯ ಶೇ 12.75ರಷ್ಟು ಷೇರು ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys co-founder N.R. Narayana Murthy on Monday denied that he had withdrawn his concerns about governance lapses at the firm, saying the Board has to address these “properly” and “full transparency should be displayed and people responsible for it should become accountable.”
Please Wait while comments are loading...