ಮತ್ತೊಮ್ಮೆ ಬಿಟ್ ಕಾಯಿನ್ ಮೌಲ್ಯ ಹಿಂದಿಕ್ಕಿದ Ethereum
ಬೆಂಗಳೂರು, ಏಪ್ರಿಲ್ 2: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ 60 ಸಾವಿರ ಡಾಲರ್ ಗಡಿ ದಾಟಲು ಆಗದೆ ಗಡಿಯಲ್ಲೇ ಹೆಣಗುತ್ತಿರುವ ವೇಳೆಯಲ್ಲಿ ಸತತವಾಗಿ ಎರಡು ದಿನಗಳ ಕಾಲ ಬಿಟ್ ಕಾಯಿನ್ ಮೌಲ್ಯವನ್ನು ಇಥೆರಿಯಂ ಹಿಂದಿಕ್ಕಿದೆ.
ಏಪ್ರಿಲ್ 2ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $59,540.70
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,111,955,561,904
ಒಂದು ಬಿಟ್ ಕಾಯಿನ್ ಬೆಲೆ = 43,42,205.30ರು
(1 USD=73.37 ರುಪಾಯಿ)
ಕಳೆದ 24 ಗಂಟೆಗಳಲ್ಲಿ ಶೇ 0.77ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 10.51ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 4.65ರಷ್ಟು ಏರಿಕೆ ಕಂಡು 2,061.80 ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $237,943,590,912ಮೌಲ್ಯ ಹೊಂದಿದೆ. ಮತ್ತೊಂದು ಕರೆನ್ಸಿ ಕಾರ್ಡಾನೋ ಕಳೆದ 24 ಗಂಟೆಗಳಲ್ಲಿ ಶೇ 0.96ರಷ್ಟು ಕುಸಿತ ಕಂಡಿದ್ದು, 1.21 ಡಾಲರ್ ಮೌಲ್ಯಹೊಂದಿದ್ದು, ಒಟ್ಟಾರೆ, $38,703,971,489 ಮಾರುಕಟ್ಟೆ ಮೌಲ್ಯ ಹೊಂದಿದೆ.
ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಮಾರ್ಚ್ 29ರಂದು 60, 000 ಡಾಲರ್ ಗಡಿ ದಾಟಿತ್ತು. ಶೇ 6.64ರಷ್ಟು ಏರಿಕೆ ಕಂಡು ಮೊದಲ ಬಾರಿಗೆ ದಾಖಲೆಯ $61,073.71 ತಲುಪಿತ್ತು. ನಂತರ ಸ್ವಲ್ಪ ಮಟ್ಟಿನ ಕುಸಿತ ಕಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ ಶೇ 120.2ರಷ್ಟು ಏರಿಕೆ ಕಂಡಿದೆ.
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.