ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.8 ರಿಂದ ಶೇ 8.65ಕ್ಕೆ ಇಳಿಕೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 19: ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗೆ ನೀಡಲಾಗುತ್ತಿದ್ದ ಶೇ 8.8ರಷ್ಟು ಬಡ್ಡಿದರವನ್ನು 2015-16ಸಾಲಿನಂತೆ ಶೇ 8.65ಕ್ಕೆ ಇಳಿಕೆ ಮಾಡಲಾಗಿದೆ. ಈ ಬದಲಾವಣೆ 4ಕೋಟಿ ಗೂ ಅಧಿಕ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಕೇಂದ್ರ ಟ್ರಸ್ಟಿಗಳು(CBT) ಬಡ್ಡಿದರ ಇಳಿಕೆ ಬಗ್ಗೆ ಸೋಮವಾರ(ಡಿಸೆಂಬರ್ 19) ನಿರ್ಣಯ ಕೈಗೊಂಡಿದ್ದಾರೆ ಎಂದು ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಉಪಾಧ್ಯಕ್ಷ ಅಶೋಕ್ ಸಿಂಗ್ ಹೇಳಿದರು.[ನಿಷ್ಕ್ರಿಯ ಪಿಎಫ್ ಖಾತೆಗೆ ಶೇ.8.8 ರಷ್ಟು ಬಡ್ಡಿ!]

ಸೆಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿನ ದರವನ್ನು ಸರ್ಕಾರ ಕೊಂಚ ಇಳಿಕೆ ಮಾಡಿತ್ತು. ಇದರಿಂದ ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ಉಳಿತಾಯ ಯೋಜನೆಗಳಿಂದ ಕಡಿಮೆ ರಿಟರ್ನ್ಸ್ ಬಂದಿತ್ತು. ಕಾರ್ಮಿಕ ಖಾತೆ ಕೂಡಾ ಶೇ 8.8ರ ಬಡ್ಡಿದರಕ್ಕೆ ಶಿಫಾರಸು ಮಾಡಿತ್ತು.[ಪಿಂಚಣಿ ಪಡೆಯಲು ಉದ್ಯೋಗದಾತರ ಅಪ್ಪಣೆ ಬೇಕಿಲ್ಲ]

EPFO fixes 8.65% interest rate for PF deposits, cut from 8.8%

ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ. [ಪಿಎಫ್ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಕಟ್ಟಬೇಕಾಗಿಲ್ಲ!]

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Retirement fund body EPFO today(December 19) decided to lower the interest on EPF deposits for the current fiscal to 8.65 per cent, from 8.8 provided in 2015-16, for its over four crore subscribers.
Please Wait while comments are loading...