ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Twitter New CEO : ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ನಿಂದ ಹೊಸ ಸಿಇಒ ಹುಡುಕಾಟ

|
Google Oneindia Kannada News

ವಾಷಿಂಗ್‌ಟನ್‌, ಡಿಸೆಂಬರ್‌ 20: ಬಿಲಿಯನೇರ್ ಎಲೋನ್ ಮಸ್ಕ್ ಅವರು ಟ್ವಿಟ್ಟರ್‌ಗಾಗಿ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗಾಗಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ ಎಂದು ಮಂಗಳವಾರ ವರದಿಗಳು ತಿಳಿಸಿವೆ.

ಟ್ವಿಟ್ಟರ್ ಖರೀದಿಸಿದ ನಂತರ ಸಿಇಒ ರಾಜೀನಾಮೆ ನೀಡಿದ್ದರಿಂದ ತಾವೆ ಆ ಹುದ್ದೆಯನ್ನು ನಿರ್ವಹಿಸುತ್ತಿರುವ ಎಲಾನ್‌ ಮಸ್ಕ್‌ ಈಗ ಹೊಸ ಸಿಇಒ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಾದ ನಂತರ ಎಲಾನ್‌ ಮಸ್ಕ್‌ 7,500 ಮಂದಿಯನ್ನು ವಜಾ ಮಾಡಿದ್ದರು. ಭಾರತವೂ ಸೇರಿದಂತೆ ಹಲವಾರು ದೇಶಗಳ ನೌಕರರು ಟ್ವಿಟರ್‌ನಿಂದ ಹೊರಬಂದಿದ್ದರು. ಮಸ್ಕ್‌ ಅವರ ತೀರ್ಮಾನಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಹಲವು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

ನಾನು ಕೆಳಗಿಳಿಯಬೇಕೇ ಎಂಬ ಮಸ್ಕ್‌ ಪ್ರಶ್ನೆಗೆ ಉತ್ತರಿಸಿದ ಟ್ವೀಟಿಗರು: ಸಮೀಕ್ಷೆಯ ಫಲಿತಾಂಶ ಇಲ್ಲಿದೆನಾನು ಕೆಳಗಿಳಿಯಬೇಕೇ ಎಂಬ ಮಸ್ಕ್‌ ಪ್ರಶ್ನೆಗೆ ಉತ್ತರಿಸಿದ ಟ್ವೀಟಿಗರು: ಸಮೀಕ್ಷೆಯ ಫಲಿತಾಂಶ ಇಲ್ಲಿದೆ

ಹೀಗಾಗಿ ಈ ಎಲ್ಲ ಬೆಳವಣಿಗೆಗಳಿಂದ ಬೇಸೊತ್ತಿರುವ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ ಸಮೀಕ್ಷೆಯೊಂದನ್ನು ಆರಂಭಿಸಿದ್ದರು. ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ?' ಎಂದು ಪ್ರಶ್ನೆಯೊಂದನ್ನು ಕೇಳಿದ್ದರು. ಸಮೀಕ್ಷೆಯ ಫಲಿತಾಂಶದ ಪ್ರಕಾರ ನಡೆದುಕೊಳ್ಳುವುದಾಗಿಯೂ ಅವರು ಹೇಳಿದ್ದರು. ಈಗ ಸಮೀಕ್ಷೆ ಫಲಿತಾಂಶ ಹೊರಬಂದಿದೆ. ಮಸ್ಕ್ ಅವರ ಸಮೀಕ್ಷೆಯಲ್ಲಿ ಒಟ್ಟು 17 ಮಿಲಿಯನ್ ಮತಗಳು ಚಲಾವಣೆಯಾಗಿವೆ. ಈ ಪೈಕಿ ಶೇ.57.5ರಷ್ಟು ಮತಗಳು 'ಹೌದು' ಎಂಬುದಕ್ಕೆ ಬಿದ್ದಿವೆ. ಶೇ.42.5ರಷ್ಟು ಮತಗಳು ಅವರ ರಾಜೀನಾಮೆಗೆ ವಿರುದ್ಧವಾಗಿವೆ. ಸಮೀಕ್ಷೆಗೆ ಬದ್ಧನಾಗಿದ್ದೇನೆ ಎಂಬ ಹೇಳಿಕೆ ನೀಡಿರುವ ಮಸ್ಕ್ ಅವರ ಮುಂದಿನ ನಿರ್ಧಾರಗಳೇನು ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.

Elon Musks search for a new CEO for Twitter

ಇದರ ಬೆನ್ನಲ್ಲೇ ಈಗ ಎಲಾನ್‌ ಮಸ್ಕ್‌ ಹೊಸ ಸಿಇಒ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿಗಳು ಹೊರ ಬಿದ್ದಿವೆ. ಆಪಲ್‌ ಸೇರಿದಂತೆ ಹಲವಾರು ದೈತ್ಯ ಕಂಪೆನಿಗಳು ಟ್ವಿಟ್ಟರ್‌ಗೆ ಜಾಹೀರಾತು ನೀಡುವುದನ್ನು ನಿಲ್ಲಿಸಿದ್ದವು. ಇದು ವ್ಯವಹಾರಕ್ಕೆ ಬಾರೀ ಹೊಡೆತ ನೀಡಿತ್ತು. ಕಳೆದ ಅಕ್ಟೋಬರ್‌ನಲ್ಲಿ ಎಲೋನ್ ಮಸ್ಕ್ ಅವರು ಗುರುವಾರ ಟ್ವಿಟ್ಟರ್‌ನ 44 ಶತಕೋಟಿ ಡಾಲರ್‌ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು.

ಸ್ವಾಧೀನ ಪ್ರಕ್ರಿಯೆಯ ಮೊದಲ ಹೆಜ್ಜೆಯು ಸಾಮಾಜಿಕ ಮಾಧ್ಯಮ ಕಂಪನಿಯ ಉನ್ನತ ನಾಯಕರನ್ನು ವಜಾಗೊಳಿಸುವುದಾಗಿತ್ತು. ಅವರು ವೇದಿಕೆಯಲ್ಲಿನ ಸ್ಪ್ಯಾಮ್ ಖಾತೆಗಳ ಸಂಖ್ಯೆಯ ಬಗ್ಗೆ ತಪ್ಪುದಾರಿಗೆಳೆದಿದ್ದಾರೆ ಎಂದು ಆರೋಪಿಸಿದ್ದರು. ಅದರಂತೆ ಪ್ರಮುಖರಿಗೆ ಗೇಟ್ ಪಾಸ್ ನೀಡಲಾಗಿದೆ ಎನ್ನಲಾಗಿತ್ತು. ಆಗ ಮಸ್ಕ್ ಅವರು ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳು ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದ್ದರು ಎಂಬ ವರದಿಗಳು ಪ್ರಕಟಗೊಂಡಿದ್ದವು. ಟ್ವಿಟ್ಟರ್‌ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿದಾಗ ಅಗರವಾಲ್ ಮತ್ತು ಸೆಗಲ್ ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿದ್ದರು ಮತ್ತು ಅವರಿಗೆ ಬೆಂಗಾವಲು ಮಾಡಲಾಯಿತು ಎಂದು ಮೂಲಗಳು ತಿಳಿಸಿದ್ದವು.

English summary
Billionaire Elon Musk is actively searching for a new chief executive officer (CEO) for Twitter, according to reports on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X