ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುನಿರೀಕ್ಷೆಯ ಲಕ್ಸುರಿ ಬೈಕ್ ಡುಕಾಟಿ ಮಾನ್‌ಸ್ಟರ್ ಬಿಡುಗಡೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಐಷಾರಾಮಿ ಮೋಟಾರ್‌ಸೈಕಲ್ ಬ್ರಾಂಡ್ ಡುಕಾಟಿ ಹೊಚ್ಚಹೊಸ ಮಾನ್‌ಸ್ಟರ್ ಶ್ರೇಣಿಯ ಬಿಡುಗಡೆ ಮಾಡಿದೆ. ಮಾನ್‌ಸ್ಟರ್ ರೂ.10.99 ಲಕ್ಷಗಳು ಮತ್ತು ಮಾನ್‌ಸ್ಟರ್ ಪ್ಲಸ್ ರೂ.11.24 ಲಕ್ಷಗಳ ಬೆಲೆ ಹೊಂದಿದೆ(ಎಕ್ಸ್-ಶೋರೂಂ ಇಂಡಿಯಾ). ಹೊಸ ಮಾನ್‌ಸ್ಟರ್ ಡುಕಾಟಿಯ ಅತ್ಯಂತ ಹಗುರ, ಅತ್ಯಂತ ಕಿರಿದಾದ ಮತ್ತು ಅಗತ್ಯ ಆಕಾರ ಹೊಂದಿದ್ದು ಡುಕಾಟಿಯ ಎಲ್ಲ ಅಂತಃಸ್ಸತ್ವವನ್ನು ಪ್ರತಿನಿಧಿಸುತ್ತದೆ.

ಹೊಸ ಮಾನ್‌ಸ್ಟರ್ ಪರಿಕಲ್ಪನೆಯು ಮರೆಯಲಾಗದ ಮಾನ್‌ಸ್ಟರ್ 900 ಹೇಗಿತ್ತೋ ಹಾಗೆಯೇ ಇದೆ, ಮೊದಲಿಗೆ ಟ್ರೂ ಸ್ಪೋರ್ಟ್ಸ್ ನೇಕೆಡ್, ಆದರೆ ಗ್ರೌಂಡ್ ಅಪ್ ಮೂಲಕ ಮರು ರೂಪುಗೊಂಡಿದೆ. ಇದರ ಫಲಿತಾಂಶದಿಂದ ಅತ್ಯಂತ ಸುಧಾರಿತ ಮತ್ತು ಸುಲಭ ಚಾಸೀಸ್, ತಕ್ಷಣ ರೈಡರ್‍ಗೆ ಪರಿಪೂರ್ಣತೆಯ ಭಾವನೆ ರೂಪಿಸುವ ಸಾಮರ್ಥ್ಯ ಹೊಂದಿದೆ. ರೈಡಿಂಗ್ ಸ್ಥಾನವು ಮಣಿಕಟ್ಟುಗಳಲ್ಲಿ ಕಡಿಮೆ ಭಾರ ಹೊಂದಿದೆ ಮತ್ತು ಎಂಜಿನ್ ಶಕ್ತಿ, ಟಾರ್ಕ್ ಮತ್ತು ಸುಲಭ ನಿರ್ವಹಣೆಯ ಅತ್ಯುತ್ತಮ ಸಮತೋಲನ ನೀಡುತ್ತದೆ.

ಹೊಸ ಮಾನ್‌ಸ್ಟರ್ ಸೃಷ್ಟಿಸಲು ಎಂಜಿನಿಯರ್‌ಗಳು ಮತ್ತು ಡಿಸೈನರ್‌ಗಳು ಶೂನ್ಯದಿಂದ ಆದರೆ ಸ್ಪಷ್ಟ ಆಲೋಚನೆಯೊಂದಿಗೆ ಪ್ರಾರಂಭಿಸಿದರು. ತೆಳುವಾದ ಮತ್ತು ದೃಢತೆಯ ಈ ಬೈಕ್ ಮಾನ್ಸ್‍ಟರ್‍ನ ಡಿಎನ್‍ಎ ಒಳಗೊಂಡಿದ್ದು ಅದನ್ನು ತಕ್ಷಣವೇ ಗುರುತಿಸುವಂತೆ ಮಾಡುತ್ತದೆ: "ಬೈಸನ್ ಬ್ಯಾಕ್" ರೀತಿಯ ಫ್ಯೂಯೆಲ್ ಟ್ಯಾಂಕ್, "ಶೌಲ್ಡರ್-ಎಂಬೆಡ್ಡೆಡ್" ದುಂಡಗಿನ ಹೆಡ್‍ಲೈಟ್, ಸ್ವಚ್ಛ ಟೈಲ್ ಮತ್ತು ಎಂಜಿನ್ ದೃಶ್ಯದ ಕೇಂದ್ರದಲ್ಲಿವೆ.

 ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ

ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ, "ಹೊಸ ಮಾನ್ಸ್‍ಟರ್ ಬೊರ್ಗೊ ಪಾನಿಗೇಲ್‍ನಲ್ಲಿ ಪ್ರತಿಯೊಬ್ಬರಿಗೂ ನೈಜ ಸ್ಟಾರ್ ಆಗಿದೆ ಈ ಬ್ರಾಂಡ್ ಕೆಲವು ಇತರರಂತೆ ಡುಕಾಟಿಯ ಇತಿಹಾಸ ಗುರುತಿಸಿದ್ದು ಡುಕಾಟಿಯ ಅತ್ಯಂತ ಹೆಚ್ಚು ಮಾರಾಟದ ಮಾಡೆಲ್ ಎನಿಸಿದ್ದು 1993ರಲ್ಲಿ ಮಾನ್‌ಸ್ಟರ್ ಮೊದಲು ಬಿಡುಗಡೆಯಾದ ದಿನದಿಂದಲೂ 350,000 ಮೀರಿ ಮೋಟಾರ್‌ಸೈಕಲ್ಗಳ ಮಾರಾಟ ಮಾಡಿದೆ. ಹೊಸ ಮಾನ್‌ಸ್ಟರ್ ಸಂಪೂರ್ಣ ಹೊಸ ಬೈಕ್ ಆಗಿದ್ದು ಹೆಚ್ಚು ಸ್ಪೋರ್ಟಿ, ಹಗುರ ಮತ್ತು ರೈಡ್ ಮಾಡಲು ಸುಲಭವಾಗಿದ್ದು ಹೊಸ ರೈಡರ್‌ಗಳಿಗೆ ಹಾಗೂ ಅನುಭವಿಗಳಿಗೆ ಅತ್ಯಂತ ಲಭ್ಯವಾಗುವಂತೆ ಮಾಡಿದೆ. ಜಾಗತಿಕವಾಗಿ, ಹೊಸ ಮಾನ್‌ಸ್ಟರ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದ್ದೇವೆ ಮತ್ತು ಭಾರತದ ರೈಡಿಂಗ್ ಸಮುದಾಯದಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ ಏಕೆಂದರೆ ಇದು ವಿನೋದಕ್ಕಾಗಿ ಇರುವ ನಮ್ಮ ರೈಡಿಂಗ್ ಪರಿಸ್ಥಿತಗಳಿಗೆ ಹೊಂದಿಕೊಳ್ಳುವ ನೇಕೆಡ್, ಲೈಟ್ ಡುಕಾಟಿಯಾಗಿದೆ!" ಎಂದರು.

ಕ್ರೀಡಾತನ ಮತ್ತು ವಿನೋದ

ಕ್ರೀಡಾತನ ಮತ್ತು ವಿನೋದ

ಹೊಸ ಮಾನ್‌ಸ್ಟರ್ ಹೊಸ ಎಂಜಿನ್ ಟೆಸ್ಟಾಸ್ಟ್ರೆಟ್ಟಾ 11ಲಿ, 937 ಸಿಸಿ ಎಲ್-ಟ್ವಿನ್, ಡೆಸ್ಮೊಡ್ರೊಮಿಕ್ ಡಿಸ್ಟ್ರಿಬ್ಯೂಷನ್ ಮತ್ತು ಬಿಎಸ್6 ಹೊಮೊಲ್ಗೇಷನ್ ಹೊಂದಿದೆ. ಹಿಂದಿನ 821ಕ್ಕೆ ಹೋಲಿಸಿದರೆ ಹೊಸ ಎಂಜಿನ್ ಅದರ ಡಿಸ್ಪ್ಲೇಸ್‍ಮೆಂಟ್, ವಿದ್ಯುಚ್ಛಕ್ತಿ, ಟಾರ್ಕ್ ಹೆಚ್ಚಿಸಿದೆ ಮತ್ತು ತೂಕ ಇಳಿಸಿದ್ದು(-2.4ಕೆಜಿ) ಅದರ ಹಗುರತನಕ್ಕೆ ಕೊಡುಗೆ ನೀಡಿದೆ ಮತ್ತು ಅತ್ಯಂತ ಉತ್ತಮ ರೈಡಿಂಗ್ ಅನುಭವ ನೀಡುತ್ತದೆ. ಇದು 9,250 ಆರ್‍ಪಿಎಂನಲ್ಲಿ 111 ಎಚ್‍ಪಿ ನೀಡುತ್ತಿದ್ದು ಕೇವಲ 6,500 ಆರ್‍ಪಿಎಂನಲ್ಲಿ 93 ಎನ್‍ಎಂ ಗರಿಷ್ಠ ಟಾರ್ಕ್ ನೀಡುವ ಮೂಲಕ ದಕ್ಷ ಮತ್ತು ಥ್ರಾಟಲ್ ರೆಸ್ಪಾನ್ಸ್‌ನಲ್ಲಿ ರಿಯಾಕ್ಟಿವ್ ಆಗಿರುತ್ತದೆ. ಅದಕ್ಕೆ ಹೆಚ್ಚಿಸಲಾದ ಡಿಸ್ಪ್ಲೇಸ್‍ಮೆಂಟ್, ಟಾರ್ಕ್ ಎಲ್ಲ ರಿವ್‍ಗಳಲ್ಲಿ ಸುಧಾರಿಸುತ್ತದೆ, ಅದರಲ್ಲಿಯೂ ಮೀಡಿಯಂ-ಲೋ ರೇಂಜ್‍ನಲ್ಲಿದ್ದು ಅದು ರಸ್ತೆಗಳಲ್ಲಿ ಮತ್ತು ಅಂಚುಗಳ ನಡುವೆ ಬಳಕೆಯಾಗುತ್ತದೆ. ಇದು ಥ್ರಿಲ್ಲಿಂಗ್ ಅನುಭವ ನೀಡುತ್ತದೆ ಅಲ್ಲದೆ ರೈಡಿಂಗ್ ಅನ್ನು ಸುಲಭ ಮತ್ತು ಆನಂದದಾಯಕವಾಗಿಸುತ್ತದೆ, ಅಲ್ಲದೆ ಹೊಸ ಗೇರ್‌ಬಾಕ್ಸ್ ಮತ್ತು ಡುಕಾಟಿ ಶಿಫ್ಟ್ ಅಪ್/ಡೌನ್ ಅನ್ನು ಸ್ಟಾಂಡರ್ಡ್ ಆಗಿ ಜೋಡಿಸಲಾಗಿದೆ.

ತೂಕ ಇಳಿಸಲು ಹೆಚ್ಚಿನ ಗಮನ

ತೂಕ ಇಳಿಸಲು ಹೆಚ್ಚಿನ ಗಮನ

ಗರಿಷ್ಠ ಮೋಜಿಗೆ ನಾವು ಹೊಸ ಮಾನ್‌ಸ್ಟರ್ ಸೃಷ್ಟಿಸುವಲ್ಲಿ ತೂಕ ಇಳಿಸಲು ಹೆಚ್ಚಿನ ಗಮನ ನೀಡಿದ್ದೇವೆ. ಚಾಸೀಸ್, ಅಕ್ಸೆಸರಿ ಅಂಶಗಳು ಮತ್ತು ರಚನೆಗಳನ್ನು ಗ್ರೌಂಡ್ ಅಪ್‍ನಿಂದ ಮರು ವಿನ್ಯಾಸಗೊಳಿಸಲಾಗಿದ್ದು ಕಿರಿದಾದ ಮತ್ತು ಹಗುರವಾದ ಬೈಕ್ ಸೃಷ್ಟಿಸಿದ್ದು ಪ್ರತಿನನಿತ್ಯದ ಬಳಕೆ ಹಾಗೂ ಕ್ರೀಡಾ ಬಳಕೆಗೆ ಸೂಕ್ತವಾಗಿದೆ.

ಅಲ್ಯುಮಿನಿಯಂ ಫ್ರಂಟ್ ಫ್ರೇಮ್ ಪಾನಿಗೇಲ್ ವಿ4ನಲ್ಲಿ ಕಾಣುವ ಅದೇ ಪರಿಕಲ್ಪನೆಯನ್ನು ಪುನರಾವರ್ತಿಸುತ್ತದೆ. ಇದು ಕಿರಿದು ಮತ್ತು ನೇರವಾಗಿ ಎಂಜಿನ್ ವೇಗಗಳಿಗೆ ಹೊಂದಿಕೊಳ್ಳುತ್ತದೆ. ಇದು ಕಿರಿದು ಮತ್ತು ನೇರವಾಗಿ ಎಂಜಿನ್ ಹೆಡ್‍ಗಳಿಗೆ ಹೊಂದಿಕೊಂಡಿದೆ. ಕೇವಲ 3 ಕೆಜಿ ತೂಕವಿರುವ ಇದರ ಫ್ರೇಮ್ ಹಿಂದಿನ ಟ್ರೆಲ್ಲಿಸ್‍ಗಿಂತ 4.5 ಕೆಜಿ ಹಗುರವಾಗಿದ್ದು(ಶೇ.60 ಕಡಿಮೆ)ಬೈಕ್‍ನ ತೂಕವನ್ನು ಕೇವಲ 166 ಕೆಜಿಗೆ ಇಳಿಸಲು ನೆರವಾಗಿದೆ.

ಪ್ರತಿ ಬಿಡಿಭಾಗವನ್ನೂ ಮರು ವಿನ್ಯಾಸಗೊಳಿಸಲಾಗಿದೆ ಮತ್ತು ಹಗುರಗೊಳಿಸಲಾಗಿದೆ; ರಿಮ್‍ಗಳು 1.7 ಕೆಜಿ ಕಡಿಮೆಯಾಗಿವೆ ಮತ್ತು ಸ್ವಿಂಗ್ ಆರ್ಮ್ 1.6 ಕೆಜಿ ತೂಕ ಕಡಿಮೆಯಾಗಿದೆ. ರಿಯರ್ ಸಬ್ ಫ್ರೇಮ್ 1.9 ಕೆಜಿ ಕಡಿಮೆಯಾಗಿದೆ, ಅದಕ್ಕೆ ಜಿಎಫ್‍ಆರ್‍ಪಿ(ಗ್ರೀನ್ ಫೈಬರ್ ರೀಇನ್ಫೋರ್ಸ್‍ಡ್ ಪಾಲಿಮರ್) ತಂತ್ರಜ್ಞಾನ ಕಾರಣವಾಗಿದೆ, ಅದು ಆಕಾರಗಳು ಮತ್ತು ಮೇಲ್ಮೈಗಳನ್ನು ಹಗುರಗೊಳಿಸಲು ಮತ್ತು ಡೈಮೆನ್ಷನಲ್ ಕಾಂಪ್ಯಾಕ್ಟ್‌ನೆಸ್‍ಗೆ ಅನುಕೂಲ ಒದಗಿಸುತ್ತವೆ. ಇದರಿಂದ ಉಳಿಯುವ ಒಟ್ಟು ತೂಕ ಮಾನ್‌ಸ್ಟರ್ 821ಕ್ಕೆ ಹೋಲಿಸಿದರೆ 18 ಕೆಜಿ ಉಳಿಸುತ್ತದೆ.

ಸುಲಭ, ಯಾವುದೇ ಸನ್ನಿವೇಶದಲ್ಲಿ.

ಸುಲಭ, ಯಾವುದೇ ಸನ್ನಿವೇಶದಲ್ಲಿ.

ಸೀಟಿನ ಎತ್ತರ ನೆಲದಿಂದ 820ಎಂಎಂ ಇದೆ. ಇದು, ಬೈಕ್‍ನ ಕಿರಿದಾದ ಅಂಚುಗಳೊಂದಿಗೆ ಒಟ್ಟಾಗಿ ರೈಡರ್‌ಗೆ ಆತ/ಆಕೆಯ ಕಾಲನ್ನು ಸುಲಭವಾಗಿ ಕೆಳಗಿಡಲು ನೆರವಾಗುತ್ತದೆ. ಈ ಸೀಟು ಅಕ್ಸೆಸರಿಯಾಗಿ ಲಭ್ಯವಿದ್ದು ಸೀಟಿನ ಎತ್ತರವನ್ನು 800ಎಂಎಂಗೆ ಕಡಿಮೆ ಮಾಡುತ್ತದೆ ಅಲ್ಲದೆ ಉತ್ತಮ ಪ್ಯಾಡಿಂಗ್ ಕಾಪಾಡುತ್ತದೆ. ಕೆಳಗಿರುವ ಸೀಟು ಅಲ್ಲದೆ ಸಸ್ಪೆನ್ಷನ್ ಕಿಟ್ ಕೂಡಾ ಅಕ್ಸೆಸರಿಯಾಗಿ ಲಭ್ಯವಿದ್ದು ಅದು ಸೀಟಿನ ಎತ್ತರವನ್ನು 775ಎಂಎಂಗೆ ಇಳಿಸುತ್ತದೆ.

ಕಡಿಮೆ ವೇಗಗಳಲ್ಲಿ ಗರಿಷ್ಠ ಚಾಲನೀಯತೆ ಮತ್ತು ಸ್ಥಿರವಾಗಿದ್ದು ಕೌಶಲ್ಯಕ್ಕೆ ಸ್ಟೀರಿಂಗ್ ಕೋನವನ್ನು 36 ಡಿಗ್ರಿಗೆ ಹೆಚ್ಚಿಸಲಾಗಿದೆ(821ಗೆ ಹೋಲಿಸಿದರೆ +7ಲಿ). ಹ್ಯಾಂಡಲ್‍ಬಾರ್ ಈಗ ರೈಡರ್‍ನ ಮುಂಡಕ್ಕೆ 7 ಸೆಂ.ಮೀ. ಹತ್ತಿರದಲ್ಲಿದ್ದು ಹೆಚ್ಚು ಸೌಖ್ಯ ಮತ್ತು ನಿಯಂತ್ರಣ ನೀಡಲು ನೆಟ್ಟನೆಯ ರೈಡಿಂಗ್ ಪೊಸಿಷನ್ ನೀಡುತ್ತದೆ. ಪಾದದ ಪೊಸಿಷನ್ ಕೂಡಾ ಬದಲಾಯಿಸಬಹುದು ಮತ್ತು ಇದು ನಗರದ ಟ್ರಾಫಿಕ್‍ನಲ್ಲೂ ಸುಲಭವಾಗಿ ರೈಡಿಂಗ್ ಮಾಡಲು ಅವಕಾಶ ನೀಡುತ್ತದೆ.

ತಾಂತ್ರಿಕ ವಿವರ

ತಾಂತ್ರಿಕ ವಿವರ

ಸ್ಟಾಂಡರ್ಡ್ ಸಾಧನದಲ್ಲಿ ಎಬಿಎಸ್ ಕಾರ್ನರಿಂಗ್, ಟ್ರಾಕ್ಷನ್ ಕಂಟ್ರೋಲ್ ಮತ್ತು ವ್ಹೀಲಿ ಕಂಟ್ರೋಲ್ ಇದ್ದು ಎಲ್ಲವು ವಿವಿಧ ಹಂತಗಳ ಮಧ್ಯಪ್ರವೇಶಕ್ಕೆ ಹೊಂದಿಕೊಳ್ಳಬಲ್ಲವು. ಬೈಕ್‍ನ ಸ್ಪೋರ್ಟಿ ಗುಣವು ಲಾಂಚ್ ಕಂಟ್ರೋಲ್ ಮೂಲಕ ಸೂಚಿಸುತ್ತದೆ, ಅದು ಮಿಂಚಿನ ವೇಗದಲ್ಲಿ ಸ್ಟಾರ್ಟ್ ಆಗುವಂತೆ ಮಾಡುತ್ತದೆ. ಈ ಎಲೆಕ್ಟ್ರಾನಿಕ್ ಸಾಧನವು ಬೈಕ್‍ನ ಕಾರ್ಯಕ್ಷಮತೆಯನ್ನು ಉನ್ನತ ಮಟ್ಟದ ಸಕ್ರಿಯ ಸುರಕ್ಷತೆ ನೀಡುತ್ತದೆ.

ಹೊಸ ಮಾನ್‌ಸ್ಟರ್ ಮೂರು ರೈಡಿಂಗ್ ಮೋಡ್‍ಗಳು(ಸ್ಪೋರ್ಟ್, ಅರ್ಬನ್ ಮತ್ತು ಟೂರಿಂಗ್) ಬೈಕ್‍ನ ಲಕ್ಷಣವನ್ನು ವಿಭಿನ್ನ ರೈಡಿಂಗ್ ಆದ್ಯತೆಗಳು ಮತ್ತು ಅಗತ್ಯಗಳಿಗೆ ಪೂರಕವಾಗಿ ರೂಪಿಸಲು ಅವಕಾಶ ನೀಡುತ್ತವೆ. ಪ್ರತಿಯೊಂದನ್ನೂ ಹ್ಯಾಂಡಲ್‍ಬಾರ್ ನಿಯಂತ್ರಣಗಳಿಂದ ನಿರ್ವಹಿಸಲಾಗುತ್ತದೆ ಮತ್ತು ಬೈಕ್ ಈಗ ಹೊಸ 4.3" ಕಲರ್ ಟಿಎಫ್‍ಟಿ ಡ್ಯಾಶ್‍ಬೋರ್ಡ್ ಹೊಂದಿದ್ದು ಪಾನಿಗೇಲ್ ವಿ4 ಸ್ಫೂರ್ತಿಯ ರೇಸಿಂಗ್ ಗ್ರಾಫಿಕ್ಸ್ ಒಳಗೊಂಡಿದ್ದು ದೊಡ್ಡ ರಿವ್ ಕೌಂಟರ್ ಗೇರ್ ಪೊಸಿಷನ್ ಅನ್ನೂ ತೋರಿಸುತ್ತದೆ.

ಕಸ್ಟಮೈಸೇಷನ್ ಸಂಕೇತ.

ಕಸ್ಟಮೈಸೇಷನ್ ಸಂಕೇತ.

ಪ್ರತಿ ಮಾನ್‌ಸ್ಟರ್ ಅನ್ನು ಅವರ ಬೈಕ್ ಜನಜಂಗುಳಿಯಿಂದ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡಲು ಅವಕಾಶ ನೀಡುವ ಡುಕಾಟಿ ಮಾನ್ಸ್‍ಟರ್ ಆಕಾರಗಳನ್ನು ಹೆಚ್ಚಿಸುವ ಮತ್ತು ಡುಕಾಟಿಯ ಸ್ಪೋರ್ಟಿನೆಸ್ ಸಂಭ್ರಮಿಸುವ ಸ್ಟಿಕರ್‌ಗಳನ್ನು ಸೃಷ್ಟಿಸಿದೆ. ಅವರ ಮಾನ್‌ಸ್ಟರ್‌ನ ಸ್ಟೈಲ್ ಅನ್ನು ಮತ್ತಷ್ಟು ನಿರ್ಧಾರಿತ ರೀತಿಯಲ್ಲಿ ಹೆಚ್ಚಿಸಲು ಬಯಸುವವರಿಗೆ ಕವರ್ ಕಿಟ್‍ಗಳು ಕೂಡಾ ಲಭ್ಯ. ಎಲ್ಲ ಡುಕಾಟಿ ಮೋಟಾರ್‍ಸೈಕಲ್‍ಗಳಂತೆ ವಿಸ್ತಾರ ಶ್ರೇಣಿಯ ಡುಕಾಟಿ ಪರ್ಫಾರ್ಮೆನ್ಸ್ ಅಕ್ಸೆಸರೀಸ್ ಆಗಿರುವ ಡಬಲ್ ಟರ್ಮಿಗ್ನೊನಿ ಅಪ್ರೂವ್ಡ್ ಸೈಲೆನ್ಸರ್ ಕಾರ್ಬನ್ ಫೈಬರ್ ಎಂಡ್ ಕ್ಯಾಪ್ಸ್ ಜೊತೆಯಲ್ಲಿ ಲಭ್ಯ.

ಹೊಸ ಮಾನ್‌ಸ್ಟರ್ ಈಗ ಡುಕಾಟಿ ರೆಡ್ ಮತ್ತು ಡಾರ್ಕ್ ಸ್ಟೆಲ್ಥ್ ವಿಥ್ ಬ್ಲಾಕ್ ವ್ಹೀಲ್ಸ್ ಮತ್ತು ಏವಿಯೇಟರ್ ಗ್ರೇ ಮತ್ತು ಜಿಪಿ ರೆಡ್ ವ್ಹೀಲ್ಸ್‌ನಲ್ಲಿ ಲಭ್ಯ. ಬೈಕ್ ಅನ್ನು ಮತ್ತಷ್ಟು ಸ್ಪೋರ್ಟಿಯರ್ ನೋಟ ಬಯಸುವವರಿಗೆ ಪ್ಲಸ್ ಆವೃತ್ತಿಯು ಅದೇ ಬಣ್ಣಗಳಲ್ಲಿ ಲಭ್ಯ, ಅದು ಏರೋಡೈನಮಿಕ್ ವಿಂಡ್‍ಶೀಲ್ಡ್ ಮತ್ತು ರಿಯರ್ ಸೀಟ್ ಕವರ್ ಸ್ಟಾಂಡರ್ಡ್ ಫಿಟ್‍ಮೆಂಟ್ ಆಗಿ ಲಭ್ಯ.

ಎಲ್ಲ ಬೆಲೆಗಳು ಎಕ್ಸ್-ಶೋರೂಂ

ಎಲ್ಲ ಬೆಲೆಗಳು ಎಕ್ಸ್-ಶೋರೂಂ

ಈ ಕೆಳಗೆ ನೀಡಲಾದ ಎಲ್ಲ ಬೆಲೆಗಳು ಎಕ್ಸ್-ಶೋರೂಂ ಭಾರತದಂತೆ ಅನ್ವಯಿಸುತ್ತವೆ:

ಮಾನ್‌ಸ್ಟರ್ ರೆಡ್ ಕಪ್ಪು ಚಕ್ರಗಳೊಂದಿಗೆ: ರೂ.10,99,000

ಮಾನ್‌ಸ್ಟರ್ ಡಾರ್ಕ್ ಸ್ಟೆಲ್ತ್ ಕಪ್ಪು ಚಕ್ರಗಳೊಂದಿಗೆ: ರೂ.11,09,000

ಮಾನ್‌ಸ್ಟರ್ ಏವಿಯೇಟರ್ ಗ್ರೇ ಜಿಪಿ ರೆಡ್ ಚಕ್ರಗಳೊಂದಿಗೆ: ರೂ.11,09,000

ಮಾನ್‌ಸ್ಟರ್ ಪ್ಲಸ್ ರೆಡ್ ಕಪ್ಪು ಚಕ್ರಗಳೊಂದಿಗೆ: ರೂ. 11,24,000

ಮಾನ್‌ಸ್ಟರ್ ಪ್ಲಸ್ ಡಾರ್ಕ್ ಸ್ಟೆಲ್ತ್ ಕಪ್ಪು ಚಕ್ರಗಳೊಂದಿಗೆ: ರೂ.11,34,000

ಮಾನ್‌ಸ್ಟರ್ ಏವಿಯೇಟರ್ ಗ್ರೇ ಜಿಪಿ ರೆಡ್ ಚಕ್ರಗಳೊಂದಿಗೆ: ರೂ.11,34,000

ಬುಕಿಂಗ್‍ಗಳು ಈಗ ದೆಹಲಿ-ಎನ್‍ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಕೊಚ್ಚಿ, ಕೊಲ್ಕತಾ ಮತ್ತು ಚೆನ್ನೈಗಳಲ್ಲಿ ಲಭ್ಯವಿವೆ ಮತ್ತು ತಕ್ಷಣವೇ ಡೆಲಿವರಿಗಳು ಪ್ರಾರಂಭವಾಗುತ್ತವೆ.(ಮಾಹಿತಿ ಕೃಪೆ: ಡುಕಾಟಿ ಇಂಡಿಯಾ)

English summary
Luxury motorcycle brand Ducati today announced the launch of its all-new Monster range in India, with Monster priced atINR 10.99 Lacs and Monster Plus priced atINR 11.24 Lacs respectively (Ex-Showroom India).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X