ದೇಶೀಯ ಅಡುಗೆ ಅನಿಲ ಬೆಲೆ ಏರಿಕೆ : ಜೂನ್‌ 1ರಿಂದಲೇ ಹೊಸ ದರ ಜಾರಿ

ನವದೆಹಲಿ, ಜೂನ್ 1: ಕೊರೊನಾವೈರಸ್ ಲಾಕ್‌ಡೌನ್ ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ದೇಶೀಯ ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಲಾಗಿದೆ. ಹೊಸ ದರಗಳು ಜೂನ್‌ 1ರಿಂದಲೇ ಜಾರಿಗೆ ಬರಲಿವೆ.

ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು ಇಂಡೇನ್ ಗ್ಯಾಸ್ ಸಿಲಿಂಡರ್‌ಗೆ 11.50 ರುಪಾಯಿ ಹೆಚ್ಚಿಸಲಾಗಿದೆ. ಇದು ಜೂನ್ 1 ರಿಂದ ಜಾರಿಯಾಗಿದೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ವ್ಯವಹಾರಗಳು ಪುನಾರಂಭಗೊಳ್ಳುವ ನಿರೀಕ್ಷೆಯ ಬೆನ್ನಲ್ಲೇ ಈ ಹೊಸ ದರಗಳು ಜಾರಿಗೆ ಬಂದಿವೆ.

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸುತ್ತಾರೆ, ಮುಖ್ಯವಾಗಿ ಎಲ್‌ಪಿಜಿಯ ಅಂತರರಾಷ್ಟ್ರೀಯ ಮಾನದಂಡ ದರ ಮತ್ತು ಯುಎಸ್ ಡಾಲರ್ ಮತ್ತು ಭಾರತೀಯ ರುಪಾಯಿ ವಿನಿಮಯ ದರವನ್ನು ಅವಲಂಬಿಸಿರುತ್ತದೆ.

Domestic LPG Cylinder Price Hiked Effective From June 1

"ಮೇ 2020ರ ದೆಹಲಿ ಮಾರುಕಟ್ಟೆಯಲ್ಲಿ ಎಲ್‌ಪಿಜಿಯ ಚಿಲ್ಲರೆ ಮಾರಾಟದ ಬೆಲೆಯನ್ನು 744 ರುಪಾಯಿಗಳಿಂದ ಅಂತರಾಷ್ಟ್ರೀಯ ಬೆಲೆಗಳ ಕುಸಿತಕ್ಕೆ ಅನುಗುಣವಾಗಿ 581.50 ರುಪಾಯಿಗೆ ಇಳಿಸಲಾಗಿತ್ತು'' ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (ಐಒಸಿಎಲ್) ಹೇಳಿಕೆಯಲ್ಲಿ ತಿಳಿಸಿದೆ.

ಆದರೆ ಜೂನ್ ತಿಂಗಳಿನಲ್ಲಿ ಎಲ್‌ಪಿಜಿಯ ಅಂತರಾಷ್ಟ್ರೀಯ ಬೆಲೆಗಳಲ್ಲಿ ಹೆಚ್ಚಳ ಕಂಡುಬಂದಿರುವ ಪರಿಣಾಮ, ದೆಹಲಿ ಮಾರುಕಟ್ಟೆಯಲ್ಲಿ ಎಲ್‌ಪಿಜಿಯ ಪ್ರತಿ ಸಿಲಿಂಡರ್ ಬೆಲೆಯನ್ನು 11.50 ರುಪಾಯಿಗೆ ಹೆಚ್ಚಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನು, ಈ ಹೊಸ ದರಗಳು ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಕಂಪನಿ ಹೇಳಿದೆ. ಏಕೆಂದರೆ ಅವುಗಳು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಗೆ ಒಳಪಟ್ಟಿವೆ ಮತ್ತು ಜೂನ್ 30 ರವರೆಗೆ ಉಚಿತ ಸಿಲಿಂಡರ್‌ಗೆ ಅರ್ಹವಾಗಿವೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.

ನಿಮ್ಮ ನಗರದಲ್ಲಿ ಎಲ್ಪಿಜಿ, ಪೆಟ್ರೋಲ್, ಡೀಸೆಲ್ ದರವನ್ನು ತಿಳಿಯಲು ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+