ಯೆಸ್ ಬ್ಯಾಂಕ್ ಸ್ಥಗಿತ, 3 ಲಕ್ಷ ಕೋಟಿ ನಷ್ಟ, ಡಿಜಿಟಲ್ ಪೇಮೆಂಟ್ ಡೌನ್

ನವದೆಹಲಿ, ಮಾರ್ಚ್ 6: ಯೆಸ್ ಬ್ಯಾಂಕ್ ಸೂಪರ್ ಸೀಡ್ ಆಗಿರುವ ಸುದ್ದಿ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಗೊಳಿಸಿದ ಬಳಿಕ ಷೇರು ಪೇಟೆಯಲ್ಲಿ ಯೆಸ್ ಬ್ಯಾಂಕ್ ಷೇರುಗಳು ಸುಮಾರು ಶೇ.30ರಷ್ಟು ಕುಸಿತ ಕಂಡಿದೆ. ಒಂದು ನಿಮಿಷ ಅವಧಿಯಲ್ಲೇ 3 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

Recommended Video

      Why the RBI Has Taken Over Yes Bank’s Board and Capped Withdrawals at Rs 50K | Oneindia Kannada

      ಯೆಸ್ ಬ್ಯಾಂಕ್ ವ್ಯವಹಾರ, ಎಟಿಎಂ ವಿಥ್ ಡ್ರಾ ಕುರಿತಂತೆ ಆರ್ ಬಿಐ ನಿರ್ದೇಶನದಂತೆ ಹಣಕಾಸು ಇಲಾಖೆ ಮಾರ್ಚ್ 5ರಂದು ಹೊರಡಿಸಿದ ಸುತ್ತೋಲೆಯಂತೆ ಹಣ ವಿತ್‌ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಲಾಗಿದ್ದು, ಮಾರ್ಚ್ 5ರಿಂದ ಏಪ್ರಿಲ್ 3ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.

      ಯೆಸ್ ಬ್ಯಾಂಕಿನ ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನಲೆಯಲ್ಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆರ್ ಬಿಐ ನೇಮಿಸಿರುವ ಆಡಳಿತ ಅಧಿಕಾರಿ ಪ್ರಶಾಂತ್ ಕುಮಾರ್ ಅವರು ಆಪ್ ಆಧಾರಿತ ಡಿಜಿಟಲ್ ಪೇಮೆಂಟ್ ಶೀಘ್ರವೇ ಚಾಲನೆ ಪಡೆಯಲಿದೆ ಎಂದಿದ್ದಾರೆ.

      ಡಿಜಿಟಲ್ ಪೇಮೆಂಟ್ ಡೌನ್: ಯೆಸ್ ಬ್ಯಾಂಕ್ ಜೊತೆಗೆ ಡಿಜಿಟಲ್ ಪೇಮೆಂಟ್ ಒಪ್ಪಂದ ಮಾಡಿಕೊಂಡಿದ್ದ ಸಹ ಸಂಸ್ಥೆಗಳ ವ್ಯವಹಾರಕ್ಕೂ ತೊಂದರೆ ಉಂಟಾಗಿದೆ. ಮುಖ್ಯವಾಗಿ ಫೋನ್ ಪೇ ವ್ಯವಹಾರ ಕೂಡಾ ಸರಿಯಾಗಿ ಆಗುತ್ತಿಲ್ಲ. ಈ ಕುರಿತಂತೆ ಮುಖ್ಯ ಕಾರ್ಯಕಾರಿ ಸಮೀರ್ ನಿಗಮ್ ಅವರು ಸ್ಪಷ್ಟಪಡಿಸಿದ್ದಾರೆ.

      Digital partners of Yes Bank hit by moratorium

      ಇದಲ್ಲದೆ, ಖಾಸಗಿ ಕಂಪನಿಗಳಲ್ಲಿ ನೀಡಲಾಗುವ ಫುಡ್ ಕೂಪನ್ ಮೀಲ್ ಕಾರ್ಡ್ (ಯೆಸ್ ಬ್ಯಾಂಕ್ ಜೊತೆಗೆ Ederred) ಕೂಡಾ ಈಗ ಕಾರ್ಯ ನಿರ್ವಹಿಸುವುದಿಲ್ಲ. ಮಾಲ್, ಫುಡ್ ಕೋರ್ಟ್ ಗಳಲ್ಲಿ ಟಿಕೆಟ್ ಕಾರ್ಡ್ ಈಗ ಕಾರ್ಯ ನಿರ್ವಹಿಸುವುದಿಲ್ಲ ಎಂದು ಗ್ರಾಹಕರಿಗೆ ಸಂದೇಶ ಕಳಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+