ಕಾಫಿ ಡೇ ಸಿದ್ದಾರ್ಥಗೆ ಐಟಿ ಇಲಾಖೆ ಕಿರುಕುಳ ಎಷ್ಟು ನಿಜ?

ಕೆಫೆ ಕಾಫಿ ಡೇ ಎಂಬ ಜಾಗತಿಕ ಬ್ರ್ಯಾಂಡ್ ಸ್ಥಾಪಕ ಉದ್ಯಮಿ ವಿ.ಜಿ ಸಿದ್ದಾರ್ಥ ಹೆಗ್ಡೆ ಅವರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೇ? ಸಿದ್ದಾರ್ಥ ಕಳಿಸಿದ್ದಾರೆ ಎನ್ನಲಾದ ಕೊನೆಯ ಇಮೇಲ್ ನಲ್ಲಿ ತಮ್ಮ ವ್ಯಾಪಾರ, ವಹಿವಾಟು ವೈಫಲ್ಯದ ಬಗ್ಗೆ ಬರೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ಕಿರುಕುಳ ಅನುಭವಿಸಿದ್ದರು ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಐಟಿ ಇಲಾಖೆಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಕಾಫಿ ಡೇ ಎಂಟರ್ ಪ್ರೈಸರ್ ಆಡಳಿತ ನಿರ್ದೇಶಕ ಸಿದ್ದಾರ್ಥ ನಾಪತ್ತೆಯಾಗಿದ್ದಾರೆ, ಕಂಪನಿಯು ಸಮರ್ಥ ಆಡಳಿತ ಮಂಡಳಿಯನ್ನು ಹೊಂದಿದ್ದು ವ್ಯವಹಾರ ಮುಂದುವರೆಯಲಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಕಂಪನಿಯ ಕಾರ್ಯದರ್ಶಿ ಸದಾನಂದ ಪೂಜಾರಿ ಮಾಹಿತಿ ನೀಡಿದ್ದಾರೆ.

ವಿಜಿ ಸಿದ್ದಾರ್ಥ ಕೊನೆಯ ಬಾರಿಗೆ ಕೆಫೆ ಕಾಫಿ ಡೇ ಮುಖ್ಯ ಹಣಕಾಸು ಅಧಿಕಾರಿ ಜಾವೇದ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು ಎಂಬ ಸುದ್ದಿಯಿದೆ. ವಿಜಿ ಸಿದ್ದಾರ್ಥ ಅವರು 3,000 ಕೋಟಿ ರು ಗೂ ಅಧಿಕ ಆದಾಯ ತೆರಿಗೆ ಬಾಕಿ ಪಾವತಿಸಬೇಕಿತ್ತು. 8,000 ಕೋಟಿ ರು ಅಧಿಕ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿಯಿದೆ.

Did IT department torture Coffee Day VG Siddhartha

2017ರ ಐಟಿ ದಾಳಿ : ಘೋಷಿತ ಆಸ್ತಿಗಿಂತ ಅಧಿಕ ಮೊತ್ತದ ಆಸ್ತಿ ಹೊಂದಿದ್ದರು ಎಂಬ ಕಾರಣಕ್ಕೆ ನಡೆದ ಐಟಿ ದಾಳಿಯಲ್ಲಿ 650 ಕೋಟಿ ರು ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂಬ ಸುದ್ದಿ ಬಂದಿತ್ತು. ಐಟಿ ಇಲಾಖೆ ಸಿದ್ದಾರ್ಥ ಕಂಪನಿಗೆ ದಂಡ ಕೂಡಾ ವಿಧಿಸಿತ್ತು. ಆದರೆ, ಐಟಿ ಇಲಾಖೆಯಿಂದ ಯಾವುದೆ ರೀತಿ ಕಿರುಕುಳವಾಗಿಲ್ಲ ಎಂದು ಉನ್ನತ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ನಂತರ ಮೈಂಡ್ ಟ್ರೀ ಮಾರಾಟ ಸಂಬಂಧ ಎಲ್ ಅಂಡ್ ಟಿ ಜೊತೆ ನಡೆಸಿದ್ದ ವ್ಯವಹಾರದಲ್ಲಿ ಸಿದ್ದಾರ್ಥ 20.3% ಷೇರುಗಳ ಮಾರಾಟ ಮಾಡಲು ಮುಂದಾದಾಗ ಐಟಿ ಇಲಾಖೆ ನಿರ್ಬಂಧ ವಿಧಿಸಿತ್ತು ಎನ್ನಲಾಗಿದೆ. ತಮ್ಮ ಪಾಲಿನ ಷೇರುಗಳನ್ನು ಬಿಡಿಸಿಕೊಳ್ಳಲು ಸಿದ್ದಾರ್ಥ ಹೆಣಗಾಡಿದ್ದರು. ನಂತರ ಷೇರುಗಳ ಬದಲಿಗೆ ಬೇರೆ ಆಸ್ತಿ ಜಪ್ತಿ ಮಾಡಲಾಗಿತ್ತು. ಇದಕ್ಕೆ ಅವರು ಕೂಡಾ ಒಪ್ಪಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+