• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುರಕ್ಷಿತವಲ್ಲ ನಿಮ್ಮ ವಿವರ: ಆನ್‌ಲೈನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಖಾಸಗಿ ಮಾಹಿತಿ ಸೋರಿಕೆ

|

ನವದೆಹಲಿ, ಮಾರ್ಚ್ 30: ಹಣ ಪಾವತಿ ಮಾಡುವ ಆಪ್ ಮೊಬಿಕ್‌ವಿಕ್ ಬಳಕೆದಾರರು ದೊಡ್ಡ ಅಪಾಯಕ್ಕೆ ಸಿಲುಕಿದ್ದಾರೆ. ಮೊಬಿಕ್‌ವಿಕ್‌ನ 3.5 ಮಿಲಿಯನ್ ಬಳಕೆದಾರರ ಮಾಹಿತಿಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆದಿದೆ ಎಂದು ಭದ್ರತಾ ಸಂಶೋಧಕರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬಿಕ್‌ವಿಕ್ ಆಪ್ ಅನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದೆ.

ಮೊಬಿಕ್‌ವಿಕ್‌ನ 3.5 ಮಿಲಿಯನ್ ಬಳಕೆದಾರರ ಕೆವೈಸಿ ವಿವರ, ವಿಳಾಸ, ಫೋನ್ ಸಂಖ್ಯೆ, ಆಧಾರ್ ಕಾರ್ಡ್ ದತ್ತಾಂಶ ಮತ್ತು ಇತರೆ ಸೂಕ್ಷ್ಮ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ತಯಾರಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಕೆಲವು ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳು ಡಾರ್ಕ್ ವೆಬ್ ಲಿಂಕ್‌ಗಳ ಮೂಲಕ ಅಂತರ್ಜಾಲದಲ್ಲಿ ಹರಿದಾಡುತ್ತಿರುವುದನ್ನು ಕಂಡುಹಿಡಿದಿದ್ದಾರೆ.

ಡಂಜೊ ವಿತರಣಾ ಸೇವೆಯ ಡೇಟಾ ಸೋರಿಕೆ: ಬಳಕೆದಾರರ ಮಾಹಿತಿ ಹ್ಯಾಕ್

'ವೈಯಕ್ತಿಕ ವಿವರಗಳು ಮತ್ತು ಕೆವೈಸಿ ಸಾಫ್ಟ್ ಕಾಪಿ (ಪ್ಯಾನ್, ಆಧಾರ್) ಸೇರಿದಂತೆ 11 ಕೋಟಿ ಭಾರತೀಯ ಕಾರ್ಡುದಾರರ ಕಾರ್ಡ್‌ಗಳ ವಿವರಗಳನ್ನು ಭಾರತದಲ್ಲಿನ ಕಂಪೆನಿಯೊಂದರ ಸರ್ವರ್‌ನಿಂದ ಸೋರಿಕೆ ಮಾಡಲಾಗಿದೆ. 6 ಟಿಬಿಯಷ್ಟು ಕೆವೈಸಿ ದತ್ತಾಂಶ ಮತ್ತು 350 ಜಿಬಿ ಡೇಟಾಬೇಸ್ ಸೋರಿಕೆಯಾಗಿದೆ' ಎಂದು ಭದ್ರತಾ ಸಂಶೋಧಕ ರಾಜಶೇಖರ್ ರಾಜಾಹರಿಯಾ ಫೆಬ್ರವರಿಯಲ್ಲಿ ತಿಳಿಸಿದ್ದರು.

ಅತಿ ದೊಡ್ಡ ಸೋರಿಕೆ

ಅತಿ ದೊಡ್ಡ ಸೋರಿಕೆ

ಎಲಿಯಟ್ ಅಲ್ಡರ್ಸನ್ ಎಂಬ ಮತ್ತೊಬ್ಬ ಭದ್ರತಾ ಸಂಶೋಧಕರು ಮೊಬಿಕ್‌ವಿಕ್‌ನ ಕಾನೂನು ಉಲ್ಲಂಘನೆ ನಡೆಯ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಇತಿಹಾಸದಲ್ಲಿಯೇ ಅತಿ ದೊಡ್ಡ ಕೆವೈಸಿ ವಿವರದ ಸೋರಿಕೆ ಎಂದು ಅವರು ಹೇಳಿದ್ದಾರೆ.

ಅನೇಕ ವಿವರಗಳ ಸೋರಿಕೆ

ಅನೇಕ ವಿವರಗಳ ಸೋರಿಕೆ

ಟೆಕ್‌ನಾಡು ವರದಿ ಪ್ರಕಾರ, ಬಳಕೆದಾರರ ಇ-ಮೇಲ್ ವಿಳಾಸ, ಫೋನ್ ಸಂಖ್ಯೆಗಳು, ಇನ್‌ಸ್ಟಾಲ್ ಮಾಡಿದ ಆಪ್‌ಗಳ ಪಾಸ್‌ವರ್ಡ್‌ಗಳು, ಫೋನ್ ತಯಾರಕರು, ಐಪಿ ವಿಳಾಸ, ಜಿಪಿಎಸ್ ಸ್ಥಳ ಮತ್ತು ಇತರೆ ವಿವರಗಳನ್ನು ಸೋರಿಕೆ ಮಾಡಲಾಗಿದೆ. ಮಾರಾಟಗಾರನು ಡಾರ್ಕ್ ವೆಬ್ ಪೋರ್ಟಲ್ ಒಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ಫೋನ್ ಸಂಖ್ಯೆ ಅಥವಾ ಇ-ಮೇಲ್ ಐಡಿ ಬಳಸಿ 8.2 ಟಿವಿಯಷ್ಟು ದತ್ತಾಂಶಗಳಲ್ಲಿ ನಿರ್ದಿಷ್ಟ ಫಲಿತಾಂಶಗಳನ್ನು ಹುಡುಕಬಹುದಾಗಿದೆ.

ಟ್ರೂಕಾಲರ್‌ನಿಂದ 4 ಕೋಟಿ ಭಾರತೀಯರ ಮಾಹಿತಿ ಸೋರಿಕೆ!

ಬಳಕೆದಾರರ ಆರೋಪ

ಬಳಕೆದಾರರ ಆರೋಪ

ರಾಜಶೇಖರ್ ಅವರು ಫೆಬ್ರವರಿಯಲ್ಲಿ ಮಾಡಿದ ಆರೋಪವನ್ನು ಕಂಪೆನಿ ತಳ್ಳಿಹಾಕಿತ್ತು. ಆದರೆ ಡಾರ್ಕ್ ವೆಬ್‌ನ ಒಂದು ಲಿಂಕ್ ಆನ್‌ಲೈನ್‌ನಲ್ಲಿ ಕಂಡುಬಂದಿದೆ. ಡಾರ್ಕ್ ವೆಬ್‌ನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಕಾಣಬಹುದಾಗಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ.

86,000 ಡಾಲರ್ ಮೊತ್ತಕ್ಕೆ ಮಾರಾಟ

86,000 ಡಾಲರ್ ಮೊತ್ತಕ್ಕೆ ಮಾರಾಟ

ಮೊಬಿಕ್‌ವಿಕ್ ಬಳಕೆದಾರರ ಡೇಟಾವು ಡಾರ್ಕ್‌ ವೆಬ್‌ನಲ್ಲಿ ಮಾರಾಟವಾಗುತ್ತಿದೆ ಎಂಬುದಕ್ಕೆ ಪುರಾವೆಯಾಗಿ ಅನೇಕ ಬಳಕೆದಾರರು ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ ಈ ದಾಖಲೆಗಳನ್ನು 1.5 ಬಿಟ್‌ಕಾಯಿನ್ ಅಥವಾ ಸುಮಾರು 86,000 ಡಾಲರ್ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ.

10 ಕೋಟಿ ಭಾರತೀಯರ ಕಾರ್ಡ್ ಮಾಹಿತಿ ಸೋರಿಕೆ

English summary
Security researcher said KYC data of 3.5 million users of Mobikwik app up for sale on dark web.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X