• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್ ಬಿಐನ ಈ ಮಾಹಿತಿ ನೋಡಿ, ನೋಟು ನಿಷೇಧ ಯಾವ ಪುರುಷಾರ್ಥಕ್ಕೆ?

|

ಮುಂಬೈ, ಫೆಬ್ರವರಿ 23: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಂಕಿ-ಅಂಶವೊಂದನ್ನು ಬಿಡುಗಡೆ ಮಾಡಿದ್ದು, ಇದೇ ಫೆಬ್ರವರಿ 16ನೇ ತಾರೀಕಿಗೆ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 17.78 ಟ್ರಿಲಿಯನ್ ರುಪಾಯಿ ಎಂದು ತಿಳಿಸಿದೆ. ಅಯ್ಯೋ ಇದೇನು ಮಹಾ ಸುದ್ದಿ ಅಂತೀರಾ?

ಈ ಮೊತ್ತ ಯಾಕೆ ಮುಖ್ಯ ಅಂದರೆ, ಅಪನಗದೀಕರಣಕ್ಕೂ ಮುಂಚೆ ಚಲಾವಣೆಯಲ್ಲಿದ್ದ ಒಟ್ಟು ನೋಟು ಪ್ರಮಾಣದ ಶೇ 98.94ರಷ್ಟು ಮತ್ತೆ ಚಲಾವಣೆಗೆ ಬಂದಂತಾಗಿದೆ. 2016ನೇ ಇಸವಿಯ ನವೆಂಬರ್ 8ರಂದು ಅಪನಗದೀಕರಣ ಘೋಷಣೆ ಮಾಡುವಾಗ ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ 17.97 ಟ್ರಿಲಿಯನ್ ರುಪಾಯಿ.

ಅಪನಗದೀಕರಣಕ್ಕೆ ನೀರು ಕುಡಿಸಿದ ನೀರವ್ ಮೋದಿ!

ಇಡೀ ದೇಶದಲ್ಲಿ ಅತ್ಯಂತ ಕಡಿಮೆ ಮೊತ್ತದ ನೋಟುಗಳು ಚಾಲ್ತಿಯಲ್ಲಿ ಇದ್ದದ್ದು ಅಂದರೆ 8.98 ಟ್ರಿಲಿಯನ್ ರುಪಾಯಿ. ಅದು ಜನವರಿ 6, 2017ರಲ್ಲಿ. ಅಪನಗದೀಕರಣ ಎಂದು ಮಾಡಿದಾಗ ದೊಡ್ಡ ಮೊತ್ತವಾದ ಐನೂರು, ಸಾವಿರ ರುಪಾಯಿ ನೋಟುಗಳ ಮಾನ್ಯತೆ ರದ್ದು ಮಾಡಲಾಯಿತು. ಆ ಮೂಲಕ ವ್ಯವಸ್ಥೆಯಲ್ಲಿ ಚಾಲ್ತಿಯಲ್ಲಿದ್ದ ಶೇ 86ರಷ್ಟು ಹಣವನ್ನು ವಾಪಸ್ ಪಡೆಯಲಾಯಿತು.

Currency circulation in India at 99 percent of pre-demonetisation level: RBI data

ಸಾರ್ವಜನಿಕರ ಬಳಿ ಈಗ ಮುಂಚಿನಷ್ಟು ನಗದು ಹರಿದಾಡುತ್ತಿಲ್ಲ. ಅಪನಗದೀಕರಣ ದೊಡ್ಡ ಯಶಸ್ಸು ಎಂದು ಹೇಳಿಕೊಂಡಿತ್ತು ಸರಕಾರ. ಕಳೆದ ವರ್ಷ ಜೂನ್ ನ ಹೊತ್ತಿಗೆ 98.96ರಷ್ಟು ನೋಟುಗಳು (ಮೌಲ್ಯದ ಆಧಾರದಲ್ಲಿ) ಹಿಂತಿರುಗಿದೆ ಎಂದು ಆರ್ ಬಿಐನಿಂದ ಬಿಡುಗಡೆ ಮಾಡಿದ್ದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿತ್ತು.

ಅಪನಗದೀಕರಣದ ನಂತರ ತೆರಿಗೆದಾರರ ಸಂಖ್ಯೆ ಹೆಚ್ಚಳ

ಇಷ್ಟು ಪ್ರಮಾಣದಲ್ಲಿ ಮತ್ತೆ ನೋಟುಗಳು ಚಲಾವಣೆಗೆ ಬಂದಿದೆ ಅಂದರೆ ಅಪನಗದೀಕರಣದ ಉದ್ದೇಶದಲ್ಲಿ ಡಿಜಿಟಲ್ ವ್ಯವಹಾರಗಳ ಉತ್ತೇಜನವೂ ಒಂದು ಎಂದಿದ್ದ ಕೇಂದ್ರ ಸರಕಾರ ಏನು ಹೇಳುತ್ತದೋ? ಹಾಗಿದ್ದರೆ ಅಪನಗದೀಕರಣ ಎಂಬುದು ದಿಟ್ಟ ನಿರ್ಧಾರವೋ ಅಥವಾ ಕೆಟ್ಟ ನಿರ್ಧಾರವೋ ಜನರೇ ನಿರ್ಧರಿಸಬೇಕು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Currency in circulation in India stood at Rs17.78 trillion as on 16 February, reaching 98.94% of the pre demonetisation level, according to the latest data released by the Reserve Bank of India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more