• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಎಸ್ಟಿ ತಗ್ಗಿದ್ದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೇನು ಲಾಭ?

|

ಬೆಂಗಳೂರಿನಲ್ಲಿ ವಸತಿ ಆಸ್ತಿ ಮಾರಾಟ ಕಳೆದ ಆರು ತಿಂಗಳಲ್ಲಿ ಸಾಕಷ್ಟು ಉತ್ತಮ ಪ್ರಗತಿ ಕಂಡಿರುವುದು ಗಮನಕ್ಕೆ ಬರುತ್ತಿದೆ. ವರದಿಯ ಪ್ರಕಾರ 2017ನೇ ವರ್ಷಕ್ಕೆ ಹೋಲಿಸಿದರೆ 2018ರ ವರ್ಷದ ಎರಡನೇ ಭಾಗದಲ್ಲಿ ನಗರದಲ್ಲಿ ವಸತಿ ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ಶೇ.35ರಷ್ಟು ಪ್ರಗತಿ ಕಂಡುಬಂದಿದೆ.

ನಿರ್ಮಾಣ ಹಂತದಲ್ಲಿರುವ ಆಸ್ತಿಗಳ ಮೇಲಿನ ಜಿಎಸ್‍ಟಿ ದರ ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇನ್ನು ಕೈಗೆಟುಕುವ ಮನೆಗಳ ಮೇಲಿನ ಜಿಎಸ್‍ಟಿ ಶೇ.8 ರಿಂದ ಶೇ.1ಕ್ಕೆ ಇಳಿಕೆಯಾಗಿದೆ.

ಕ್ರಡೈ (ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಬೆಂಗಳೂರು ವಿಭಾಗವು ತನ್ನ ಮೊದಲನೇ ಆವೃತ್ತಿಯ ವಾರ್ಷಿಕ ರಿಯಲ್ ಎಸ್ಟೇಟ್ ಎಕ್ಸ್ ಪೋ 2019ರ ಮಾ. 2-3 ರಂದು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಅಶೋಕಾ ಹೋಟೆಲ್‍ನಲ್ಲಿ ಹಾಗೂ 2019ರ ಮಾ.9-10ರಂದು ಮಾರತ್‍ಹಳ್ಳಿಯ ರ್ಯಾಡಿಸನ್ ಬ್ಲೂ (ಪಾರ್ಕ್ ಪ್ಲಾಜಾ)ದಲ್ಲಿ ನಡೆಯಲಿದೆ.

ಲೋಕಸಭೆ ಚುನಾವಣೆಗೂ ಮುನ್ನ ಅಪಾರ್ಟ್ಮೆಂಟ್ ಖರೀದಿದಾರರಿಗೆ ಶುಭ ಸುದ್ದಿ

ಎಕ್ಸ್ ಪೋದ ಮೊದಲ ಆವೃತ್ತಿ ಕುರಿತು ಮಾತನಾಡಿರುವ ಕ್ರಡೈ ಬೆಂಗಳೂರು ಅಧ್ಯಕ್ಷ ಮಿ. ಆಶಿಶ್ ಪುರವಂಕರ, ನಮ್ಮ ಎಕ್ಸ್‍ಪೋ ಕೇವಲ ಮನೆ ಕೊಳ್ಳಲು ಆಸಕ್ತಿ ಉಳ್ಳವರು, ಹುಡುಕುತ್ತಿರುವವರಿಗೆ ಮಾತ್ರ ಅನುಕೂಲ ಒದಗಿಸಿಕೊಡುತ್ತಿಲ್ಲ, ಇದರ ಜತೆಗೆ ಮಿಲಿಯನ್‍ಗಟ್ಟಲೆ ಕೊಳ್ಳುಗರಿಗೆ ಹೇರಳ ಅವಕಾಶ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಕಾರ್ಯ ಮಾಡಲಿದೆ ಎಂದರು.

ಕ್ರಡೈ ರಿಯಾಲ್ಟಿ ಎಕ್ಸ್ ಪೋ ಖರೀದಿದಾರರಿಗೆ ಒಂದು ವಿಶಿಷ್ಟ ಅನುಭವವನ್ನು ಒದಗಿಸಲು ಬಯಸುತ್ತಿದ್ದು, ಮಧ್ಯ ಶ್ರೇಣಿಯ ಗ್ರಾಹಕರು ಉಬರ್ ಐಶಾರಾಮಿ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು, ಇಲ್ಲಿ ಭಾಗವಹಿಸುತ್ತಿರುವ ಡೆವಲಪರ್ ಗಳು ಅನೇಕ ಸ್ಥಳಗಳನ್ನು ಪ್ರದರ್ಶಿಸುತ್ತಾರೆ. ಬೆಂಗಳೂರು ನಗರದಲ್ಲಿ ಲಭ್ಯವಿರುವ ಅತ್ಯುತ್ತಮ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಉತ್ತಮ ಪ್ರದರ್ಶನ ವ್ಯವಸ್ಥೆ ಇದಾಗಿದೆ. ಇಲ್ಲಿ ಗ್ರಾಹಕರಿಗೆ ಸಾಕಷ್ಟು ಆಯ್ಕೆಗಳು ಲಭಿಸಲಿದೆ' ಎಂದಿದ್ದಾರೆ.

 ಈ ಕ್ಷೇತ್ರಕ್ಕೆ ಉತ್ತಮ ನಿರಾಳತೆಯನ್ನು ಒದಗಿಸಿದೆ

ಈ ಕ್ಷೇತ್ರಕ್ಕೆ ಉತ್ತಮ ನಿರಾಳತೆಯನ್ನು ಒದಗಿಸಿದೆ

ಜಿಎಸ್‍ಟಿ ಬೆಲೆ ಕಡಿತ ಈ ಕ್ಷೇತ್ರಕ್ಕೆ ಉತ್ತಮ ನಿರಾಳತೆಯನ್ನು ಒದಗಿಸಿದೆ. ಬೆಲೆ ಹೆಚ್ಚಳ ಹಾಗೂ ತೆರಿಗೆ ಅಂಶಗಳಿಂದ ಬಾಧಿತರಾಗಿ ಇದುವರೆಗೂ ಆಸ್ತಿ ಖರೀದಿಸಲಾಗದ ಗ್ರಾಹಕರಿಗೆ ಇದೀಗ ಸೂಕ್ತ ನಿರ್ಧಾರ ಕೈಗೊಳ್ಳಲು ಹೊಸ ಜಿಎಸ್‍ಟಿ ದರಗಳು ಸಹಕಾರಿಯಾಗಲಿವೆ ಮತ್ತು ಖರೀದಿ ಕೈಗೆಟುಕುವ ಬೆಲೆಗೆ ದೊರೆಯುವಂತೆ ಮಾಡಿದೆ. ಕ್ರಡೈ ರಿಯಾಲ್ಟಿ ಎಕ್ಸ್ ಪೋ ಇಲ್ಲಿಗೆ ಭೇಟಿ ಕೊಡುವವರಿಗೆ, ತಮ್ಮ ಕನಸಿನ ಮನೆ ಕೊಳ್ಳಲು ಇಚ್ಛಿಸುವವರಿಗೆ, ರಿಯಲ್ ಎಸ್ಟೇಟ್ ಮಾಹಿತಿ ಬಯಸುವವರಿಗೆ ಹಾಗೂ ಆರ್ಥಿಕ ಸಲಹೆ ಪಡೆಯಲು ಇಚ್ಛಿಸುವವರಿಗೆ ಒಂದು ವಿಶಿಷ್ಟ ಅನುಭವವನ್ನು ಒದಗಿಸಲಿದೆ ಮತ್ತು ಒಂದೇ ಸೂರಿನಡಿ ಎಲ್ಲಾ ಸವಲತ್ತು ಒದಗಿಸಲಿದೆ.

ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ

 ಕ್ರಡೈ ಬೆಂಗಳೂರು ಕಾರ್ಯದರ್ಶಿ ಮಿ. ಆಶಿಶ್ ನರಹರಿ

ಕ್ರಡೈ ಬೆಂಗಳೂರು ಕಾರ್ಯದರ್ಶಿ ಮಿ. ಆಶಿಶ್ ನರಹರಿ

ಬೆಂಗಳೂರಿನ ವಸತಿ ಯೋಜನೆಗಳ ಮೇಲೆ ಹೂಡಿಕೆಯಿಂದ ಸಿಗುವ ಅನುಕೂಲಗಳ ಕುರಿತು ಮಾತನಾಡಿದ ಕ್ರಡೈ ಬೆಂಗಳೂರು ಕಾರ್ಯದರ್ಶಿ ಮಿ. ಆಶಿಶ್ ನರಹರಿ, 'ಇಂದು ಗೃಹ ಖರೀದಿದಾರರು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಕೊಳ್ಳಲು ಬಂದಾಗ ವಿಭಿನ್ನ ಬೇಡಿಕೆಯನ್ನು ಮುಂದಿಡುತ್ತಾರೆ. ಇದನ್ನು ಡೆವಲಪರ್ ಗಳು ಸಂಪೂರ್ಣಗೊಳಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ಮಾರಾಟವಾಗದ ಆಸ್ತಿಗಳ ಪ್ರಮಾಣ ಶೇ.15ರಷ್ಟಾಗಿದೆ. ಇದೀಗ ಅದಕ್ಕೆ ಮಾರಾಟ ಭಾಗ್ಯ ದೊರೆಯುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಕಂಪನಿಗಳು ಇನ್ನಷ್ಟು ಆಸ್ತಿ ಅಭಿವೃದ್ಧಿಪಡಿಸುವ ಕಾರ್ಯ ಮಾಡಲಿವೆ' ಎಂದರು.

 ಬಜೆಟ್‍ನಲ್ಲಿಯೇ ಅಧಿಕೃತವಾಗಿ ಘೋಷಿಸಲಾಗಿದೆ

ಬಜೆಟ್‍ನಲ್ಲಿಯೇ ಅಧಿಕೃತವಾಗಿ ಘೋಷಿಸಲಾಗಿದೆ

ಡೆವಲಪರ್ ಗಳ ಪಾರದರ್ಶಕತೆ, ಜಿಎಸ್‍ಟಿ, ಸರ್ಕಾರದಿಂದ ಲಭಿಸುವ ತೆರಿಗೆ ಲಾಭ, ಕೈಗೆಟುಕುವ ಬೆಲೆಗೆ ಮನೆಗಳು ಲಭಿಸುತ್ತಿರುವುದು ಇಂದು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇನ್ನಷ್ಟು ಜನ ಹೂಡಿಕೆ ಮಾಡಲು ಎರಡನೇ ಯೋಚನೆ ಮಾಡದೇ ಮುಂದೆ ಬರುವಂತೆ ಮಾಡಿದೆ. ರಿಯಲ್ ಎಸ್ಟೇಟ್ ಖರೀದಿ ಮೇಲೆ ಇನ್ನಷ್ಟು ತೆರಿಗೆ ವಿನಾಯಿತಿ, ಲಾಭ ಸಿಗುತ್ತಿರುವುದಾಗಿ 2019ರ ಫೆಬ್ರವರಿಯಲ್ಲಿ ಮಂಡನೆಯಾದ ಬಜೆಟ್‍ನಲ್ಲಿಯೇ ಅಧಿಕೃತವಾಗಿ ಘೋಷಿಸಲಾಗಿದೆ.

ಸಾಕಷ್ಟು ಸಂಖ್ಯೆಯ ಕೊಳ್ಳುಗರು ತಮ್ಮ ಎರಡನೇ ಮನೆಯ ಖರೀದಿಗಾಗಿ ಡೆವಲಪರ್ ಗಳನ್ನು ಸಂಪರ್ಕಿಸುತ್ತಿದ್ದಾರೆ. ಇಂತವರಿಗೆ ಕ್ರಡೈ ಹಮ್ಮಿಕೊಂಡಿರುವ ರಿಯಾಲ್ಟಿ ಎಕ್ಸ್ ಪೋ ಒಂದು ಉತ್ತಮ ಅವಕಾಶ ಒದಗಿಸುತ್ತಿದೆ. ವಿಭಿನ್ನ ಮಾದರಿಯ ಆಸ್ತಿಯನ್ನು ಕೊಳ್ಳುವ ವಿಶಾಲ ಅವಕಾಶ ಒದಗಿಸುತ್ತದೆ' ಎಂದಿದ್ದಾರೆ.

 ಕ್ರಡೈ ಎಕ್ಸ್ ಪೋ ಸಮಿತಿಯ ಅಧ್ಯಕ್ಷ ಮಿ. ಭೀಮಲ್ ಹೆಗ್ಡೆ

ಕ್ರಡೈ ಎಕ್ಸ್ ಪೋ ಸಮಿತಿಯ ಅಧ್ಯಕ್ಷ ಮಿ. ಭೀಮಲ್ ಹೆಗ್ಡೆ

ಕ್ರಡೈ ಎಕ್ಸ್ ಪೋದ ಪ್ರಾಮುಖ್ಯತೆ ಕುರಿತು ವಿವರಿಸಿದ ಕ್ರಡೈ ಎಕ್ಸ್ ಪೋ ಸಮಿತಿಯ ಅಧ್ಯಕ್ಷ ಮಿ. ಭೀಮಲ್ ಹೆಗ್ಡೆ, "ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿದೆ. ಅಲ್ಲದೇ ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿ ಕೂಡೆ ಉತ್ತಮವಾಗಿದೆ. ಮೆಟ್ರೊ ಸೇವೆ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುತ್ತಿದೆ. ಜತೆಗೆ ತನ್ನ ಪ್ರದೇಶವನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿಸಿವೆ. ದಿನದಿಂದ ದಿನಕ್ಕೆ ಕ್ಷೇತ್ರ ಪ್ರಗತಿ ಸಾಧಿಸುತ್ತಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯ. ದರ ಕೂಡ ಸ್ಥಿರವಾಗಿದೆ ಹಾಗೂ ಕೊಳ್ಳುಗರಿಗೆ ಸಾಕಷ್ಟು ಹೇರಳ ಅವಕಾಶಗಳು ನಗರದ ಎಲ್ಲಾ ಭಾಗದಲ್ಲಿಯೂ ಲಭ್ಯವಿದೆ' ಎಂದಿದ್ದಾರೆ.

 ಕ್ರಡೈ ಬೆಂಗಳೂರು ಕುರಿತು

ಕ್ರಡೈ ಬೆಂಗಳೂರು ಕುರಿತು

ಕಳೆದ ಮೂರು ದಶಕಗಳಿಂದ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಡೈ ಬೆಂಗಳೂರು ಸಂಸ್ಥೆ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಉತ್ಪನ್ನ ಅಭಿವೃದ್ಧಿದಾರರ ಸಂಘಟನೆಯಾಗಿದೆ. ಇದು 250 ಪ್ರಮುಖ ಡೆವಲಪರ್ ಗಳನ್ನು, ಬಿಲ್ಡರ್ ಗಳನ್ನು ಬೆಂಗಳೂರು ನಗರದಲ್ಲಿ ಹಾಗೂ 500ಕ್ಕೂ ಹೆಚ್ಚು ಸದಸ್ಯರನ್ನು ರಾಜ್ಯದಲ್ಲಿ ಹೊಂದಿದೆ. ಇವರೆಲ್ಲಾ ಖರೀದಿದಾರರು ಹಾಗೂ ಮನೆ ಮಾಲೀಕರ ಹಕ್ಕನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಡೈ ಸಂಸ್ಥೆ ತನ್ನ ಸದಸ್ಯರಿಗೆ ಒಂದು ದನಿಯನ್ನು ನೀಡಿದೆ ಮತ್ತು ಸರ್ಕಾರಿ ಏಜೆನ್ಸಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಅಧಿಕೃತ ಕಾರ್ಯನಿರ್ವಹಣೆದಾರರ ನಡುವೆ ಸಂವಹನ ಸಾಧಿಸಿ ಅವರಿಗೆ ಎದುರಾಗಿ ನೇರವಾಗಿ ಉದ್ಯಮದ ಮೇಲೆ ಸಮಸ್ಯೆ ಬರದಂತೆ ತಡೆಯುವ ಕಾರ್ಯ ಮಾಡುತ್ತಿದೆ.

English summary
CREDAI Bengaluru has announced Two Realty Expos in Bengaluru, Experts opinion on GST rate cut held on two consecutive weekends starting from March 2-3, 2019. Here are experts opinion on GST rate cut to realty market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X