ಆಗಸ್ಟ್ 23, 24 ಕ್ರೆಡಾಯ್ ರಿಯಾಲ್ಟಿ ಎಕ್ಸ್ ಪೋ
ಬೆಂಗಳೂರು, ಆ. 23: ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಗಳ ಸಂಸ್ಥೆಯಾದ ಕ್ರೆಡಾಯ್ ಬೆಂಗಳೂರು (ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ ಗಳ ಸಂಘಗಳ ಮಹಾ ಒಕ್ಕೂಟ) ಮತ್ತೊಂದು ರಿಯಲ್ ಎಸ್ಟೇಟ್ ಪ್ರದರ್ಶನ ಆಯೋಜಿಸುತ್ತಿದೆ.
ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿರುವ ಹೊಟೇಲ್ ಪಾರ್ಕ್ ಪ್ಲಾಜಾದಲ್ಲಿ ಆಗಸ್ಟ್ 23 ಮತ್ತು 24 ರಂದು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಈ ಎಕ್ಸ್ ಪೋ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ 46 ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು 6 ಹಣಕಾಸು ಸಂಸ್ಥೆಗಳು ಪಾಲ್ಗೊಂಡು ಗ್ರಾಹಕರಿಗೆ ರಿಯಲ್ ಎಸ್ಟೇಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿವೆ.

"ಕ್ರೆಡಾಯ್ ಹಲವು ಎಕ್ಸ್ ಪೋಗಳನ್ನು ಆಯೋಜಿಸುವ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಾ ಬಂದಿದೆ. ನಮ್ಮ ಈ ಪ್ರಯತ್ನಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಾ ಬಂದಿದೆ ಎಂದು ತಿಳಿಸಿದರು. ಕ್ರೆಡಾಯ್ ಬೆಂಗಳೂರು ಘಟಕದ ಅಧ್ಯಕ್ಷ ಸಿ.ಎನ್.ಗೋವಿಂದರಾಜು ಮಾತನಾಡಿ, "ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವ 6 ಹಣಕಾಸು ಸಂಸ್ಥೆಗಳು ಮನೆಗಳನ್ನು ಖರೀಸಲು ಬಯಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯ, ಮಾಸಿಕ ಕಂತುಗಳು, ಬಡ್ಡಿದರ ಸೇರಿದಂತೆ ಹಲವು ಅತ್ಯಮೂಲ್ಯ ಮಾಹಿತಿಗಳನ್ನು ಒದಗಿಸಲಿವೆ" ಎಂದು ಹೇಳಿದರು. (ಒನ್ಇಂಡಿಯಾ ಕನ್ನಡ)












Click it and Unblock the Notifications