Get Updates
Get notified of breaking news, exclusive insights, and must-see stories!

ಐಸಿಐಸಿಐ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ ಚೀನಾದ ಪೀಪಲ್ಸ್‌ ಬ್ಯಾಂಕ್

ಬೀಜಿಂಗ್, ಆಗಸ್ಟ್‌ 19: ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದ ಚೀನಾದ ಪೀಪಲ್ಸ್ ಬ್ಯಾಂಕ್ ಇದೀಗ ಐಸಿಐಸಿಐ ಬ್ಯಾಂಕ್ ನಲ್ಲಿ 15 ಕೋಟಿ ರೂಪಾಯಿ ಹಣ ಹೂಡಿದೆ.

ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಐಸಿಐಸಿಐ ನಲ್ಲಿ ಶೇ.0.006 ರಷ್ಟು ಪಾಲನ್ನು ಕ್ಯುಐಪಿ ಮೂಲಕ ಖರೀದಿಸಿದೆ. ಕಳೆದ ವಾರ ಕೊನೆಗೊಂಡ ಐಸಿಐಸಿಐ ಬ್ಯಾಂಕಿನ 15,000 ಕೋಟಿ ರೂ.ಗಳ ಬಂಡವಾಳ ಸಂಗ್ರಹ ಪ್ರಯತ್ನದಲ್ಲಿ ಚೀನಾದ ಬ್ಯಾಂಕ್ ಹೂಡಿಕೆದಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದೆ.

357 ಸಾಂಸ್ಥಿಕ ಹೂಡಿಕೆದಾರರ ಪೈಕಿ ಚೀನಾದ ಬ್ಯಾಂಕ್ ಕೂಡ ಒಂದಾಗಿದ್ದು, ದೇಶಿ ಮ್ಯೂಚುಯಲ್ ಫಂಡ್ಸ್, ಇನ್ಶ್ಯೂರೆನ್ಸ್ ಕಂಪನಿಗಳು, ಜಾಗತಿಕ ಸಂಸ್ಥೆಗಳು ಐಸಿಐಸಿಐ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿವೆ. ಈ ಪೈಕಿ ಸಿಂಗಾಪೂರದ ಸರ್ಕಾರ, ಮಾರ್ಗನ್ ಇನ್ವೆಸ್ಟ್ಮೆಂಟ್ & ಸೊಸೈಟ್ ಜನರಲ್ ಪ್ರಮುಖ ಹೂಡಿಕೆದಾರರಾಗಿವೆ ಎನ್ನುತ್ತಿದೆ ನಿಯಂತ್ರಕ ಸಂಸ್ಥೆಗಳು ನೀಡಿರುವ ಮಾಹಿತಿ ತಿಳಿಸಿದೆ.

Peoples Bank Of China Buys Into ICICI Bank

ಮಾರ್ಚ್ ತಿಂಗಳಲ್ಲಿ ಚೀನಾ ಬ್ಯಾಂಕ್ ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಶೇ.1 ರಷ್ಟು ಷೇರುಗಳನ್ನು ಖರೀದಿಸಿತ್ತು. ಈ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸುತ್ತಾ ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+