ಪೆಟ್ರೋಲ್, ಡೀಸೆಲ್ ದರ ಇಳಿಕೆ, ವಾಹನ ಸವಾರರಿಗೆ ಖುಷಿ!
ಬೆಂಗಳೂರು, ಜೂನ್ 10: ಕಳೆದ ವಾರ ಸತತ ಆರು ದಿನಗಳ ಕಾಲ ಇಳಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ, ಸೋಮವಾರ(ಜೂನ್ 10)ದಂದು ಕೂಡಾ ಇಳಿಮುಖವಾಗಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದು, ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಸೋಮವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ 11-13ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 11 ರಿಂದ 12ಪೈಸೆ ಯಷ್ಟು ಇಳಿಕೆಯಾಗಿದೆ. ಮೇ 20ರಿಂದ ಜೂನ್ ಮೊದಲ ವಾರದ ತನಕ ಸರಿ ಸುಮಾರು 70 ರಿಂದ 80 ಪೈಸೆಯಂತೆ ಇಂಧನ ದರ ಏರಿಕೆ ಮಾಡಲಾಗಿತ್ತು. ಆದರೆ, ನಂತರ ದರದಲ್ಲಿ ಇಳಿಕೆ ಕಂಡು ಬಂದಿತ್ತು.
ವಾಹನ ಸವಾರಿಗೆ ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ದರ 6ನೇ ದಿನವೂ ಕುಸಿತ
ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಸಂದರ್ಭದಲ್ಲಿ 19 ದಿನಗಳ ಕಾಲ ಇಂಧನ ಬೆಲೆಯನ್ನು ಏರಿಕೆ ಮಾಡಿರಲಿಲ್ಲ. ಮೇ 14, 2018ರ ಪೆಟ್ರೋಲ್ ಬೆಲೆ 3.8 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 3.38 ರು ಪ್ರತಿ ಲೀಟರ್ ನಷ್ಟು ಏರಿಕೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೇ ರೀತಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ, ಮೇ 20ರ ನಂತರ ಸತತ ಏರಿಕೆ ಮಾಡಲಾಯಿತು.

ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ
ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ರು ಪ್ರತಿ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು ಎಂದು ಐಒಸಿ ಹೇಳಿತ್ತು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ 3 ರು ಪ್ರತಿ ಲೀಟರ್ ಹಾಗೂ ಡೀಸೆಲ್ 5 ರು ಪ್ರತಿ ಲೀಟರ್ ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ಈ ನಷ್ಟವನ್ನು ಭರಿಸಲು ಈಗ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಬಹುದು. ಏಪ್ರಿಲ್, ಮೇ ತಿಂಗಳು(ಮೇ 19ರ ತನಕ)ಗಳಲ್ಲಿ ಸರ್ಕಾರಿ ಸ್ವಾಮ್ಯ ಮೂರು ತೈಲ ಕಂಪನಿಗಳಾದ ಐಒಸಿಎಲ್, ಎಚ್ ಪಿ ಹಾಗೂ ಬಿಪಿಸಿಎಲ್ ಗಳು ಇಂಧನ ಬೆಲೆ ಏರಿಕೆ ಮಾಡಿರಲಿಲ್ಲ.

ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ
ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ
* ಸೋಮವಾರ (ಜೂನ್ 10)ದಂದು ಪೆಟ್ರೋಲ್: 72.83ರು(0.11 ಪೈಸೆ ಇಳಿಕೆ)
* ಭಾನುವಾರದಂದು ಪೆಟ್ರೋಲ್ : 72.94 ರು (-0.17ಪೈಸೆ )
* ಶನಿವಾರದಂದು ಪೆಟ್ರೋಲ್ : 73.11ರು(-0.22 ಪೈಸೆ)
ಡೀಸೆಲ್ ಬೆಲೆ
* ಸೋಮವಾರ (ಜೂನ್ 10)ದಂದು ಡೀಸೆಲ್ : 66.58ರು (0.09ಪೈಸೆ ಇಳಿಕೆ)
* ಭಾನುವಾರದಂದು ಡೀಸೆಲ್: 66.67 ರು(-0.16 ಪೈಸೆ)
* ಶನಿವಾರದಂದು ಡೀಸೆಲ್: 66.83ರು (-0.26 ಪೈಸೆ)
****

ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ
ನವದೆಹಲಿ ನಗರದಲ್ಲಿ ಪೆಟ್ರೋಲ್ ಬೆಲೆ
* ಸೋಮವಾರ (ಜೂನ್ 10)ದಂದು ಪೆಟ್ರೋಲ್: 70.43ರು(0.13 ಪೈಸೆ ಇಳಿಕೆ)
* ಭಾನುವಾರದಂದು ಪೆಟ್ರೋಲ್ : 70.56 ರು (-0.16ಪೈಸೆ )
* ಶನಿವಾರದಂದು ಪೆಟ್ರೋಲ್ : 70.72ರು(-0.22 ಪೈಸೆ)
ಡೀಸೆಲ್ ಬೆಲೆ
* ಸೋಮವಾರ (ಜೂನ್ 10)ದಂದು ಡೀಸೆಲ್ : 64.39ರು (0.11 ಪೈಸೆ ಇಳಿಕೆ)
* ಭಾನುವಾರದಂದು ಡೀಸೆಲ್: 64.50 ರು(-0.15 ಪೈಸೆ)
* ಶನಿವಾರದಂದು ಡೀಸೆಲ್: 64.65ರು (-0.25 ಪೈಸೆ)
****

ಚೆನ್ನೈನಲ್ಲಿ ಇಂಧನದರ
ಚೆನ್ನೈನಲ್ಲಿ ಇಂಧನದರ
* ಸೋಮವಾರ (ಜೂನ್ 10)ದಂದು ಪೆಟ್ರೋಲ್: 73.17ರು(0.13 ಪೈಸೆ ಇಳಿಕೆ)
* ಭಾನುವಾರದಂದು ಪೆಟ್ರೋಲ್ : 73.30 ರು (-0.17ಪೈಸೆ )
* ಶನಿವಾರದಂದು ಪೆಟ್ರೋಲ್ : 73.47ರು(-0.22 ಪೈಸೆ)
ಡೀಸೆಲ್ ಬೆಲೆ
* ಸೋಮವಾರ (ಜೂನ್ 10)ದಂದು ಡೀಸೆಲ್ : 68.11ರು (-0.12ಪೈಸೆ ಇಳಿಕೆ)
* ಭಾನುವಾರದಂದು ಡೀಸೆಲ್: 68.23 ರು(-0.16 ಪೈಸೆ)
* ಶನಿವಾರದಂದು ಡೀಸೆಲ್: 66.39ರು (-0.27 ಪೈಸೆ)