Gold Rate Today Oct 18: ಚಿನ್ನ ಖರೀದಿದಾರರಿಗೆ ದೀಪಾವಳಿ ಗುಡ್ನ್ಯೂಸ್, ಎಷ್ಟಿದೆ ಇಂದಿನ ಚಿನ್ನ-ಬೆಳ್ಳಿ ದರ?
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೆರಡೇ ದಿನ ಬಾಕಿ ಇದೆ. ಹೀಗಾಗಿ ಚಿನ್ನ-ಬೆಳ್ಳಿ ಖರೀದಿಯೂ ಜೋರಾಗಿದೆ. ಹಬ್ಬಕ್ಕೆ ಚಿನ್ನ ಖರೀದಿಸಲು ಮಳಿಗೆಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಚಿನ್ನದ ಬೆಲೆ ನಿರಂತರವಾಗಿ ಏರುತ್ತಿರುವ ಕಾರಣ ಮುಂದೆ ದರ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಹಬ್ಬಕ್ಕೂ ಮುನ್ನವೇ ಚಿನ್ನ ಖರೀದಿಸಲು ಜನ ಮುಂದಾಗಿದ್ದಾರೆ. ನಿನ್ನೆವರೆಗೆ ದರ ಭಾರೀ ಏರಿಕೆ ಕಂಡಿತ್ತು. ಚಿನ್ನ ಹಾಗೂ ಬೆಳ್ಳಿಯ ಆಭರಣ ಖರೀದಿಸುವವರು ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,086, 22 ಕ್ಯಾರೆಟ್ ಚಿನ್ನಕ್ಕೆ ₹11,995 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,814ರಷ್ಟಿದೆ. ನಿನ್ನೆಗಿಂತ ಎಲ್ಲ ದರಗಳು ಭಾರೀ ಇಳಿಕೆ ಕಂಡಿವೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,086 ಆಗಿದ್ದು, ನಿನ್ನೆಗಿಂತ ₹191 ಇಳಿಕೆ ಕಂಡಿದೆ. 8 ಗ್ರಾಂ.ಚಿನ್ನದ ದರ ₹1,04,688, 10 ಗ್ರಾಂ.ಚಿನ್ನದ ದರ ₹1,30,860, 100 ಗ್ರಾಂ.ಚಿನ್ನದ ದರವು ₹13,08,600 ಆಗಿದ್ದು, ನಿನ್ನೆಗಿಂತಲೂ ₹19,100 ಕುಸಿದಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,995 ಆಗಿದ್ದು, ನಿನ್ನೆಗಿಂತ ₹175 ಇಳಿಕೆಯಾಗಿದೆ. 8 ಗ್ರಾಂ.ಚಿನ್ನದ ದರ ₹95,960, 10 ಗ್ರಾಂ.ಚಿನ್ನದ ದರ ₹1,19,950, 100 ಗ್ರಾಂ.ಚಿನ್ನದ ದರ ₹11,99,500 ಆಗಿದ್ದು, ನಿನ್ನೆಯ ದರಕ್ಕಿಂತ ₹17,500 ರೂಪಾಯಿ ಭಾರೀ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,814 ಆಗಿದ್ದು ನಿನ್ನೆಗಿಂತ ₹144, 8 ಗ್ರಾಂ.ಚಿನ್ನದ ದರ ₹78,512, 10 ದರ ಪ್ರತಿ ಗ್ರಾಂಗೆ ₹98,140, 100 ದರ ಪ್ರತಿ ಗ್ರಾಂಗೆ ₹9,81,400 ಆಗಿದ್ದು, ₹14,400ಯಷ್ಟು ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಅಕ್ಟೋಬರ್ 18: ₹13,086 ; ₹11,995
ಅಕ್ಟೋಬರ್ 17: ₹13,277 ; ₹12,170
ಅಕ್ಟೋಬರ್ 16: ₹12,944 ; ₹11,865
ಅಕ್ಟೋಬರ್ 15: ₹12,889 ; ₹11,815
ಅಕ್ಟೋಬರ್ 14: ₹12,868 ; ₹11,795
ಅಕ್ಟೋಬರ್ 13: ₹12,540 ; ₹11,495
ಅಕ್ಟೋಬರ್ 12: ₹12,508 ; ₹11,465
ಅಕ್ಟೋಬರ್ 11: ₹12,508 ; ₹11,465
ಅಕ್ಟೋಬರ್ 10: ₹12,371 ; ₹11,340
ಅಕ್ಟೋಬರ್ 9: ₹12,415 ; ₹11,380
ಅಕ್ಟೋಬರ್ 8: ₹12,393 ; ₹11,360
ಅಕ್ಟೋಬರ್ 7: ₹12,202 ; ₹11,185
ಅಕ್ಟೋಬರ್ 6: ₹12,077 ; ₹11,070
ಬೆಳ್ಳಿ-ಪ್ಲಾಟಿನಂ ದರವೂ ಭಾರೀ ಇಳಿಕೆ
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹180 ಮತ್ತು ಪ್ರತಿ ಕಿಲೋಗ್ರಾಂಗೆ ₹1,80,000 ಆಗಿದ್ದು ನಿನ್ನೆಗಿಂತ ₹13,900ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹4,555 ಮತ್ತು 10 ಗ್ರಾಂಗೆ ₹ 45,550 ಆಗಿದೆ. ನಿನ್ನೆಯ ದರಕ್ಕಿಂತ ಇಂದು ₹2,650 ಇಳಿಕೆ ಕಂಡಿದೆ. ದೀಪಾವಳಿ ಹಾಗೂ ವಾರಾಂತ್ಯ ಇರುವ ಹಿನ್ನೆಲೆ ದರಗಳು ಏರಿಳಿತ ಕಾಣುತ್ತಿವೆ. ಸೋಮವಾರದ ವೇಳೆಗೆ ದರ ಮತ್ತಷ್ಟು ಏರುವ ನಿರೀಕ್ಷೆಯೂ ಇದೆ.
-
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ












Click it and Unblock the Notifications