ಸಾಲಗಾರ ಮಲ್ಯರಿಗೆ ಪ್ರಶ್ನೆಗಳ ಬಾಣ ಎಸೆದ ಸಿಬಿಐ

Posted By:
Subscribe to Oneindia Kannada

ಬೆಂಗಳೂರು, ಡಿ. 11: ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಸಾಲ ಪಡೆದಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಮತ್ತೊಂದು ಸುತ್ತಿನ ಪ್ರಶ್ನಾವಳಿಗಳನ್ನು ಎದುರಿಸಿದ್ದಾರೆ. ಸದ್ಯಕ್ಕೆ ಐಡಿಬಿಐ ಬ್ಯಾಂಕಿನ ದೂರಿನ ಮೇರೆಗೆ ಮಲ್ಯರನ್ನು ಸಿಬಿಐ ತಂಡ ಪ್ರಶ್ನಿಸಿದೆ.

ಐಡಿಬಿಐ ಬ್ಯಾಂಕಿನಿಂದ ಪಡೆದ ಸುಮಾರು 900 ಕೋಟಿ ರು ಸಾಲದ ಅಸಲು, ಬಡ್ಡಿ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿ, ಬಲವಂತವಾಗಿ ಸುಸ್ಥಿದಾರನಾಗಿ ಕಾಣಿಸಿಕೊಂಡಿರುವುದನ್ನು ಪ್ರಶ್ನಿಸಿ ದೂರು ಸಲ್ಲಿಸಲಾಗಿತ್ತು.[ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ]

ಸಿಬಿಐನ ಬ್ಯಾಂಕಿಂಗ್ ಸೆಕ್ಯುರಿಟಿ ಹಾಗೂ ವಂಚನೆ ಘಟಕದಲ್ಲಿ ಮಲ್ಯ ಅವರ ವಿಚಾರಣೆ ನಡೆಸಲಾಗಿದೆ. ಸುಸ್ಥಿದಾರ ಎಂದು ಘೋಷಿಸಿಕೊಂಡು ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಲ್ಯ ಒಪ್ಪಿಕೊಂಡಿದ್ದಾರೆ.['ಫೆರಾ' ಉಲ್ಲಂಘನೆ ಮಲ್ಯ ವಿರುದ್ಧ 'ಇಡಿ' ತನಿಖೆಗೆ ಓಕೆ]

CBI questions Mallya in loan default case

ಐಡಿಬಿಐ ಬ್ಯಾಂಕಿನ ಕೆಲ ಅಧಿಕಾರಿಗಳು ಆಂತರಿಕ ಆಡಿಟ್ ರಿಪೋರ್ಟ್ ಬದಿಗೊತ್ತಿ, ಮಲ್ಯರಿಗೆ ಸಾಲ ನೀಡಲು ಯಾವುದೇ ಅವಕಾಶ ಇಲ್ಲದಿದ್ದರೂ ಸಾಲ ನೀಡುವ ಮೂಲಕ ತಪ್ಪೆಸಗಿರುವುದು ಕಂಡು ಬಂದಿದೆ. ಈಗ ಮಲ್ಯರಿಂದ ಸಾಲ ವಸೂಲಾತಿ ಮಾಡಿಕೊಳ್ಳಲು ಕಾದಿರುವ 17 ಇತರೆ ಬ್ಯಾಂಕುಗಳ ಜೊತೆ ಐಡಿಬಿಐ ಕೂಡಾ ಸೇರಿಕೊಂಡಿದೆ.

ಮಲ್ಯ ಅವರು ಸುಮಾರು 8,000 ಕೋಟಿ ರು ಗೂ ಅಧಿಕ ಸಾಲದ ಹೊರೆ ಹೊತ್ತಿದ್ದಾರೆ. ಮಲ್ಯಗೆ ನೀಡಲಾಗಿರುವ ಸಾಲದ ಮೊತ್ತದಲ್ಲಿ 1,100 ಕೋಟಿ ರು ಮಾತ್ರ ಬ್ಯಾಂಕ್ ಗಳು ರಿಕೆವರಿ ಮಾಡಿಕೊಂಡಿವೆ. ಸಾಲದ ಮೇಲಿನ ಚಕ್ರ ಬಡ್ಡಿ 15.5 ರಷ್ಟಿದ್ದು, ಮಲ್ಯ ಅವರು ಪದೇ ಪದೇ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The CBI quizzed liquor baron Vijay Mallya as part of the ongoing probe into alleged wilful default of Rs.900-crore loan in conspiracy with unknown officials of IDBI bank.
Please Wait while comments are loading...