ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್?
ಮುಂಬೈ, ಸೆಪ್ಟೆಂಬರ್ 12: ಮನೆಗೆ ಕೇಬಲ್ ಕನೆಕ್ಷನ್ ಅನ್ನು ಸಬ್ ಸ್ಕ್ರಿಪ್ಷನ್ (ಚಂದಾ) ಆಧಾರದಲ್ಲಿ ತೆಗೆದುಕೊಳ್ತೀರಲ್ಲ? ಇನ್ನು ಮುಂದೆ ಕಾರುಗಳಿಗೂ ಸಬ್ ಸ್ಕ್ರೈಬ್ ಆಗಬಹುದು. ಮಕಾಡೆ ಮಲಗಿರುವ ಆಟೋ ಸೆಕ್ಟರ್ ನ ಜಾಕ್ ಹಾಕಿ ಮೇಲಕ್ಕೆ ಎತ್ತಲು ಆಗದಿರುವಾಗ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯವರು ಈ ಯೋಜನೆ ಪರಿಚಯಿಸುತ್ತಿದ್ದಾರೆ.
ಗುರುವಾರದಿಂದ ಆರಂಭ ಆಗಿರುವಂತೆ ಎಂಟು ನಗರಗಳಲ್ಲಿ ಸಬ್ ಸ್ಕ್ರಿಪ್ಷನ್ ಅಧಾರಿತ ವಾಹನ ಮಾಲೀಕತ್ವ ಯೋಜನೆಯನ್ನು ಜಾರಿಗೆ ತಂದಿದೆ. ದೆಹಲಿ (ಎನ್ ಸಿಆರ್), ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಚಂಡೀಗಢ, ಅಹ್ಮದಾಬಾದ್ ನಲ್ಲಿ ಜಾರಿಗೆ ಬರಲಿದೆ.
ಚಂದಾ 19,700 ರುಪಾಯಿಯಿಂದ ಆರಂಭವಾಗುತ್ತದೆ. ಯೋಜನೆಯಲ್ಲಿ KUV100, XUV500, XUV300, ಸ್ಕಾರ್ಪಿಯೋ TUV300, Marazzo, Alturas G4 ಒಳಗೊಂಡಿವೆ. ಗ್ರಾಹಕರಿಗೆ ಜೇಬಿಗೆ ವಜ್ಜೆ ಅಗದ ರೀತಿಯಲ್ಲಿ, ಬೇಕಾದ ಕಾರು ಚಲಾಯಿಸಲು, ಕೈಗೆಟುಕುವ ದರದಲ್ಲಿ ಈ ಯೋಜನೆ ಪರಿಚಯಿಸುತ್ತಿದ್ದೇವೆ ಎಂದು ಕಂಪೆನಿಯ ಮಾರಾಟ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

ವಿವಿಧ ಬೇಸ್ ಮಾಡೆಲ್ ನ ಕಾರುಗಳ ತಿಂಗಳಿಗೆ ದರ ಹೀಗಿದೆ:
ಮಹೀಂದ್ರಾ KUV100 NXT - Rs 19,720
ಮಹೀಂದ್ರಾ TUV300 - Rs 25,870
ಮಹೀಂದ್ರಾ XUV300 - Rs 26,230
ಮಹೀಂದ್ರಾ Scorpio - Rs 31,230
ಮಹೀಂದ್ರಾ XUV500 - Rs 37,840
ಮಹೀಂದ್ರಾ Alturas G4 - Rs 87,390
ಕಿಲೋಮೀಟರ್ ಮಿತಿಯನ್ನು ತಿಂಗಳಿಗೆ 2083 ಕಿ. ಮೀ.ಗೆ ನಿಗದಿ ಮಾಡಲಾಗಿದೆ. ಅದರ ಮೇಲೆ ಪ್ರತಿ ಕಿಲೋಮೀಟರ್ ಗೆ 11 ರುಪಾಯಿ ಹೆಚ್ಚುವರಿ ದರ ವಿಧಿಸಲಾಗುತ್ತದೆ. ಆಸಕ್ತ ಗ್ರಾಹಕರು 20ರಿಂದ 25 ಸಾವಿರದ ತನಕ ರೀಫಂಡಬಲ್ ಡೆಪಾಸಿಟ್ ಪಾವತಿಸಬೇಕಾಗುತ್ತದೆ.
ಕಾರು ಖರೀದಿಗೆ ಜೀರೋ ಡೌನ್ ಪೇಮಂಟ್, ಯಾವುದೇ ರೋಡ್ ಟ್ಯಾಕ್ಸ್ ಇಲ್ಲ, ರೀ ಸೇಲ್ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ದರ ನಿಗದಿ ಮಾಡುತ್ತಾರಲ್ಲಾ ಅದರಲ್ಲಿ ಮಾಮೂಲಿ ನಿರ್ವಹಣೆ ವೆಚ್ಚ ಕೂಡ ಒಳಗೊಂಡಿರುತ್ತದೆ ಎಂದು ಕಂಪೆನಿ ತಿಳಿಸಿದೆ.
ಇನ್ನು ಸಬ್ ಸ್ಕ್ರೈಬರ್ಸ್ ಗೆ ನಿರ್ದಿಷ್ಟ ಸಮಯ ಎಂದು ನಿಗದಿ ಮಾಡಲಾಗುತ್ತದೆ. ಆ ನಂತರ ಯಾವುದೇ ಮಾಡೆಲ್ ಗೆ ಬದಲಾಗಬಹುದು ಎಂದು ಕಂಪೆನಿ ತಿಳಿಸಿದೆ.












Click it and Unblock the Notifications