Get Updates
Get notified of breaking news, exclusive insights, and must-see stories!

Q1 : ಕೆನರಾ ಬ್ಯಾಂಕಿನ ನಿವ್ವಳ ಲಾಭ ಶೇ 10ರಷ್ಟು ಏರಿಕೆ

ಬೆಂಗಳೂರು, ಜುಲೈ 19: ಕರ್ನಾಟಕದ ಮೂಲದ ಪ್ರಮುಖ ಬ್ಯಾಂಕ್-ಕೆನರಾ ಬ್ಯಾಂಕ್ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬುಧವಾರ(ಜುಲೈ 19)ದಂದು ಪ್ರಕಟಿಸಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆ ಮಟ್ಟದಂತೆ ಫಲಿತಾಂಶ ಹೊರ ಬರದಿದ್ದರೂ, ಶೇ 10ರಷ್ಟು ನಿವ್ವಳ ಲಾಭ ದಾಖಲಿಸಿದೆ.


ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಕೆನರಾ ಬ್ಯಾಂಕಿನ ನಿವ್ವಳ ಲಾಭ 252 ಕೋಟಿ ರು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 229 ಕೋಟಿ ರು ಬಂದಿತ್ತು.

Canara Bank Q1 net up 10% to Rs 252 cr

ದೇಶದ ಐದನೇ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಬೆಂಗಳೂರು ಮೂಲದ ಕೆನರಾ ಬ್ಯಾಂಕ್ ಈ ಅವಧಿಯಲ್ಲಿ ಸುಮಾರು 356 ಕೋಟಿ ರು ಗಳಿಸುವ ನಿರೀಕ್ಷೆಯಿದೆ ಎಂದು ಥಾಮಸ್ ರೈಟರ್ಸ್ ವರದಿ ಮಾಡಿತ್ತು. ಆದರೆ, ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ಕೆನರಾ ಬ್ಯಾಂಕ್ ವಿಫಲವಾಗಿದೆ.

ಒಟ್ಟಾರೆ ಸಾಲಕ್ಕೆ ಹೋಲಿಸಿದರೆ ಕೆಟ್ಟ ಸಾಲದ ಪ್ರಮಾಣ ಶೇ 9.63 ರಿಂದ ಶೇ 10.56ಕ್ಕೇರಿಕೆಯಾಗಿದೆತ್ರೈಮಾಸಿಕ ಅವಧಿಯ ಬಡ್ಡಿರಹಿತ ಆದಾಯ ಶೇ 33ರಷ್ಟು ಏರಿಕೆಯಾಗಿ 2,108.5 ಕೋಟಿ ರು ಬಂದಿದೆ. ವರ್ಷದಿಂದ ವರ್ಷಕ್ಕೆ ಅದಾಯ ಶೇ 17.6ರಷ್ಟು ಏರಿಕೆಯಾಗಿದ್ದು 2,307ಕೋಟಿ ರುನಿಂದ 2,713.2 ಕೋಟಿ ರುಗೇರಿದೆ.

ಬಿಎಸ್ಇನಲ್ಲಿ ಕೆನರಾ ಬ್ಯಾಂಕಿನ ಷೇರುಗಳು 371 ರು ನಂತೆ ಶೇ 0.58ರಷ್ಟು ಏರಿಕೆ ಕಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+