• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳು

|

ಮುಂಬೈ, ಜುಲೈ 31:ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಸಾವಿನ ಸುದ್ದಿಯಿಂದ ಷೇರುಪೇಟೆಯಲ್ಲಿ ಕಾಫಿ ಡೇ ಷೇರುಗಳಿಗೆ ಭಾರಿ ಹೊಡೆತ ಬಿದ್ದಿದೆ. ಕಾಫಿ ಡೇ ಸೇರಿದಂತೆ ವಿಜಿ ಸಿದ್ದಾರ್ಥ ಅವರ ಮಾಲೀಕತ್ವದ ಸಂಸ್ಥೆಗಳು ಬುಧವಾರದಂದು ಬಂದ್ ಆಗಿವೆ. ಈ ನಡುವೆ ಷೇರುಪೇಟೆಯಲ್ಲಿ ಕಾಫಿ ಡೇ ಸಂಸ್ಥೆ ಷೇರುಗಳು ನೆಲಕಚ್ಚಿವೆ.

ಕಾಫಿ ಡೇ ಮಾಲೀಕ ಸಿದ್ದಾರ್ಥ ಸಾವಿನ ನಂತರ ಚಿಕ್ಕಮಗಳೂರಿನ ಕಾಫಿ ಡೇ ಸಂಸ್ಥೆ, ಹಾಸನ, ಮಡಿಕೇರಿಯಲ್ಲಿನ ಕಾರ್ಮಿಕರಿಗೂ ಮೂರು ದಿನಗಳ ರಜೆ ಘೋಷಿಸಲಾಗಿದೆ. ಕಾಫಿ ಕೆಲಸ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥ ಮಲ್ಲೇಶ್ ಹೇಳಿದ್ದಾರೆ.

LIVE: ಸಿದ್ಧಾರ್ಥ ಸಾವು: ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆಗೆ ನಿರ್ಧಾರLIVE: ಸಿದ್ಧಾರ್ಥ ಸಾವು: ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆಗೆ ನಿರ್ಧಾರ

ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ಸೇರಾಯ್ ರೆಸಾರ್ಟ್, ಅಂಬರ್ ವ್ಯಾಲಿ ಶಾಲೆ, ವಿ.ಟಿ.ಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಸ್ಟೇಟ್ ಕೆಲಸಕ್ಕೆ ಅಗಮಿಸಿದ ಸಾವಿರಾರು ಕಾರ್ಮಿಕರನ್ನು ವಾಪಸ್ ಕಳುಹಿಸಲಾಗಿದೆ.

ಷೇರುಪೇಟೆಯಲ್ಲಿ ಕಾಫಿ ಡೇ : ಬುಧವಾರದಂದು ಕೂಡಾ ದಿನದ ಆರಂಭದ ವಹಿವಾಟಿನಲ್ಲಿ ಶೇ20ರಷ್ಟು ಕುಸಿತ ಕಂಡ ಕಾಫಿ ಡೇ ಷೇರುಗಳು 52 ವಾರಗಳಲ್ಲೇ ಅತ್ಯಧಿಕ ಕಳಪೆ ಸಂಖ್ಯೆಯನ್ನು ಕಂಡಿದೆ. ಸುಮಾರು 2,494,013 ಷೇರು ಮಾರಾಟಕ್ಕಿದ್ದರೂ ಖರೀದಿದಾರಲಿಲ್ಲ.

ಮಾಲೀಕ ವಿಜಿ ಸಿದ್ದಾರ್ಥ ಕಣ್ಮರೆ, ಕಾಫಿ ಡೇ ಷೇರುಗಳು ಕುಸಿತ ಮಾಲೀಕ ವಿಜಿ ಸಿದ್ದಾರ್ಥ ಕಣ್ಮರೆ, ಕಾಫಿ ಡೇ ಷೇರುಗಳು ಕುಸಿತ

ಬುಧವಾರದಂದು ಬಿಎಸ್ಇಯಲ್ಲಿ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಷೇರುಗಳು ಬೆಳಗ್ಗೆ 10.24ರ ಸುಮಾರಿಗೆ 123.25ರು ನಂತೆ ವಹಿವಾಟು ಆರಂಭಿಸಿದ್ದು, 19.99% ಕುಸಿತ ಕಂಡು 38.50ರು ಕಳೆದುಕೊಂಡಿದೆ. ಇದೇ ವೇಳೆ ಎನ್ ಎಸ್ ಇಯಲ್ಲಿ 20% ಕುಸಿತ ಕಂಡು 30.65ರು ನಷ್ಟು ನಷ್ಟವಾಗಿದ್ದು, 122.75ರಂತೆ ವಹಿವಾಟು ನಡೆಸಿದೆ.

ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ? ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ?

ಮಂಗಳವಾರಂದು ಬಿಎಸ್ಇಯಲ್ಲಿ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಷೇರುಗಳು 153.4ರು ನಂತೆ ವಹಿವಾಟು ಆರಂಭಿಸಿದ್ದು, 19.90% ಕುಸಿತ ಕಂಡು 38.50ರು ಕಳೆದುಕೊಂಡಿದೆ. ಇದೇ ವೇಳೆ ಎನ್ ಎಸ್ ಇಯಲ್ಲಿ 20% ಕುಸಿತ ಕಂಡು 38.35ರು ನಷ್ಟು ನಷ್ಟವಾಗಿದೆ.

ವಿ. ಜಿ ಸಿದ್ದಾರ್ಥ ಅನುಭವಿಸಿದ 'ಕಿರುಕುಳ' ಬಗ್ಗೆ ಮಲ್ಯ ಕಳವಳ ವಿ. ಜಿ ಸಿದ್ದಾರ್ಥ ಅನುಭವಿಸಿದ 'ಕಿರುಕುಳ' ಬಗ್ಗೆ ಮಲ್ಯ ಕಳವಳ

ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ. ಭಾರತದಲ್ಲಿ ವಿಸ್ತೃತವಾದ ಕಾಫಿ ಮಳಿಗೆಯನ್ನು ವಿಸ್ತರಿಸುವಲ್ಲಿ ಸಂಸ್ಥೆಯ ಸ್ಥಾಪಕ ವಿಜಿ ಸಿದ್ದಾರ್ಥ ಅವರ ಪಾತ್ರ ದೊಡ್ಡದು. 1996ರಿಂದ ಇಲ್ಲಿ ತನಕ ಹಲವು ಏರಿಳಿತ ಕಂಡಿರುವ ಸ್ವದೇಶಿ ಬ್ರ್ಯಾಂಡ್ ಕೆಫೆ ಕಾಫಿ ಡೇ ಈಗ ಅಮೆರಿಕದ ಕೋಕ ಕೋಲಾ ಕಂಪನಿ ಪಾಲಾಗುವ ಮಾತುಕತೆ ನಡೆದಿತ್ತು. ಕಾಫಿ ಡೇ ಸಂಸ್ಥೆ ಆದಾಯ 1,777 ಕೋಟಿ ರು ಹಾಗೂ 2020ರ ವೇಳೆಗೆ 2250 ಕೋಟಿ ರು ಗಳಿಕೆ ಗುರಿ ಹೊಂದಿದ್ದರು. ಇತ್ತೀಚೆಗೆ ಸಿದ್ದಾರ್ಥ ಅವರು ಮೈಂಡ್ ಟ್ರೀಯಲ್ಲಿದ್ದ ತಮ್ಮ 20.3% ಷೇರುಗಳನ್ನು ಎಲ್ ಅಂಡ್ ಟಿ ಕಂಪನಿಗೆ ಮಾರಿದ್ದರು.

English summary
Coffee Day Shares plunged to hit 52 week lown in the early trade today(July 31) after the death news of Coffee Day Enterprises owner VG Siddhartha's hit market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X