• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋ ವೇಗಕ್ಕೆ ಬಿಎಸ್ಸೆನ್ನೆಲ್ ಸ್ಪರ್ಧೆ ಒಡ್ಡಬಹುದೇ?

By Mahesh
|

ಬೆಂಗಳೂರು, ಜುಲೈ 09: ರಿಲಯನ್ಸ್ ಸಂಸ್ಥೆಯ ಹೊಸಜಿಯೋ ಗಿಗಾ ಫೈಬರ್ ಇಂಟರ್ನೆಟ್ ಯೋಜನೆಗೆ ಸ್ಪರ್ಧೆಯೊಡ್ಡಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡಾ ಸಿದ್ಧತೆ ನಡೆಸಿದೆ. ಬಿಎಸ್ಎನ್ಎಲ್ 491ರು ಗಳ ಹೊಸ ಪ್ಲಾನ್ ಶುರು ಮಾಡಿದೆ.

491 ರೂಪಾಯಿ ಹೊಸ ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ದಿನ 20 ಎಂಬಿಪಿಎಸ್ ವೇಗದಲ್ಲಿ 20 ಜಿಬಿ ಡೇಟಾ 30 ದಿನಗಳ ಕಾಲ ಸಿಗಲಿದೆ. ಜುಲೈ 15 ರ ನಂತರ ಆರಂಭಗೊಳ್ಳಲಿರುವ ಜಿಯೋ ಗಿಗಾ ಫೈಬರ್ ಯೋಜನೆಗೆ ತಕ್ಕಂತೆ ಬಿಎಸ್ಎನ್ಎಲ್ ತನ್ನ ಯೋಜನೆಯನ್ನು ಬದಲಾಯಿಸಿದೆ. ಜಿಯೋಗಿಂತ ಮುಂಚಿತವಾಗಿ ಯೋಜನೆಯನ್ನು ಪರಿಚಯಿಸಿ,ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದೆ.

ಬಿ ಎಸ್ ಎನ್ ಎಲ್ 777 ರೂಪಾಯಿ ಹಾಗೂ 1277 ರೂಪಾಯಿಯ ಫೈಬರ್ ಟು ದಿ ಹೋಮ್ ಪ್ಲಾನ್ ಶುರು ಮಾಡಿದೆ. 777 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 50 ಎಂಬಿಪಿಎಸ್ ವೇಗದಲ್ಲಿ 500 ಜಿಬಿ ಡೇಟಾ ಸಿಗಲಿದೆ. 1277 ರೂಪಾಯಿ ಪ್ಲಾನ್ ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ 750 ಜಿಬಿ ಡೇಟಾ ಸಿಗಲಿದೆ.

Fibre-to-the-Home(FTTH) ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲು ಜಿಯೋ ಗಿಗಾ ಫೈಬರ್ , ಜಿಯೋ ಗಿಗಾ ಟಿವಿ ಪರಿಚಯಿಸಲಾಗುತ್ತಿದ್ದು, 1ಜಿಬಿಪಿಎಸ್ ಸ್ಪೀಡ್ ನಲ್ಲಿ ಮೊದಲ ಹಂತದಲ್ಲಿ 1,100 ನಗರಗಳಲ್ಲಿ ಲಭ್ಯವಾಗಲಿದೆ.

ಕರ್ನಾಟಕ ಟೆಲಿಕಾಂ ವೃತ್ತದ ವ್ಯಾಪ್ತಿಯಲ್ಲಿ 347 ನಗರ, 21,992 ಗ್ರಾಮಗಳಿವೆ. ಕರ್ನಾಟಕದಲ್ಲಿ 10.5 ಲಕ್ಷ ಲ್ಯಾಂಡ್‌ಲೈನ್‌, 3.2 ಲಕ್ಷ ಬ್ರಾಡ್‌ಬ್ಯಾಂಡ್‌, 72 ಲಕ್ಷ ಮೊಬೈಲ್‌ ಸಂಪರ್ಕಗಳಿವೆ. ದೇಶದಲ್ಲೇ ಅತಿ ಹೆಚ್ಚು 42,358 ಹೈ ಸ್ಪೀಡ್‌ ಬ್ರಾಡ್‌ಬ್ಯಾಂಡ್‌ನಡಿ ಫೈಬರ್‌ ಟು ದ ಹೋಮ್‌ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ. ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತ ಎಫ್‌ಬಿ ಪ್ಲಾಟಿನಂ, ಗೋಲ್ಡ್‌ ಬಿಸಿನೆಸ್‌ ವಿಭಾಗದಲ್ಲಿ 35 ಕೋಟಿ ರೂ.ಗಳ ಲಾಭ ದಾಖಲಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Sanchar Nigam Limited (BSNL) announced a broadband plan for Rs 491 through Twitter. BSNL said that this plan is already live for the users and it comes with 20GB data per day for 30 days at 20Mbps speed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more