ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಎನ್ಎಲ್ ನಿಂದ 40 ಸಾವಿರ ವೈಫೈ ಹಾಟ್ ಸ್ಪಾಟ್

By Mahesh
|
Google Oneindia Kannada News

ಇಂದೋರ್, ಜ. 05: ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ ಎನ್ ಎಲ್) ಭಾರತದಲ್ಲಿ 40 ಸಾವಿರ ವೈಫೈ ಹಾಟ್ ಸ್ಪಾಟ್ ಜಾಲ ನಿರ್ಮಿಸುವುದಾಗಿ ಘೋಷಿಸಿದೆ.

ಇನ್ನೂ 4ಜಿ ಸೇವೆ ಆರಂಭಿಸದ ಬಿಎಸ್ ಎನ್ ಎಲ್ ಮಾಡಿರುವ ಈ ಬೃಹತ್ ಘೋಷಣೆ ಬಗ್ಗೆ ಅನೇಕರಿಗೆ ಕುತೂಹಲ ಉಂಟು ಮಾಡಿದೆ.

ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿರುವ ಬಿಎಸ್ಎನ್ಎಲ್ ಈಗ ಇರುವ ತರಂಗಗುಚ್ಛಗಳ ನಡುವೆ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸುವುದಾಗಿ ಹೇಳಿದೆ. ದೇಶದೆಲ್ಲೆಡೆ 40 ಸಾವಿರಕ್ಕೂ ಅಧಿಕ ವೈಫೈ ಹಾಟ್ ಸ್ಪಾಟ್ ನಿರ್ಮಿಸುವುದು ನಮ್ಮ ಗುರಿ ಎಂದು ಬಿಎಸ್ಎನ್ ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.

BSNL to set up 40k Wi-Fi Hotspots in the country: CMD

ಈಗಾಗಲೇ 500ಕ್ಕೂ ಅಧಿಕ ವೈಫೈ ಹಾಟ್ ಸ್ಪಾಟ್ ಗಳು ಪ್ರಾಯೋಗಿಕ ಹಂತದಲ್ಲಿ ಸ್ಥಾಪನೆಯಾಗಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲೇ 2,500 ವೈಫೈ ಹಾಟ್ ಸ್ಪಾಟ್ ವಿಸ್ತರಣೆಯಾಗಲಿದೆ. ಇದರ ಜೊತೆಗೆ 5,500 ಕೋಟಿ ರು ವೆಚ್ಚದಲ್ಲಿ 25,000 ಮೊಬೈಲ್ ಟವರ್ ಗಳನ್ನು ನಿರ್ಮಿಸಲಾಗುವುದು ಎಂದರು.

ಕಾಲ್ ಡ್ರಾಪ್ ಬಗ್ಗೆ ಮಾತನಾಡಿ,ಮೊಬೈಲ್ ಟವರ್ ಬಳಿ ನಿಂತರೆ ಅಧಿಕ ರೇಡಿಯೇಷನ್ ಆಗುತ್ತದೆ. ಬ್ಯಾಟರಿ ಲೋ ಇದ್ದಾಗ ಹೆಚ್ಚು ಮಾತನಾಡಬಾರದು ಮುಂತಾದ ಅನೇಕ ಕಲ್ಪಿತ ಸುದ್ದಿಗಳಿಂದ ಕಾಲ್ ಡ್ರಾಪ್ ಗಳು ಅಧಿಕವಾಗಿವೆ. ಗ್ರಾಹಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷತೆ ನಿಯಮ ಪಾಲಿಸದ ಟವರ್ ಗಳನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ಬಿಎಸ್ ಎನ್ ಎಲ್ ಸಂಸ್ಥೆ 672 ಕೋಟಿ ರು ನಿರ್ವಹಣಾ ಲಾಭ ಪಡೆದುಕೊಂಡಿದೆ. ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 1,000 ಕೋಟಿ ರು ಲಾಭದ ನಿರೀಕ್ಷೆಯಿದೆ. ಇದರ ಜೊತೆಗೆ 2019ರ ವೇಳೆಗೆ ನಿವ್ವಳ ಲಾಭ ಹೆಚ್ಚಳದ ಗುರಿ ಹೊಂದಲಾಗಿದೆ ಎಂದರು. (ಒನ್ ಇಂಡಿಯಾ ಸುದ್ದಿ)

English summary
Public sector telecom major BSNL said it is working on setting up 40,000 Wi-Fi Hotspots in the country to counter its inadequacy in providing 4G data services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X