• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್ಎನ್ಎಲ್ ನಿಂದ 299ರು ಗಳ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್

|

ಬೆಂಗಳೂರು, ಅಕ್ಟೋಬರ್ 10: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ. ಇದರಲ್ಲಿ ಹೆಚ್ಚುವರಿ ಇಂಟರ್ನೆಟ್ ಡೇಟಾ ಸಿಗಲಿದೆ.

ಜಿಯೋ, ಏರ್ಟೆಲ್, ವೊಡಾಫೋನ್ ನ ಯೋಜನೆಗಳಿಗೆ ಪೈಪೋಟಿ ನೀದಲು ಬಿಎಸ್ಎನ್ಎಲ್ ಹೊಸ ಯೋಜನೆ ಆರಂಭಿಸಿದೆ. ಬಿಎಸ್ಎನ್ಎಲ್ ನ 299 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ಹೊಸ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಜೊತೆ ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯವನ್ನೂ ನೀಡಲಾಗುತ್ತಿದೆ.

BSNL 18ನೇ ವಾರ್ಷಿಕೋತ್ಸವ, 18 ರುಗಳಿಗೆ ರೀಚಾರ್ಜ್!

ಆದರೆಮ್ ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಹಾಗೂ ನ್ಯಾಷನಲ್ ಕರೆಗಳು ಬಿಎಸ್ಎನ್ಎಲ್ ಸರ್ಕಲ್ ನಲ್ಲಿ ಮಾತ್ರ ಸಿಗಲಿದೆ. ಮುಂಬೈ, ದೆಹಲಿ ಮುಂತಾದೆಡೆ ಈ ಉಚಿತ ವಾಯ್ಸ್ ಕಾಲ್ ಸೌಲಭ್ಯ ಲಭ್ಯವಿರುವುದಿಲ್ಲ.

ಪ್ರತಿ ದಿನ ಸ್ಥಳೀಯ ಹಾಗೂ ರಾಷ್ಟ್ರೀಯ 100 ಎಸ್ಎಂಎಸ್ ಸಿಗಲಿದೆ. ಈ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ 31 ಜಿಬಿ 3ಜಿ ಡೇಟಾ ನೀಡುತ್ತಿದೆ. ಇದಕ್ಕೆ ದಿನದ ಡೇಟಾ ಮಿತಿ ಇರುವುದಿಲ್ಲ. ಡೇಟಾ ಮಿತಿ ಮುಗಿದ ಮೇಲೆ ವೇಗ 80 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಪಡೆಯಬಹುದು.

ಅನಿಯಮಿತ ಕರೆಗಾಗಿ ಬಿಎಸ್ಎನ್ಎಲ್ ನಿಂದ 'ಅನಂತ್' ಯೋಜನೆ

ರಿಲಯನ್ಸ್ ಜಿಯೋದ 199 ರೂಪಾಯಿ ಯೋಜನೆಯಲ್ಲಿ ಮೇಲ್ಕಂಡ ಯೋಜನೆಯ ಎಲ್ಲಾ ಸೌಲಭ್ಯಗಳ ಜತೆಗೆ 4ಜಿ 25 ಜಿಬಿ ಡೇಟಾ ಸಿಗಲಿದೆ.

ಬಿಎಸ್ಎನ್ಎಲ್ 155 ರು ಪ್ರೀಪೇಯ್ಡ್ ಪ್ಯಾಕ್ ಎಲ್ಲರಿಗೂ ಲಭ್ಯ

ವೋಡಾಫೋನ್ 299 ರೂಪಾಯಿ ಯೋಜನೆಯಲ್ಲಿ 20 ಜಿಬಿ ಡೇಟಾ ನೀಡಲಿದೆ.

English summary
BSNL Rs 299 postpaid plan offers unlimited voice calls, 31GB high speed data through the validity without any daily limits and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X