ಜಿಯೋಗೆ ಸೆಡ್ಡು, ಕೇವಲ 27ಕ್ಕೆ ಉಚಿತ ಕರೆ ನೀಡುತ್ತಿದೆ ಈ ಕಂಪನಿ

ಬೆಂಗಳೂರು, ಆಗಸ್ಟ್ 05: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭರ್ಜರಿ ಕೊಡುಗೆಯೊಂದನ್ನು ನೀಡುತ್ತಿದೆ.

ಕೇವಲ 27 ರೂಪಾಯಿಗಳಿಗೆ ಉಚಿತ ಕರೆ, ಇಂಟರ್ನೆಟ್ ಡೇಟಾ ನೀಡುವ ಮೂಲಕ ಜಿಯೋ, ಏರ್ಟೆಲ್, ಐಡಿಯಾ ಮತ್ತು ವೋಡಾಫೋನ್ ವಿರುದ್ಧ ದರ ಸಮರದಲ್ಲಿ ಗೆಲುವು ಸಾಧಿಸಲು ಹೊರಟಿದೆ. ಆಗಸ್ಟ್ 6ರಿಂದ ಈ ಯೋಜನೆ ಆರಂಭವಾಗುವ ವರದಿಗಳು ಬಂದಿವೆ.

BSNL Rs. 27 Recharge Offers Unlimited Voice Calls, 1GB Data for 1 Week to Take on Jio

ಬಿಎಸ್ ಎನ್ ಎಲ್ ನ ಈ ಯೋಜನೆಯು ದೇಶದೆಲ್ಲೆಡೆಯಿರುವ 5 ಕೋಟಿ ಗ್ರಾಹಕರಿಗೆ ಏಕಕಾಲಕ್ಕೆ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಅನಿಯಮಿತ ಉಚಿತ ವಾಯ್ಸ್ ಕಾಲಿಂಗ್ ಮತ್ತು 300 ಎಂಎಂಎಸ್ ಉಚಿತವಾಗಿ ಸಿಗಲಿದೆ. ಇದಲ್ಲದೆ, ಜೊತೆಗೆ 1ಜಿಬಿ ಡೇಟಾ ಕೂಡ ಲಭ್ಯ.

ಇದು ಹೊಸ ಯೋಜನೆಯಂತೆ ಬಳಸಬಹುದಾದರೂ ಜತೆಗೆ ಹಾಲಿ ಯೋಜನೆ ಜತೆಗೆ ವೋಚರ್ ಆಗಿ ಕೂಡಾ ಬಳಸಬಹುದು. 7 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯ ವಾಯ್ಸ್ ಕಾಲಿಂಗ್ ಸೌಲಭ್ಯವು ದೆಹಲಿ ಹಾಗೂ ಮುಂಬೈ ಗ್ರಾಹಕರಿಗೆ ಮಾತ್ರ ಅಲಭ್ಯ.

ಏರ್ಟೆಲ್ ನ 47 ರೂಪಾಯಿ ಪ್ಲಾನ್ ನಲ್ಲಿ 125 ನಿಮಿಷದ ವಾಯ್ಸ್ ಕಾಲಿಂಗ್ ಹಾಗೂ 50 ಎಂಬಿ ಡೇಟಾ ಜೊತೆ 50 ಎಸ್ಎಂಎಸ್ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿ ಈ ಯೋಜನೆಗಿದೆ. ಇನ್ನು ವೋಡಾಫೋನ್ ಯೋಜನೆಯಲ್ಲಿ 125 ನಿಮಿಷದ ವಾಯ್ಸ್ ಕಾಲಿಂಗ್, 50 ಎಂಬಿ ಡೇಟಾ ಹಾಗೂ 50 ಎಸ್ಎಂಎಸ್ ಸಿಗುತ್ತಿದೆ.

ಅತಿ ಕಡಿಮೆ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ವಿಭಾಗದಲ್ಲಿ 47ರು, 71ರು ಗಳ ಮತ್ತೆರಡು ಯೋಜನೆಗಳನ್ನು ಕೂಡಾ ಬಿಎಸ್ಎನ್ಎಲ್ ಪರಿಚಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+