• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

96 ರು ಪ್ರೀಪೇಯ್ಡ್ ಪ್ಯಾಕೇಜಿಗೆ 10 ಜಿಬಿ 4ಜಿ ಡೇಟಾ!

|

ಬೆಂಗಳೂರು, ಆಗಸ್ಟ್ 28: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ಎರಡು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ.

ಈ ಯೋಜನೆ ಮೂಲಕ ಪ್ರತಿದಿನ 10GB ಯಷ್ಟು 4G ಡೇಟಾ ಪಡೆಯಬಹ್ದು. 96 ರೂ. ಹಾಗೂ 236 ರೂಗಳ ಈ ಪ್ರೀಪೇಯ್ಡ್ ಪ್ಯಾಕೇಜ್‌ಗಳು ಕ್ರಮವಾಗಿ 28 ದಿನಗಳು ಹಾಗೂ 84 ದಿನಗಳ ವ್ಯಾಲಿಡಿಟಿ ಹೊಂದಿವೆ ಎಂದು ವರದಿಗಳು ಬಂದಿವೆ. ಈ ಬಗ್ಗೆ ಬಿಎಸ್ ಎನ್ ಎಲ್ ಇನ್ನು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಬಿಎಸ್ಎನ್ಎಲ್ ಇತ್ತೀಚೆಗೆ 1098 ರು ಗಳ 75 ದಿನಗಳ ವ್ಯಾಲಿಡಿಟಿಯುಳ್ಳ ಯೋಜನೆಯನ್ನು ಪರಿಷ್ಕರಿಸಿತ್ತು. ಇದರಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್, ಅನಿಯಮಿತ ಡೇಟಾ ಸಂಪರ್ಕ, 375 ಜಿಬಿ 75ದಿನಗಳ ವ್ಯಾಲಿಡಿಟಿಗೆ ಸಿಗಲಿದೆ, 100 ಎಸ್ಎಂಎಸ್ ಪ್ರತಿದಿನ ಕೂಡಾ ಇದರಲ್ಲಿ ಸೇರಿದೆ.

ಬಿಎಸ್ಎನ್ಎಲ್ ಎಸ್ ಟಿವಿ 96 ಯೋಜನೆ ಮೂಲಕ 280 GB ಡೇಟಾದ ಲಾಭವನ್ನು 96 ರೂ.ಗಳ ರೀಚಾರ್ಜ್ ಮೂಲಕ ಪಡೆಯಬಹುದು. 236 ರೂ.ಗಳ ರೀಚಾರ್ಜ್ ಜೊತೆಗೂ 840 GB ಗಳಷ್ಟು ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. ಸದ್ಯ ಈ ಹೊಸ ಯೋಜನೆಗಳನ್ನು ಮೊದಲಿಗೆ ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಿದ್ದು, ನಂತರ ಮುಂದಿನ ಟೆಲಿಕಾಂ ರಾಜ್ಯಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ.

English summary
BSNL has reportedly introduced two new prepaid plans that offer massive 10GB of 4G data per day. The new prepaid plans are priced at Rs. 96 and Rs. 236, and come with 28 days and 84 days validity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X