ಬಿಎಸ್ಎನ್ಎಲ್ ನಿಂದ ಅನಿಯಮಿತ ಪ್ರೀಪೇಯ್ಡ್ ಆಫರ್
ನವದೆಹಲಿ, ಮೇ 04: ಕಡಿಮೆ ದರದ ಪ್ರೀಪೇಯ್ಡ್ ಯೋಜನೆಗಳ ದರ ಸಮರಕ್ಕೆ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಕೂಡಾ ಇಳಿದಿದೆ. ಮಾರ್ಚ್ ತಿಂಗಳಿನಲ್ಲಿ ಆಕರ್ಷಕ ಯೋಜನೆ ಹೊರ ತಂದು ಸುಮಾರು 40 ಲಕ್ಷ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿತ್ತು. ಪೋರ್ಟಿಬಿಲಿಟಿ ಮೂಲಕ 12 ಲಕ್ಷ ಗ್ರಾಹಕರನ್ನು ಗಳಿಸಿದ್ದು ವಿಶೇಷ. ಈಗ 99 ರು ಯೋಜನೆ ಜನಪ್ರಿಯಗೊಳಿಸುತ್ತಿದೆ.
ಬಿ ಎಸ್ ಎನ್ ಎಲ್ ನ 99 ರೂಪಾಯಿ ಯೋಜನೆ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಆಗಿ ಜನಪ್ರಿಯತೆ ಗಳಿಸುತ್ತಿದೆ. ಫೋನ್ ಮಾಡಲು ಮಾತ್ರ ಮೊಬೈಲ್ ಬಳಸುವವರಿಗೆ ಇದು ಒಳ್ಳೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಯಾವುದೇ ಡೇಟಾ ಗ್ರಾಹಕರಿಗೆ ಸಿಗುವುದಿಲ್ಲ. ಆದರೆ, ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆಗಳನ್ನು ಮಾಡಬಹುದಾಗಿದೆ.

99 ರೂಪಾಯಿಯ ಈ ಪ್ಲಾನ್ 26 ದಿನಗಳ ವ್ಯಾಲಿಡಿಟಿ ಹೊಂದಿದೆ. ಬಿ ಎಸ್ ಎನ್ ಎಲ್ ನ ಇನ್ನೊಂದು ಯೋಜನೆ ಕೂಡ ಗ್ರಾಹಕರ ಮೆಚ್ಚುಗೆ ಗಳಿಸಿದೆ. 187 ರೂಪಾಯಿ ಪ್ಲಾನ್ ನಲ್ಲಿ ಪ್ರತಿದಿನ 1ಜಿಬಿ 3ಜಿ ಡೇಟಾ ಸಿಗಲಿದೆ. ಸ್ಥಳೀಯ ಹಾಗೂ ಎಸ್ ಟಿ ಡಿ ಕರೆಗಳು ಉಚಿತವಾಗಿದ್ದು ಪ್ರತಿದಿನ 100 ಎಸ್ ಎಂ ಎಸ್ ಸಿಗಲಿದೆ.
ಬಿ ಎಸ್ ಎನ್ ಎಲ್ ಇದಲ್ಲದೆ ಐಪಿಎಲ್ ರಿಚಾರ್ಜ್ ಪ್ಲಾನ್ ಕೂಡ ಬಿಡುಗಡೆ ಮಾಡಿದೆ. 258 ರೂಪಾಯಿ ಈ ಯೋಜನೆ 51 ದಿನಗಳ ವ್ಯಾಲಿಡಿಟಿ ಹೊಂದಿದೆ.












Click it and Unblock the Notifications