ಐಪಿಎಲ್ ಗಾಗಿ ಬಿಎಸ್ಸೆನ್ನೆಲ್ ನಿಂದ ವಿಶೇಷ ಆಫರ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 08: ಐಪಿಎಲ್ ಕ್ರಿಕೆಟ್ ಜ್ವರ ಇದೀಗ ಆರಂಭವಾಗಿದ್ದು, ಅಭಿಮಾನಿಗಳನ್ನು ಸೆಳೆಯಲು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿ.(BSNL) ಕೂಡಾ ಮುಂದಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್(IPL) ಗಾಗಿ ವಿಶೇಷ ಕೊಡುಗೆಯನ್ನು ನೀಡುತ್ತಿದೆ.

ರಿಲಯನ್ಸ್ ಜಿಯೋ ಈಗಾಗಲೇ ಕ್ರಿಕೆಟ್ ಅಭಿಮಾನಿಗಳಿಗೆ 251 ರೂ.ಗೆ 102 ಜಿ.ಬಿ. ಡೇಟಾ ನೀಡುವ ಯೋಜನೆ ಪ್ರಕಟಿಸಿದ್ದು, ಜನಪ್ರಿಯತೆ ಗಳಿಸುತ್ತಿದೆ.

BSNL IPL Pack Worth Rs. 248 Launched, Offers 3GB Data Per Day

ಇದಕ್ಕೆ ಪ್ರತಿಯಾಗಿ ಬಿ.ಎಸ್.ಎನ್.ಎಲ್.ನಿಂದ ಪ್ರೀಪೇಯ್ಡ್ ಗ್ರಾಹಕರಿಗೆ ಅನಿಯಮಿತ ಡೇಟಾ STV -248 ಕೊಡುಗೆ ಘೋಷಿಸಲಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3 ಜಿ.ಬಿ. ಡೇಟಾ ಸಿಗಲಿದೆ.

ಐ.ಪಿ.ಎಲ್. ಪಂದ್ಯಾವಳಿಗೆ ತಕ್ಕಂತೆ ಹೆಚ್ಚುವರಿ ಇಂಟರ್ನೆಟ್ ಡೇಟಾ ಪ್ರಕಟಿಸಲಾಗಿದ್ದು, 248 ರೂ.ಗೆ 153 ಜಿ.ಬಿ. ಡೇಟಾ ಕೊಡುಗೆ ಸಿಗಲಿದೆ. ಇದರ ವ್ಯಾಲಿಡಿಟಿ 51 ದಿನಗಳವರೆಗೆ ಇರಲಿದೆ. ಏಪ್ರಿಲ್ 07 ರಿಂದ ಏಪ್ರಿಲ್ 30ರ ತನಕ ಕ್ರೀಡಾ ಅನುಭವ ಪಡೆಯಬಹುದು.

ಬಿಎಸ್ಎನ್ಎಲ್ ನಿಂದ ಕಳೆದ ವಾರ 118ರುಗಳ ಪ್ರೀಪೇಯ್ಡ್ ಯೋಜನೆ ಪ್ರಕಟಿಸಿತ್ತು. ಇದರಂತೆ 28 ದಿನಗಳವರೆಗೂ 1ಜಿಬಿ 3ಜಿ/4ಜಿ ಡೇಟಾ ಸಿಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State-run telecom service provider BSNL has announced an IPL special recharge pack for its prepaid mobile subscribers. The new Rs. 248 plan has been unveiled to provide users with 153GB of data.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ