ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಎನ್‌ಎಲ್ ರೋಮಿಂಗ್ ಶುಲ್ಕದಲ್ಲಿ ಭಾರೀ ಕಡಿತ

|
Google Oneindia Kannada News

ನವದೆಹಲಿ, ಮೇ. 4: ಲ್ಯಾಂಡ್ ಲೈನ್ ಗ್ರಾಹಕರಿಗೆ ರಾತ್ರಿ ಉಚಿತ ಕರೆಯ ಕೊಡುಗೆ ನೀಡಿದ್ದ ಬಿಎಸ್ ಎನ್ ಎಲ್ ಇದೀಗ ಮತ್ತೊಂದು ಗಿಫ್ಟ್ ದಯಪಾಲಿಸಿದೆ. ದೇಶಾದ್ಯಂತ ರೋಮಿಂಗ್ ಶುಲ್ಕದಲ್ಲಿ ಭಾರೀ ಪ್ರಮಾಣದ ಇಳಿಕೆ ಮಾಡಿದೆ.

ಬಿಎಸ್‌ಎನ್‌ಎಲ್‌ ಮತ್ತು ಟಾಟಾ ಡೊಕೊಮೊ ಕಂಪನಿಗಳೂ ದೇಶಾದ್ಯಂತ ರೋಮಿಂಗ್‌ ಶುಲ್ಕದಲ್ಲಿ ಇಳಿಕೆ ಮಾಡಿವೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನದ ಅನ್ವಯ ಈ ಕ್ರಮ ಮೇ 1ರಿಂದಲೇ ಜಾರಿಗೆ ಬಂದಿದೆ. ರೋಮಿಂಗ್‌ ಶುಲ್ಕವನ್ನು ಶೇ. 40ರ ವರೆಗೂ ಇಳಿಕೆ ಮಾಡಲಾಗಿದ್ದು ಇದು ಪ್ರಿಪೇಯ್ಡ್‌ ಮತ್ತು ಪೋಸ್ಟ್ ಪೇಯ್ಡ್‌ಗೆ ಅನ್ವಯಿಸುತ್ತದೆ ಎಂದು ಬಿಎಸ್‌ಎನ್‌ಎಲ್‌ ತಿಳಿಸಿದೆ.[ಬಿಎಸ್ ಎನ್ ಎಲ್ ಗ್ರಾಹಕರಿಗೆ ಉಚಿತ ಕರೆ ಭಾಗ್ಯ]

bsnl

ಒಳಬರುವ ಕರೆಗಳಿಗೆ ಶೇ. 40ರಷ್ಟು, ಎಸ್‌ಟಿಡಿಗೆ ಶೇ. 23ರಷ್ಟು ಮತ್ತು ಸ್ಥಳೀಯ ಕರೆಗಳಿಗೆ ಶೇ. 20ರಷ್ಟು ರೋಮಿಂಗ್‌ ಶುಲ್ಕ ಕಡಿತ ಮಾಡಲಾಗಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಎಸ್‌ಎಂಎಸ್‌ ಶುಲ್ಕವನ್ನು ಶೇ. 75ರಷ್ಟು ತಗ್ಗಿಸಲಾಗಿದ್ದು ಗ್ರಾಹಕರು ಖುಷಿಪಡುವಂತಾಗಿದೆ.[ನೆಟ್ ನ್ಯೂಟ್ರಾಲಿಟಿ ಎಂದರೇನು? ನಾವೇನು ಮಾಡ್ಬೇಕು?]

ಟಾಟಾ ಡೊಕೊಮೊ ಸಹ ರೋಮಿಂಗ್‌ ಕರೆ ಮತ್ತು ಎಸ್‌ಎಂಎಸ್‌ ಶುಲ್ಕವನ್ನು ಶೇ. 75 ರವರೆಗೂ ತಗ್ಗಿಸಿದೆ. ಹೊರಹೋಗುವ ಸ್ಥಳೀಯ ಕರೆಗಳಿಗೆ ಒಂದು ನಿಮಿಷಕ್ಕೆ 80 ಪೈಸೆ ನಿಗದಿಮಾಡಲಾಗಿದೆ.‌ ಈ ಮೊದಲು ಒಂದು ರೂಪಾಯಿ ಇತ್ತು. ರೋಮಿಂಗ್‌ ವೇಳೆ ಎಸ್‌ಟಿಡಿ ಕರೆಗಳಿಗೆ ಒಂದು ನಿಮಿಷಕ್ಕೆ 1.50 ರೂ. ಇದ್ದ ದರ ಇದೀಗ 1.15 ರೂ, ಗೆ ಇಳಿದಿದೆ.

ಡೊಕೊಮೊದ ಸ್ಥಳೀಯ ಎಸ್‌ಎಂಎಸ್‌ ಒಂದು ರೂಪಾಯಿಯಿಂದ 25ಪೈಸೆಗೆ, ರಾಷ್ಟ್ರೀಯ ಎಸ್‌ಎಂಎಸ್‌ಗೆ 1.50 ರೂ ನಿಂದ 38 ಪೈಸೆಗೆ ಇಳಿಕೆಯಾಗಿದೆ.

English summary
BSNL has slashed roaming tariff by up to 40% for its prepaid and postpaid mobile connection with effect from May 1. The decision had been taken in the wake of telecom tariff order issued by Trai, the company said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X