ಗುಡ್ ನ್ಯೂಸ್: ಪ್ರತಿ ಷೇರಿಗೆ 83 ರೂಪಾಯಿ ಲಾಭಾಂಶ ಘೋಷಿಸಿದ ಬ್ರಿಟಾನಿಯಾ
ನವದೆಹಲಿ, ಆಗಸ್ಟ್ 17: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಲಾಭಗಳಿಸಿದ್ದ ಭಾರತದ ಬಿಸ್ಕತ್ತು ತಯಾರಕಾ ಕಂಪನಿ ಬ್ರಿಟಾನಿಯಾ ಇಂಡಸ್ಟ್ರೀಸ್ ತನ್ನ ಷೇರುದಾರರಿಗೆ ಸೋಮವಾರ ಭಾರಿ ಲಾಭಾಂಶವನ್ನು ನೀಡುವ ಸಿಹಿಸುದ್ದಿ ನೀಡಿದೆ.
ಬಿಸ್ಕಟ್ ತಯಾರಕ ತನ್ನ ಷೇರುದಾರರ ಪ್ರತಿ ಷೇರಿಗೆ 83 ರೂ.ಗಳ ಮಧ್ಯಂತರ ಲಾಭಾಂಶವನ್ನು ಅನುಮೋದಿಸಿದೆ ಎಂದು ಹೇಳಿದೆ. ಸೋಮವಾರ ನಡೆದ ಕಂಪನಿ ನಿರ್ದೇಶಕರ ಮಂಡಳಿ ಸಭೆಯಲ್ಲಿ, 2020-21ನೇ ಹಣಕಾಸು ವರ್ಷಕ್ಕೆ 1 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 83 ರೂಪಾಯಿಯಂತೆ ಮಧ್ಯಂತರ ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಅಂದರೆ ಕಂಪನಿಯು 1,997 ಕೋಟಿ ರೂ.ಗಳನ್ನು ಲಾಭಾಂಶವಾಗಿ ನೀಡಲಿದೆ, ಅದರಲ್ಲಿ 1,011 ಕೋಟಿ ರೂ. ಪ್ರವರ್ತಕರಿಗೆ ಮತ್ತು ಉಳಿದವು ಸಾರ್ವಜನಿಕ ಷೇರುದಾರರಿಗೆ ಹೋಗುತ್ತದೆ.

"ಷೇರುದಾರರ ಮಧ್ಯಂತರ ಲಾಭಾಂಶದ ಅರ್ಹತೆಯನ್ನು ನಿರ್ಧರಿಸುವ ಉದ್ದೇಶದಿಂದ ದಾಖಲೆಯ ದಿನಾಂಕವನ್ನು ಆಗಸ್ಟ್ 27, 2020 ಎಂದು ನಿಗದಿಪಡಿಸಲಾಗಿದೆ ಮತ್ತು ಮಧ್ಯಂತರ ಲಾಭಾಂಶವನ್ನು ಷೇರುದಾರರಿಗೆ ಪಾವತಿಸಲು ಪ್ರಸ್ತಾಪಿಸಲಾಗಿದೆ, ಅನ್ವಯವಾಗುವ ತೆರಿಗೆಗಳ ಕಡಿತ / ತಡೆಹಿಡಿಯುವಿಕೆಗೆ ಒಳಪಟ್ಟಿರುತ್ತದೆ" ಎಂದು ಬ್ರಿಟಾನಿಯಾ ನಿಯಂತ್ರಕದಲ್ಲಿ ತಿಳಿಸಿದೆ
ಬಿಎಸ್‌ಇಯಲ್ಲಿ ಬ್ರಿಟಾನಿಯಾ ಶೇ 1.77 ರಷ್ಟು ಏರಿಕೆ ಕಂಡು 3,869 ರೂಪಾಯಿಗೆ ತಲುಪಿದೆ.











Click it and Unblock the Notifications