ಬ್ರ್ಯಾಂಡ್ ಫ್ಯಾಕ್ಟರಿಗೆ 10 ವರ್ಷ, ಬೆಂಗಳೂರಲ್ಲಿ ಮತ್ತೊಂದು ಮಳಿಗೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 24 : ಬಟ್ಟೆ ಉದ್ಯಮದಲ್ಲಿ 10 ವರ್ಷ ಪೂರೈಸಿರುವ ಬ್ರ್ಯಾಂಡ್ ಫ್ಯಾಕ್ಟರಿ ಬೆಂಗಳೂರಿನ ಬನಶಂಕರಿಯಲ್ಲಿ 8ನೇ ಶಾಖೆಯನ್ನು ಆರಂಭಿಸಿದೆ. ನೂತನ ಮಳಿಗೆಯನ್ನು ನಟಿ ರಾಧಿಕಾ ಪಂಡಿತ್ ಬುಧವಾರ ಉದ್ಘಾಟಿಸಿದರು.

ಮಳಿಗೆ ಉದ್ಘಾಟಿಸಿ ಮಾತನಾಡಿದ ರಾಧಿಕಾ ಪಂಡಿತ್ ಅವರು, 'ಇಷ್ಟೊಂದು ವಿಭಿನ್ನ ರೀತಿಯ ಉಡುಪುಗಳ ಸಂಗ್ರಹ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದು ಸಂತಸದ ಸಂಗತಿ ಎಂದರು. ಈ ಮಳಿಗೆ ಜನರಿಗೆ ರಿಯಾಯಿತಿಗಳಲ್ಲಿ, ಉತ್ತಮ ಬ್ರಾಂಡ್ ಗಳನ್ನು ನೀಡುತ್ತದೆ' ಎಂದು ಹೇಳಿದರು.

brand factory

ಬ್ರ್ಯಾಂಡ್ ಫ್ಯಾಕ್ಟರಿಯ ಬಿಸಿನೆಸ್ ಹೆಡ್ ಸುರೇಶ್ ಸದ್ವಾನಿ ಮಾತನಾಡಿ, '17,000 ಚದರ ಅಡಿ ವ್ಯಾಪ್ತಿಯಲ್ಲಿ ಹರಡಿರುವ ಹೊಸ ಮಳಿಯಲ್ಲಿ ಪೆಪೆ, ರೇಮಂಡ್ಸ್, ಲೆವಿಸ್, ಲೀ ಸೇರಿದಂತೆ ಸುಮಾರು 200 ಬ್ರ್ಯಾಂಡ್ ಗಳ ಉತ್ಪನ್ನಗಳು ಇಲ್ಲಿವೆ' ಎಂದು ತಿಳಿಸಿದರು.

'ಪುರುಷರ ಫಾರ್ಮಲ್, ಕ್ಯಾಷುಯಲ್ಸ್, ಯುವಕರ ಉಡುಗೆಗಳು, ಮಹಿಳೆಯರ ಪಾಶ್ಚಾತ್ಯ, ಸಾಂಪ್ರದಾಯಿಕ ಮತ್ತು ಕ್ರೀಡಾ ಉಡುಗೆಗಳು, ಪಾದರಕ್ಷೆ, ಪರಿಕರಗಳು, ಮಕ್ಕಳ ದಿರಿಸು ಸೇರಿದಂತೆ 16ಕ್ಕೂ ಹೆಚ್ಚು ಪ್ರಕಾರದ ಉಡುಪು ಹಾಗೂ ಪರಿಕರಗಳನ್ನು ಗ್ರಾಹಕರು ಒಂದೇ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು' ಎಂದು ಹೇಳಿದರು.

'ಬ್ರ್ಯಾಂಡ್ ಫ್ಯಾಕ್ಟರಿ ಯಶಸ್ವಿಯಾಗಿ 10 ವರ್ಷ ಪೂರೈಸಿದ್ದು, ದೊಡ್ಡ ಮಟ್ಟದ ರಿಯಾಯಿತಿ ಸ್ಟೋರ್‌ ಅನ್ನು ಬನಶಂಕರಿಯಲ್ಲಿ ಆರಂಭಿಸಿದ್ದೇವೆ. ಬೆಂಗಳೂರಿನ ಗ್ರಾಹಕರು ಬ್ರ್ಯಾಂಡ್ ಪ್ರಜ್ಞೆ, ಫ್ಯಾಷನ್ ಪ್ರಜ್ಞೆ ಮತ್ತು ಮೌಲ್ಯ ಪ್ರಜ್ಞೆಯನ್ನು ಹೊಂದಿದವರಾಗಿದ್ದು, ಈ ಮಿಶ್ರ ಬೇಡಿಕೆಗಳನ್ನು ಹೊಂದಿರುವ ಜನರಿಗೆ ಈ ಮಳಿಗೆ ಇಷ್ಟವಾಗಲಿದೆ' ಎಂದರು.

ಎಲ್ಲಿದೆ ಮಳಿಗೆ? : ಬನಶಂಕರಿ 3ನೇ ಹಂತದಲ್ಲಿ ನೂತನ ಮಳಿಗೆ ಇದೆ. ಮೈಸೂರು ರಿಂಗ್ ರಸ್ತೆಯಲ್ಲಿ ಕಾಮಾಕ್ಯ ಬಸ್ ನಿಲ್ದಾಣದ ನಂತರ ಈ ಮಳಿಗೆ ಸಿಗುತ್ತದೆ.

-
-
-
-
-

ಬ್ರ್ಯಾಂಡ್ ಫ್ಯಾಕ್ಟರಿ ಕುರಿತು : ಬ್ರ್ಯಾಂಡ್ ಫ್ಯಾಕ್ಟರಿ ಫ್ಯೂಚರ್ ಗ್ರೂಪ್ ನಿಂದ ನಿರ್ವಹಿಸಲ್ಪಡುವ ಚಿಲ್ಲರೆ ಮಾರಾಟದ ಮಳಿಗೆಯ ಚೈನ್ ಆಗಿದೆ. ಸೆಪ್ಟೆಂಬರ್ 2006ರಲ್ಲಿ ಆರಂಭವಾದ ಈ ಚೈನ್ ಭಾರತದ 20 ನಗರಗಳಲ್ಲಿ 42 ಮಳಿಗೆಗಳನ್ನು ಹೊಂದಿದೆ. ಕರ್ನಾಟಕ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಒರಿಸ್ಸಾ, ಮುಂಬೈ ಸೇರಿದಂತೆ ಭಾರತದ 20 ಪ್ರಮುಖ ರಾಜ್ಯಗಳಲ್ಲಿ ಬ್ರ್ಯಾಂಡ್ ಫ್ಯಾಕ್ಟರ್ ಮಳಿಗೆಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's leading discount chain Brand Factory, a part of Future Group, gifted the 8th store to Bengaluru city at Banashankari 3rd stage. With this store launch, Brand Factory also completes 10 years of business. On Wednesday Kannada actress, Radhika Pandit inaugurated the new store.
Please Wait while comments are loading...